ಚಂಡಿಗಡ: ಕೃಷಿ ಕಾನೂನುಗಳ ಕುರಿತಂತೆ ದೇಶದ ರಾಜಧಾನಿ ದೆಹಲಿಯಲ್ಲಿ ನಡೆಯುತ್ತಿರುವ ರೈತರ ಆಂದೋಳನ ಹಾಗೂ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಪಂಜಾಬ್ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಮಂಗಳವಾರ ಸರ್ವಪಕ್ಷ ಸಭೆ ಕರೆದಿದ್ದಾರೆ.
advertisement
9535127775 / 9901837775 / 6364528715 / 08362775155 / https://icsmpucollege.com/
ಗಣರಾಜ್ಯೋತ್ಸವ ದಿನದಂದು ನಡೆದ ಹಿಂಸಾಚಾರದ ನಂತರ ಪೊಲೀಸರು ಪ್ರಕರಣ ದಾಖಲಿಸಿರುವ ರೈತರ ಪರವಾಗಿ ವಾದ ಮಂಡಿಸಲು ಪಂಜಾಬ್ ಸರ್ಕಾರ 70 ವಕೀಲರ ತಂಡವನ್ನು ನಿಯೋಜಿಸಿದೆ ಎಂದು ಮುಖ್ಯಮಂತ್ರಿ ಅಮರಿಂದರ್ಸೋ ಸಿಂಗ್ ಟ್ವೀಟ್ ಮಾಡಿದ್ದಾರೆ.
ದೆಹಲಿ ಪೊಲೀಸರು ಯಾವ ರೈತರ ಮೇಲೆ ಪ್ರಕರಣ ದಾಖಲಿಸಿದ್ದಾರೋ ಅವರಿಗೆ ತ್ವರಿತ ಕಾನೂನು ನೆರವು ನೀಡಲು ಪಂಜಾಬ್ ಸರ್ಕಾರ ಈಗಾಗಲೇ 70 ವಕೀಲರ ತಂಡ ನಿಯೋಜಿಸಿದ್ದು, ಹಾಗೂ ನಾಪತ್ತೆಯಾಗಿರುವ ,ರೈತರು ಸುರಕ್ಷಿತವಾಗಿ ಮನೆಗೆ ತಲುಪುವಂತೆ ನೋಡಿಕೊಳ್ಳುತ್ತೇನೆ. ಸಹಾಯಕ್ಕಾಗಿ ಕರೆ 112 , ”ಎಂದು ಸಿಂಗ್ ಟ್ವಿಟರ್‌ನಲ್ಲಿ ಹೇಳಿದ್ದಾರೆ.
ಸರ್ವಪಕ್ಷಗಳ ಸಭೆಯಲ್ಲಿ ಶಿರೋಮಣಿ ಅಕಾಲಿ ದಳವನ್ನು (ಎಸ್‌ಎಡಿ) ಪ್ರತಿನಿಧಿಸಲು ಸುಖ್‌ಬೀರ್ ಸಿಂಗ್ ಬಾದಲ್ ಮೂವರು ಸದಸ್ಯರ ಸಮಿತಿ ರಚಿಸಿದ್ದಾರೆ.
“ರೈತರು ತಮ್ಮ ಪ್ರಾಣವನ್ನೇ ಪಣಕ್ಕಿಟ್ಟು ಬೀದಿಗಿಳಿದಿದ್ದಾರೆ. ಆದರೆ ಕೇಂದ್ರವು ಅದರ ಬಗ್ಗೆ ಮಾತನಾಡುತ್ತಿಲ್ಲ, ರೈತರು ದಿನಗಟ್ಟಲೆ ದೆಹಲಿ ಹೊರವಲಯದಲ್ಲಿ ಚಳಿಯಲ್ಲಿ ಕುಳಿತು ಪ್ರತಿಭಟಿಸುತ್ತಿದ್ದಾರೆ. ಆದರೆ ಪ್ರಧಾನಿ ಮೋದಿ ಅಲ್ಲಿಗೆ ಹೋಗಿ ರೈತರನ್ನು ಭೇಟಿಯಾಗಿಲ್ಲ. ಪ್ರಧಾನಿ ಮೋದಿಯವರಿಗೆ ರೈತರನ್ನು ಭೇಟಿಯಾಗಲು ಸಾಧ್ಯವಿಲ್ಲವೇ ಎಂದು ಬಾದಲ್ ಪ್ರಶ್ನಿಸಿದ್ದಾರೆ.
ದೇಶದ ರೈತರು ಈ ಕಾನೂನುಗಳನ್ನು ಬಯಸುವುದಿಲ್ಲ. ಈ ಕಾನೂನುಗಳನ್ನು ಬೆಂಬಲಿಸಲು ಒಂದು ರೈತ ಸಂಘಟನೆಯೂ ಬಂದಿಲ್ಲ” ಎಂದು ಅವರು ಪ್ರತಿಪಾದಿಸಿದರು.
ನಿಮ್ಮ ಕಾಮೆಂಟ್ ಬರೆಯಿರಿ