ಕುಮಟಾ: ಬೇಟೆಯಾಡಿದ ಮುಳ್ಳುಹಂದಿ ಬೈಕಿನಲ್ಲಿ ಸಾಗಾಟ, ಇಬ್ಬರ ಬಂಧನ

ಹೊನ್ನಾವರ: ಮುಳ್ಳುಹಂದಿ ಬೇಟೆಯಾಡಿ ಅದನ್ನು ಸಾಗಾಟ ಮಾಡುತ್ತಿದ್ದ ಇಬ್ಬರನ್ನು ಅರಣ್ಯಾಧಿಕಾರಿಗಳ ತಂಡವು ಕಾರ್ಯಾಚರಣೆ ನಡೆಸಿ ಬಂಧಿಸಿದೆ. ಮುಳ್ಳು ಹಂದಿಯ ಮೃತದೇಹವನ್ನು ವಶಪಡಿಸಿಕೊಂಡಿದ್ದಾರೆ.
ಓರ್ವ ಆರೋಪಿ ನಾಪತ್ತೆಯಾಗಿದ್ದು, ಶೋಧ ಕಾರ್ಯ ಮುಂದುವರಿದಿದೆ. ದೀವಳ್ಳಿಯ ಸಂಜಯ ದಿನ್ನಿ ನೊರೊನಾ (25) ಹಾಗೂ ಪ್ರಕಾಶ ಫ್ರಾನ್ಸಿಸ್ (39) ಎಂಬವರು ಬಂಧಿತ ಆರೋಪಿಗಳು. ಮುಳ್ಳುಹಂದಿ ಬೇಟೆಯಾಡಿ ಬೈಕಿನಲ್ಲಿ ಸಾಗಿಸುತ್ತಿರುವಾಗ ತಾಲೂಕಿನ ಕತಗಾಲ ವಲಯದ ಹರೀಟಾ ಗ್ರಾಮದ ಆನೆಗುಂದಿ ಕ್ರಾಸ್ ಹತ್ತಿರ ಇಬ್ಬರು ಆರೋಪಿಗಳನ್ನು ಬೈಕ್ ಹಾಗೂ ಮೃತ ಮುಳ್ಳು ಹಂದಿಯ ಸಮೇತ ವಶಕ್ಕೆ ಪಡೆಯಲಾಗಿದೆ. ತನಿಖೆ ನಡೆಯುತ್ತಿದೆ.
ಕಾರ್ಯಾಚರಣೆಯಲ್ಲಿ ಉಪ ವಲಯ ಅರಣ್ಯಾಧಿಕಾರಿಗಳಾದ ಬಿ. ಎನ್. ಬಂಕಾಪುರ, ವಸಂತಕುಮಾರ ಗೌಡ, ಹರಿಶ್ಚಂದ್ರ ಪಟಗಾರ, ಹಾಗೂ ಗಸ್ತು ಅರಣ್ಯ ಪಾಲಕರಾದ ಮಹೇಶ ಹವಳೆಮ್ಮನವರ, ದಿನೇಶ ಪಡುವಣಿ, ಗಣೇಶ ನಾಯಕ , ಸದಾಶಿವ ಪುರಾಣಿಕ ಮೊದಲಾದವರಿದ್ದರು.

3 / 5. 1

ನಿಮ್ಮ ಕಾಮೆಂಟ್ ಬರೆಯಿರಿ

advertisement