ಬಜೆಟ್‌ ಪ್ರಸ್ತಾವಕ್ಕೆ ಎಐಟಿಯುಸಿ ವಿರೋಧ

ಬೆಂಗಳೂರು: ಕೇಂದ್ರದ ಬಜೆಟ್‌  ಜನಸಮಾನ್ಯರ ಮೇಲೆ ಮತ್ತಷ್ಟು ತೆರಿಗೆಗಳನ್ನು ಹೊರಿಸಿದೆ.  ಈ
ಬಜೆಟ್ ಜನ ವಿರೋಧಿ ಹಾಗೂ ನಿರಾಶಾದಾಯಕ ಬಜೆಟ್ ಅಗಿದೆ ಎಂದು ಎಐಟಿಯುಸಿ ಹೇಳಿದೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಎಐಟಿಯುಸಿ ಪ್ರಧಾನ ಕಾರ್ಯದರ್ಶಿ ಎಂ.ಡಿ.ಹರಿಗೋವಿಂದ ಪಕೊರೋನಾ  ಹಾಗೂ ಇತರೆ ಕಾರಣಗಳಿಂದ ನಿರುದ್ಯೋಗ ಹೆಚ್ಚಾಗಿದ್ದು, ಸಾವಿರಾರು ಜನರು ಬೀದಿ ಪಾಲಾಗಿದ್ದಾರೆ, ಸರ್ಕಾರದ ತೆರಿಗೆ ಹೆಚ್ಚಳದ ಪ್ರಸ್ತಾಪದಿಂದ  ಆರ್ಥಿಕ  ಸಂಕಷ್ಟವನ್ನು ಎದುರಿಸಬೇಕಾಗುತ್ತದೆ, ಬಿಜೆಪಿ ನೇತೃತ್ವದ ಎನ್ಡಿಎ ಸರ್ಕಾರ ಆಧಿಕಾರಕ್ಕೆ ಬಂದರೆ  ಪೆಟ್ರೋಲ್, ಡಿಸೇಲ್, ಅಡುಗೆ ಅನಿಲ,ತೈಲೆಗಳ ಬೆಲೆಗಳನ್ನು ಕಡಿಮೆ ಮಾಡುವುದಾಗಿ ಅಶ್ವಾಸನೆಯನ್ನು ನೀಡಲಾಗಿತ್ತು ಹಾಗೂ ಬೆಲೆ ಏರಿಕೆ ವಿರುದ್ದ ಯುಪಿಎ ಸರ್ಕಾರದ ವಿರುದ್ದ ಪ್ರತಿಭಟನೆಯನ್ನು ನಡಿಸಿದ್ದರು. ಆದರೆ ಈಗ ಇದಕ್ಕೆ ವಿರುದ್ದವಾಗಿ ಪೆಟ್ರೋಲ್, ಅಡುಗೆ ಅನಿಲ,ಡಿಸೇಲ್, ಬೇಳೆಕಾಳು, ಅಡುಗೆ ಎಣ್ಣೆಗಳ ಮೇಲೆ ತೆರಿಗೆ  ವಿಧಿಸಿ ಬೆಲೆ ಏರಿಕೆಗೆ ಮತ್ತಷ್ಟು ಅವಕಾಶ
ಮಾಡಿಕೊಟ್ಟಿದ್ದಾರೆ, ಕೇಂದ್ರ ಸರ್ಕಾರದ ಬಜೆಟ್ ಕಾರ್ಪೋರೇಟ್ ಪರವಾಗಿದ್ದು ಸರ್ವಾಜನಿಕ ಉದ್ಯಮ   ಖಾಸಗೀಕರಣಗೊಳಿಸಲು ಹಾಗೂ ಅದರಲ್ಲಿ ವಿದೇಶಿ ಬಂಡವಾಳ ಹೂಡಲು ಅವಕಾಶ ಮಾಡಿಕೊಡಲು ಈ ಬಜೆಟ್ ನೆರವಾಗಿದೆ ಎಂದು ಹೇಳಿದ್ದಾರೆ.
ಕೃಷಿ ಕ್ಷೇತ್ರದ ಹೆಸರಿನಲ್ಲಿ ಜನಸಾಮನ್ಯರ ಮೇಲೆ ತೆರಿಗೆ ಹೆಚ್ಚಳ  ಮಾಡಲು ಉದ್ದೇಶಿಸಿರುವುದನ್ನು ಕೈ ಬಿಡಬೇಕು. ಹಾಗೂ ವರಮಾನ ತೆರಿಗೆಯನ್ನು ಸಹ  ಪುನರ್ ಪರಿಶೀಲಿಸಬೇಕೆಂದು ಎಐಟಿಯುಸಿ ಒತ್ತಾಯಿಸುತ್ತದೆ, ಕೇಂದ್ರ ಸರ್ಕಾರದ ಬಜೆಟ್ ವಿರುದ್ದ ಎಐಟಿಯುಸಿ, ಬೆಂಗಳೂರು ಜಿಲ್ಲಾ
ಮಂಡಳಿಯು ಪ್ರತಿಭಟಿಸಲು ತೀರ್ಮಾನಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಪ್ರಮುಖ ಸುದ್ದಿ :-   ನಿಮ್ಮವನಾಗಿದ್ದೆ...ಯಾವಾಗಲೂ ನಿಮ್ಮವನಾಗಿಯೇ ಇರ್ತೇನೆ..: ಬಿಜೆಪಿ ಟಿಕೆಟ್ ನಿರಾಕರಣೆ ನಂತ್ರ ಪಿಲಿಭಿತ್‌ ಜನತೆಗೆ ʼಹೃದಯಸ್ಪರ್ಶಿʼ ಪತ್ರ ಬರೆದ ವರುಣ ಗಾಂಧಿ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement