ಮ್ಯಾನ್ಮಾರ್‌ನಲ್ಲಿ ಮತ್ತೆ ಸೈನ್ಯ ಕ್ರಾಂತಿ

ಯಾಂಗೊನ್: ನಾಗರಿಕ ನಾಯಕ ಆಂಗ್ ಸಾನ್ ಸೂಕಿ ಮತ್ತು ಅವರ ಸರ್ಕಾರದೊಂದಿಗೆ ಸಂಘರ್ಷಕ್ಕೆ ಇಳಿದಿದ್ದ  ಮ್ಯಾನ್ಮಾರ್ ಮಿಲಿಟರಿ ಸೋಮವಾರ ಆಡಳಿತವನ್ನು ಸೇನೆ ಹಿಡಿತಕ್ಕೆ ತೆಗೆದುಕೊಂಡಿದೆ.

ಕಳೆದ ನವೆಂಬರ್‌ನಲ್ಲಿ ನಡೆದ ರಾಷ್ಟ್ರೀಯ ಚುನಾವಣೆಯ ನಂತರ ಮೊದಲ ಸಂಸತ್ ಅಧಿವೇಶನ ನಡೆಯಬೇಕಿದ್ದ   ದಿನವೇ  ಸೇನೆಯು ಸೂಕಿ ಮತ್ತು ಇತರ ಉನ್ನತ ನಾಗರಿಕ ನಾಯಕರನ್ನು ವಶಕ್ಕೆ ಪಡೆಯಿತು.

2017ರಲ್ಲಿ ರೋಹಿಂಗ್ಯಾ ಅಲ್ಪಸಂಖ್ಯಾತರ ವಿರುದ್ಧದ ದೌರ್ಜನ್ಯದ ಬಗ್ಗೆ ಸೂ ಕಿ ಆಡಳಿತ  ಅಂತಾರಾಷ್ಟ್ರೀಯವಾಗಿ   ತೀವ್ರವಾಗಿ ಟೀಕೆಗೊಳಗಿದ್ದರೂ  ಮ್ಯಾನ್ಮಾರ್‌ನಲ್ಲಿ ಅಪಾರ ಜನಪ್ರಿಯ ವ್ಯಕ್ತಿಯಾಗಿದ್ದರು.

ಅವರ ನ್ಯಾಷನಲ್ ಲೀಗ್ ಫಾರ್ ಡೆಮಾಕ್ರಸಿ (ಎನ್‌ಎಲ್‌ಡಿ) ಪಕ್ಷವು ಕಳೆದ ವರ್ಷದ ಚುನೌಣೆಯಲ್ಲಿ ಭರ್ಜರಿ ಮುನ್ನಡೆ ಸಾಧಿಸಿತ್ತು.  ಆದರೆ ಕಳೆದ 60 ವರ್ಷಗಳಿಂದ ದೇಶವನ್ನು ಆಳಿದ ದೇಶದ ಸೈನ್ಯವು, ಚುನಾವಣೆಯು ಅಕ್ರಮಗಳಿಂದ ಕೂಡಿತ್ತು ಎಂದು ದೂರಿತ್ತು.

ಮ್ಯಾನ್ಮಾರ್‌ ಸೈನ್ಯದ ಮುಖ್ಯಸ್ಥ ಮಿನ್ ಆಂಗ್ ಹೇಲಿಂಗ್ ದೇಶವನ್ನುದ್ದೇಶಿಸಿ ಭಾಷಣ ಮಾಡಿದ ನಂತರ ಸರ್ಕಾರ ಮತ್ತು ಸೈನ್ಯದ ನಡುವೆ ಸಂಘರ್ಷ ಇನ್ನಷ್ಟು ಹೆಚ್ಚಾಯಿತು. ಕಳೆದ ವಾರ ಸೇನಾ ಟ್ಯಾಂಕ್‌ಗಳನ್ನು ವಾಣಿಜ್ಯ ಕೇಂದ್ರವಾದ ಯಾಂಗೊನ್, ರಾಜಧಾನಿ  ಇತರೆಡೆಗಳಲ್ಲಿ ಬೀದಿಗಳಲ್ಲಿ ನಿಯೋಜಿಸಲಾಗಿತ್ತು, ಜೊತೆಗೆ ಮಿಲಿಟರಿ ಪರ ಬೆಂಬಲಿಗರು ಚುನಾವಣಾ ಫಲಿತಾಂಶದ ವಿರುದ್ಧ ಪ್ರತಿಭಟನೆ ನಡೆಸಿದ್ದರು.

ಓದಿರಿ :-   1955ರ ಮರ್ಸಿಡಿಸ್-ಬೆಂಜ್ 300 SLR ಕಾರು ಮಾರಾಟವಾದ ದುಬಾರಿ ಕಾರು...ಮೊತ್ತ ಕೇಳಿದರೆ ಬೆಚ್ಚಿ ಬೀಳ್ತೀರಾ..!

ಸೋಮವಾರ ಸೇನೆಯು ತುರ್ತು ಪರಿಸ್ಥಿತಿ  ಘೋಷಿಸಿದೆ ಮತ್ತು 12 ತಿಂಗಳು ತಾವೇ ಅಧಿಕಾರ ನಡೆಸುವುದಾಗಿ ಹೇಳಿಕೊಂಡಿದೆ.

ಮೊದಲಿನಿಂದಲೂ ಸೈನ್ಯಾಡಳಿತ:1948 ರಲ್ಲಿ ಮಾಜಿ ವಸಾಹತುಶಾಹಿ ಶಕ್ತಿ ಬ್ರಿಟನ್‌ನಿಂದ ಸ್ವಾತಂತ್ರ್ಯ ಪಡೆದ ನಂತರ ಮ್ಯಾನ್ಮಾರ್‌ನ ಇತಿಹಾಸದ ಬಹುಪಾಲು ಸೈನ್ಯವೇ ಆಳಿದೆ.

ಜನರಲ್ ನೆ ವಿನ್ 1962 ರಲ್ಲಿ ನಾಗರಿಕ ಆಡಳಿತವನ್ನು ಉಚ್ಚಾಟಿಸಿದ್ದರು. ಅವರು 26 ವರ್ಷಗಳ ಕಾಲ ದೇಶವನ್ನು ನಡೆಸಿದರು ಆದರೆ ಆರ್ಥಿಕ ನಿಶ್ಚಲತೆ ಮತ್ತು ಸರ್ವಾಧಿಕಾರಿ ಆಡಳಿತದ ವಿರುದ್ಧ ರಾಷ್ಟ್ರವ್ಯಾಪಿ ಭಾರಿ ಪ್ರತಿಭಟನೆ ನಡೆಸಿದ ನಂತರ 1988ರಲ್ಲಿ ಅಧಿಕಾರದಿಂದ ಕೆಳಗಿಳಿದರು.

ಆದರೆ ದೇಶದಲ್ಲಿ ಕಾನೂನು ಸುವ್ಯವಸ್ಥೆಯನ್ನು ಮರುಸ್ಥಾಪಿಸುವ ನೆಪದಲ್ಲಿ  ಮಿಲಿಟರಿ ನಾಯಕರು ಕೆಲವು ವಾರಗಳ ನಂತರ ಮತ್ತೆ ಅಧಿಕಾರ ವಹಿಸಿಕೊಂಡರು.

2011ರಲ್ಲಿ ಜನ ಚಳವಳಿ  ನಾಯಕಿಯಾಗಿದ್ದ ಆಂಗ್ ಸಾನ್ ಸೂಕಿ ಹೋರಾಟಕ್ಕೆ ಮಣಿದ ಸೈನ್ಯವು ಚುನಾವಣೆ ನಡೆಸಲು ಒಪ್ಪಿತ್ತು. ಮುಂದೆ ಚುನಾವಣೆಯಲ್ಲಿ ಸೂಕಿ ಅವರು ಆಯ್ಕೆಯಾಗಿದ್ದರು. ಸೂಕಿ  ಅವರ ಸರ್ಕಾರವು 2015 ರ ಚುನಾವಣೆಯಲ್ಲಿ ಜಯಗಳಿಸಿದಾಗಿನಿಂದ ಸಂವಿಧಾನ  ತಿದ್ದುಪಡಿ ಮಾಡಲು ಪ್ರಯತ್ನಿಸುತ್ತಿದ್ದು,  ಅಲ್ಪ ಯಶಸ್ಸನ್ನೂ ಕಂಡಿತ್ತು.

ಓದಿರಿ :-   1955ರ ಮರ್ಸಿಡಿಸ್-ಬೆಂಜ್ 300 SLR ಕಾರು ಮಾರಾಟವಾದ ದುಬಾರಿ ಕಾರು...ಮೊತ್ತ ಕೇಳಿದರೆ ಬೆಚ್ಚಿ ಬೀಳ್ತೀರಾ..!

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ

/ 5. ಒಟ್ಟು ವೋಟುಗಳು

advertisement

ನಿಮ್ಮ ಕಾಮೆಂಟ್ ಬರೆಯಿರಿ