ಸಭಾಪತಿ ಶೆಟ್ಟಿ ವಿರುದ್ಧ ಅವಿಶ್ವಾಸ ನಿರ್ಣಯ ಮಂಡನೆ

ಬೆಂಗಳೂರು: ವಿಧಾನ ಪರಿಷತ್ ಸಭಾಪತಿ ಕೆ. ಪ್ರತಾಪ್ ಚಂದ್ರ ಶೆಟ್ಟಿ ವಿರುದ್ಧ  ಮಂಗಳವಾರ  ಬಿಜೆಪಿ ಸದಸ್ಯ ಆಯನೂರು ಮಂಜುನಾಥ್ ಅವಿಶ್ವಾಸ ನಿರ್ಣಯ ಮಂಡಿಸಿದ್ದಾರೆ.

ಮಧ್ಯಾಹ್ನ ಕಲಾಪದಲ್ಲಿ ಪದಚ್ಯುತಿ ವಿಚಾರವನ್ನು ಸಭಾಪತಿ ಪ್ರತಾಪ್ ಚಂದ್ರ ಶೆಟ್ಟಿ ಅವರು ಪ್ರಸ್ತಾಪಿಸಿದರು. ಸದಸ್ಯ ಆಯನೂರು ಮಂಜುನಾಥ್ ಅವರಿಗೆ ನಿರ್ಣಯ ಮಂಡಿಸುವಂತೆ ಆಹ್ವಾನಿಸಿದರು.

ಬಿಜೆಪಿಯ ಸದಸ್ಯ ಆಯನೂರು ಮಂಜುನಾಥ್ ನಿರ್ಣಯ ಮಂಡಿಸುತ್ತಿದ್ದಂತೆಯೇ, ಇದರ ಪರವಾಗಿ ಇರುವ 10 ಸದಸ್ಯರು ಎದ್ದು ನಿಂತರೆ ನಿರ್ಣಯ ಚರ್ಚೆಗೆ ಅಂಗೀಕಾರವಾಗಲಿದೆ ಎಂದು ಸಭಾಪತಿಗಳು ತಿಳಿಸಿದರು. ಸದನದಲ್ಲಿದ್ದ ಬಿಜೆಪಿ ಹಾಗೂ ಜೆಡಿಎಸ್ ಸದಸ್ಯರು ಎದ್ದು ನಿಂತು ನಿರ್ಣಯವನ್ನು ಬೆಂಬಲಿಸಿದ ಹಿನ್ನೆಲೆ, ಸಭಾಪತಿಗಳು ಈ ನಿರ್ಣಯ ಚರ್ಚೆಗೆ ಅಂಗೀಕಾರವಾಗಿದೆ   ಚರ್ಚೆಗೆ ಸೂಕ್ತ ಸಮಯ ನಿಗದಿಪಡಿಸಿ ತಿಳಿಸುವುದಾಗಿ ಸಭಾಪತಿಗಳು ಭರವಸೆ ನೀಡಿದರು.

0 / 5. 0

ಶೇರ್ ಮಾಡಿ :
ಪ್ರಮುಖ ಸುದ್ದಿ :-   ಜುಲೈ 15ರಿಂದ ಮುಂಬೈ- ಹುಬ್ಬಳ್ಳಿ- ಮುಂಬೈ ಇಂಡಿಗೋ ವಿಮಾನ ಸೇವೆ ಪುನಾರಂಭ

ನಿಮ್ಮ ಕಾಮೆಂಟ್ ಬರೆಯಿರಿ

advertisement