ಕುಮಟಾ | ಸಿಇಟಿ ಪರೀಕ್ಷೆ ವೇಳೆ ಜನಿವಾರ ತೆಗೆಸಿದ್ದನ್ನು ಖಂಡಿಸಿ ಪ್ರತಿಭಟನೆ ; ಇದು ಷಡ್ಯಂತ್ರ-ದಿನಕರ ಶೆಟ್ಟಿ

ಕುಮಟಾ : ಸಿಇಟಿ ಪರೀಕ್ಷೆ ವೇಳೆ ಜನಿವಾರ ತೆಗೆಸಿ ಅವಮಾನ ಮಾಡಿದ್ದನ್ನು ಖಂಡಿಸಿ ಉತ್ತರ ಕನ್ನಡದ ಕುಮಟಾದಲ್ಲಿ ಮಂಗಳವಾರ ಪ್ರತಿಭಟನೆ ನಡೆಯಿತು. ನಂತರ ತಪ್ಪಿತಸ್ಥರನ್ನು ತಕ್ಷಣವೇ ವಜಾಗೊಳಿಸಬೇಕು ಎಂದು ಒತ್ತಾಯಿಸಿ ಮಿನಿ ವಿಧಾನಸೌಧಕ್ಕೆ ತೆರಳಿ ತಹಶೀಲ್ದಾರರ ಮೂಲಕ ರಾಜ್ಯಪಾಲರು ಹಾಗೂ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಕುಮಟಾ ಶಾಸಕ ದಿನಕರ ಶೆಟ್ಟಿ ಾವರು, ಇದು ಸರ್ಕಾರದ ಬೇಜವಾಬ್ದಾರಿತನವನ್ನು ಖಂಡಿಸಿದರು. ಸಿಇಟಿ ಪರೀಕ್ಷೆ ವೇಳೆ ವಿದ್ಯಾರ್ಥಿಗಳ ಜನಿವಾರ ತೆಗೆಸಿದ್ದು ಅಕ್ಷಮ್ಯ ಅಪರಾಧ. ಜನಿವಾರ ಕೆಲವು ಸಮುದಾಯದವರಿಗೆ ಪವಿತ್ರ ಭಾವನೆ, ಸನಾತನ ಧರ್ಮ ಹಾಗೂ ಸಂಸ್ಕೃತಿ ಮೇಲೆ ಪ್ರಹಾರ ಮಾಡಲಾಗಿದೆ. ಹೀಗೆ ಮಾಡಿದಾಗ ಅದನ್ನು ಪವಿತ್ರ ಹಾಗೂ ದೀಕ್ಷೆ ಎಂದು ನಂಬಿದ್ದ ವಿದ್ಯಾರ್ಥಿಗಳ ಮನಸ್ಥಿತಿ ಏನಾಗಿರಬಹುದು ಎಂದು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ಕೇವಲ ಒಬ್ಬ ವಿದ್ಯಾರ್ಥಿ ಅಥವಾ ಒಂದು ಕೇಂದ್ರದಲ್ಲಿ ಇಂತಹ ಘಟನೆ ನಡೆದಿದ್ದರೆ ಅದು ಅಲ್ಲಿಯ ಅಧಿಕಾರಿಗಳ ತಪ್ಪು ಎನ್ನಬಹುದಿತ್ತು, ಆದರೆ ರಾಜ್ಯಾದ್ಯಂತ ಅನೇಕ ಜಿಲ್ಲೆಗಳಲ್ಲಿ ವಿದ್ಯಾರ್ಥಿಗಳ ಜನಿವಾರ ತೆಗೆಸಲಾಗಿದೆ ಅಥವಾ ಕತ್ತರಿಸಲಾಗಿದೆ.. ಇದೊಂದು ಸರ್ಕಾರದ ಷ್ಯಡ್ಯಂತ್ರವಾಗಿದೆ ಎಂದು ಆಕ್ರೋಶವ್ಯಕ್ತಪಡಿಸಿದರು.
ಸರ್ಕಾರವು ವ್ಯವಸ್ಥಿತವಾಗಿ ಹಿಂದೂಗಳ ಭಾವನೆಗೆ ಧಕ್ಕೆ ತರುತ್ತಿದೆ. ಇದನ್ನು ನಾನು ಖಂಡಿಸುತ್ತೇನೆ. ಸಾಮಾನ್ಯರ ಭಾವನೆಗೆ ತೊಂದರೆಯಾದಲ್ಲಿ ಅದರ ವಿರುದ್ಧದ ಹೋರಾಟಕ್ಕೆ ನನ್ನ ಸಹಕಾರ ಯಾವತ್ತೂ ಇರುತ್ತದೆ ಎಂದರು.

ಅಷ್ಟೇ ಅಲ್ಲದೆ ಹಿಂದೂ ಸಮಾಜಕ್ಕೆ ತೊಂದರೆಯಾದರೆ ಬಿಜೆಪಿ ಉಗ್ರ ಹೋರಾಟ ಮಾಡುತ್ತದೆ.ಇದು ಮಾನ ಮರ್ಯಾದೆ ಇಲ್ಲದ ಸರ್ಕಾರ ಎಂದು ಹರಿಹಾಯ್ದರು..
ಕಾರ್ಯಕ್ರಮ ದಲ್ಲಿ ಬಿಜೆಪಿ ಮಂಡಲ ಅಧ್ಯಕ್ಷ ಗಣಪತಿ ಭಟ್ಟ, ಗೊ ಬ್ಯಾಂಕ್ ಅಧ್ಯಕ್ಷರಾದ ಮುರಳಿಧರ ಪ್ರಭು, ರಾಮಚಂದ್ರಪುರ ಮಠದ ಕಾರ್ಯಕರ್ತರಾದ ವೀಣಾ ಭಟ್ಟ, ವೆಂಕಟೇಶ ನಾಯಕ, ಹಿಂದೂ ಸಂಘಟನೆಯ ಪ್ರಮುಖ  ಗಣೇಶ ಭಟ್ಟ ಹಾಗೂ ಅನೇಕ ಕಾರ್ಯಕರ್ತರು  ಪಾಲ್ಗೊಂಡು ಘಟನೆಯನ್ನು ತೀವ್ರವಾಗಿ ಖಂಡಿಸಿದರು.

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement