ಕಾಜಲ್ ಝಾ ಯಾರು..? ಇವಳ ₹ 100 ಕೋಟಿ ಮೌಲ್ಯದ ದೆಹಲಿ ಬಂಗಲೆ ಸೀಜ್‌ ಮಾಡಿದ ಪೊಲೀಸರು…

ನವದೆಹಲಿ: ಸ್ಕ್ರ್ಯಾಪ್ ಮೆಟಲ್ ಮಾಫಿಯಾ ಮತ್ತು ಗ್ಯಾಂಗ್‌ಸ್ಟರ್‌ ರವೀಂದ್ರ ನಗರ, ಅಲಿಯಾಸ್ ರವಿ ಕಾನಾ ವಿರುದ್ಧದ ಕಾರ್ಯಾಚರಣೆಯಲ್ಲಿ, ನೋಯ್ಡಾ ಪೊಲೀಸರು ದೆಹಲಿ-ಎನ್‌ಸಿಆರ್ ಪ್ರದೇಶದಲ್ಲಿ ₹200 ಕೋಟಿಗೂ ಹೆಚ್ಚು ಮೌಲ್ಯದ ಆತನ ಆಸ್ತಿಯನ್ನು ಯಶಸ್ವಿಯಾಗಿ ಸೀಲ್ ಮಾಡಿದ್ದಾರೆ.
ತಮ್ಮ ಪ್ರಯತ್ನಗಳನ್ನು ತೀವ್ರಗೊಳಿಸಿದ ನೋಯ್ಡಾ ಪೊಲೀಸರು ರವಿ ಕಾನಾ ತನ್ನ ಗೆಳತಿ ಕಾಜಲ್ ಝಾಗೆ ಉಡುಗೊರೆಯಾಗಿ ನೀಡಿದ ₹ 100 ಕೋಟಿ ಮೌಲ್ಯದ ದಕ್ಷಿಣ ದೆಹಲಿಯ ಐಷಾರಾಮಿ ಬಂಗಲೆ ಮೇಲೆ ದಾಳಿ ನಡೆಸಿ ಅದನ್ನು ಸೀಲ್‌ ಮಾಡಿದ್ದಾರೆ ಎಂದು ವರದಿಯಾಗಿದೆ.
ಕಾಜಲ್ ಝಾ ಕೆಲಸದ ಹುಡುಕಾಟದಲ್ಲಿದ್ದಾಗ ಆರಂಭದಲ್ಲಿ ರವಿ ಕಾನಾ ಬಳಿಗೆ ಬಂದರು. ನಂತರ, ಅವಳು ಕಾನಾ ಗ್ಯಾಂಗ್‌ನ ಪ್ರಮುಖ ಸದಸ್ಯಳಾದಳು ಮತ್ತು ಆತನ ಎಲ್ಲಾ ಬೇನಾಮಿ ಆಸ್ತಿಗಳ ವ್ಯವಹಾರ ಪುಸ್ತಕಗಳ ಮೇಲ್ವಿಚಾರಣೆಯ ಜವಾಬ್ದಾರಿ ವಹಿಸಿಕೊಂಡಳು.
ದಕ್ಷಿಣ ದೆಹಲಿಯ ಐಷಾರಾಮಿ ಪ್ರದೇಶವಾದ ನ್ಯೂ ಫ್ರೆಂಡ್ಸ್ ಕಾಲೋನಿಯಲ್ಲಿ ಸುಮಾರು ₹100 ಕೋಟಿ ಮೌಲ್ಯದ ಮೂರು ಅಂತಸ್ತಿನ ಬಂಗಲೆಯನ್ನು ಆತ ಕಾಜಲ್‌ ಝಾಗೆ ಉಡುಗೊರೆಯಾಗಿ ನೀಡಿದ್ದಾನೆ. ಬುಧವಾರ ಪೋಲೀಸ್ ದಾಳಿಗೆ ಮುಂಚಿತವಾಗಿ, ಕಾಜಲ್‌ ಝಾ ಮತ್ತು ಆಕೆಯ ಸಹಚರರು ಅಲ್ಲಿಂದ ಪಲಾಯನ ಮಾಡಿದ್ದಾರೆ. ನಂತರ ಪೊಲೀಸರು ಆಸ್ತಿಯನ್ನು ಸೀಲ್ ಮಾಡಿದರು.

ಪ್ರಮುಖ ಸುದ್ದಿ :-   ದಕ್ಷಿಣ ಬಂಗಾಳ ಕೊಲ್ಲಿ, ನಿಕೋಬಾರ್ ದ್ವೀಪಕ್ಕೆ ಮಾನ್ಸೂನ್‌ ಪ್ರವೇಶ ; ಈ ಬಾರಿ ವಾಡಿಕೆಗಿಂತ ಹೆಚ್ಚು ಮಳೆ

ರೀಬಾರ್ ಮತ್ತು ಸ್ಕ್ರ್ಯಾಪ್ ವಸ್ತುಗಳ ಅಕ್ರಮ ಸಂಗ್ರಹಣೆ ಮತ್ತು ಮಾರಾಟದಲ್ಲಿ ತೊಡಗಿರುವ 16 ಸದಸ್ಯರ ಗ್ಯಾಂಗ್‌ನ ಮುಖ್ಯಸ್ಥ ರವಿ ಕಾನಾ ಕಾನಾ ದೆಹಲಿ-ಎನ್‌ಸಿಆರ್ ಪ್ರದೇಶದಲ್ಲಿ ಕಾನೂನುಬಾಹಿರವಾಗಿ ಸ್ಕ್ರ್ಯಾಪ್ ವಸ್ತುಗಳ ಸ್ವಾಧೀನ ಮತ್ತು ಮಾರಾಟದ ಮೂಲಕ ಹಾಗೂ ವ್ಯಾಪಾರಿಗಳನ್ನು ಸುಲಿಗೆ ಮಾಡುವ ಮೂಲಕ ಅಪಾರ ಪ್ರಮಾಣದ ಸಂಪತ್ತನ್ನು ಗಳಿಸಿದ್ದ.
ಗ್ರೇಟರ್ ನೋಯ್ಡಾ ಮೃತ ಗ್ಯಾಂಗ್‌ಸ್ಟರ್ ಹರೇಂದ್ರ ಪ್ರಧಾನ ಎಂಬಾತನ ಸಹೋದರನಾಗಿರುವ ರವಿ ಕಾನಾ 2014 ರಲ್ಲಿ ಹರೇಂದ್ರ ಪ್ರಧಾನ ಸಾವಿನ ನಂತರ ಆತನ ವ್ಯವಹಾರದ ನಿಯಂತ್ರಣವನ್ನು ಪಡೆದರು. ಪ್ರಧಾನನ್ನು ಪ್ರತಿಸ್ಪರ್ಧಿ ಗ್ಯಾಂಗ್ ಕೊಂದಿತ್ತು. ನಂತರ ಕೊಲೆ ಬೆದರಿಕೆ ಬಂದ ಬಳಿಕ ಕಾನಾ ಪೊಲೀಸ್ ರಕ್ಷಣೆ ಪಡೆದಿದ್ದ.

ಎನ್‌ಡಿಟಿವಿ ವರದಿಯ ಪ್ರಕಾರ ರವಿ ಕಾನಾ ಮತ್ತು ಆತನ ಸಹಚರರ ವಿರುದ್ಧ ಅಪಹರಣ ಮತ್ತು ಕಳ್ಳತನದ ಆರೋಪಗಳು ಸೇರಿದಂತೆ 11 ಪ್ರಕರಣಗಳು ದಾಖಲಾಗಿವೆ.
ಈವರೆಗೆ ಆತನ ಗ್ಯಾಂಗಿನ ಆರು ಸದಸ್ಯರನ್ನು ಬಂಧಿಸಲಾಗಿದೆ. ಪೊಲೀಸರು ಗ್ಯಾಂಗ್ ಬಳಸಿದ ಹಲವಾರು ಸ್ಕ್ರ್ಯಾಪ್ ಗೋಡೌನ್‌ಗಳ ಮೇಲೆ ದಾಳಿ ನಡೆಸಿದ್ದಾರೆ, ಗ್ರೇಟರ್ ನೋಯ್ಡಾ ಮತ್ತು ನೋಯ್ಡಾದಾದ್ಯಂತ ಆಸ್ತಿಯನ್ನು ಸೀಲಿಂಗ್ ಮಾಡಿದ್ದಾರೆ. ಸದ್ಯ, ರವಿ ಕಾನಾ, ಆತನ ಗೆಳತಿ ಕಾಜಲ್ ಝಾ ಮತ್ತು ಇತರ ಗ್ಯಾಂಗ್ ಸದಸ್ಯರು ಪರಾರಿಯಾಗಿದ್ದಾರೆ.

ಪ್ರಮುಖ ಸುದ್ದಿ :-   ಭಾರತದ ಜೊತೆ ಪಾಕಿಸ್ತಾನದ ಕದನ ವಿರಾಮದ ಬಗ್ಗೆ ಚೀನಾ ಅಸಮಾಧಾನ? ಇದಕ್ಕೆ ಕಾರಣ ಏನು ಗೊತ್ತೆ...?

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement