ಇಂಡಿಯಾ ಟುಗೆದರ್‌: ಕೇಂದ್ರ ಸಚಿವರಿಂದ ಸೋಶಿಯಲ್‌ ಮೀಡಿಯಾ ಚಳವಳಿ

ನವ ದೆಹಲಿ: ದೆಹಲಿಯಲ್ಲಿ ನಡೆಯುತ್ತಿರುವ   ರೈತರ ಪ್ರತಿಭಟನೆಗೆ ‘ಅಂತಾರಾಷ್ಟ್ರೀಯ ಪ್ರಚೋದನೆ’ ಖಂಡಿಸಿ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಹೇಳಿಕೆ ನೀಡಿದ ಬೆನ್ನಲ್ಲೇ ಕೇಂದ್ರ ಸರ್ಕಾರದ ಎಲ್ಲ ಸಚಿವರು    ಈ ಹೇಳಿಕೆ ಖಂಡಿಸಿ  # ಇಂಡಿಯಾ ಟುಗೆದರ್ ಮತ್ತು # ಇಂಡಿಯಾ ಅಗೆನೆಸ್ಟ್‌ ಪ್ರೊಪಗೆಂಡ ಎಂಬ ಸಾಮಾಜಿಕ ಜಾಲತಾಣದ ಚಳವಳಿ ಆರಂಭಿಸಿದ್ದಾರೆ.

‌ ಇದು ಸಾಮಾಜಿಕ ಮಾಧ್ಯಮದ ವೇದಿಕೆಗಳಲ್ಲಿ ‘ಸರ್ಕಾರದ ಮಾನಹಾನಿ ಎದುರಿಸುವ ಸಾಮಾಜಿಕ ಮಾಧ್ಯಮ ಆಂದೋಲನವಾಗಿದೆ. ಭಾರತವನ್ನು ದುರ್ಬಲಗೊಳಿಸಲು ಅಂತಾರಾಷ್ಟ್ರೀಯ ಪಿತೂರಿ ಎಂದು   ಹೇಳಿರುವ ಸಚಿವರು ಇಂಥ ಟ್ವೀಟ್‌ಗಳಿಗೆ ಮಹತ್ವ ನೀಡಬೇಕಿಲ್ಲ ಎಂದು ಹೇಳಿದ್ದಾರೆ.

ದೇಶದಲ್ಲಿ ಅರಾಜಕತೆ ಸೃಷ್ಟಿಸ ಬಯಸುವ ಅಂತಾರಾಷ್ಟ್ರೀಯ ಪಿತೂರಿಕೋರರಿಂದ ನಾವು ಹತಾಶರಾಗುವುದಿಲ್ಲ. ಈ ಗ್ಯಾಂಗ್‌ನವರು  ಹೇಗೆ ಹಿಂಸಾಚಾರ ಮಾಡಿದರು  ಮತ್ತು ಗಣರಾಜ್ಯೋತ್ಸವದಂದು ದೇಶದ ರಾಷ್ಟ್ರೀಯ ಧ್ವಜವನ್ನು ಹೇಗೆ ಅಪವಿತ್ರಗೊಳಿಸಿದರು ಎಂಬುದನ್ನು  ನೋಡಿದ್ದೇವೆ. ಈಗ ನಾವು ಒಂದಾಗೋಣ ಮತ್ತು ಈ ಪಡೆಗಳನ್ನು ಸೋಲಿಸೋಣ” ಎಂದು ಗೃಹ ಖಾತೆ ರಾಜ್ಯ ಸಚಿವ ಜಿ. ಕಿಶನ್ ರೆಡ್ಡಿ ಟ್ವೀಟ್ ಮಾಡಿದ್ದಾರೆ.

‘ಟಿಪ್ಪಣಿ ಮಾಡಲು ಮುಂದಾಗುವ ಮೊದಲು ಸತ್ಯಗಳನ್ನು ಖಚಿತಪಡಿಸಿಕೊಳ್ಳಿ’ ಎಂದು ವಿದೇಶಾಂಗ ಸಚಿವಾಲಯವು ಹೇಳಿದ ಬೆನ್ನಲ್ಲೇ ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ ,  ಅಪಪ್ರಚಾರ ಮತ್ತು ನಕಲಿ ನಿರೂಪಣೆಗಳ ಮೂಲಕ ಭಾರತವನ್ನು ಕೆಣಕುವ ಎಲ್ಲಾ ಪ್ರಯತ್ನಗಳ ವಿರುದ್ಧ ನಾವು ಒಗ್ಗಟ್ಟಾಗಿ ನಿಲ್ಲುತ್ತೇವೆ ಎಂದು  ಟ್ವೀಟ್ ಮಾಡಿದ್ದಾರೆ.

ಪ್ರಮುಖ ಸುದ್ದಿ :-   ನಾಲ್ಕು ಬಾರಿ ಪ್ರೇಮಾಂಕುರ...ಆದರೂ ರತನ್ ಟಾಟಾ ಮದುವೆಯಾಗಲಿಲ್ಲ ಯಾಕೆ ...?!

“ಒಂದು ಸಾವಿರ ವರ್ಷಗಳಿಂದ ಭಾರತವನ್ನು ಆಕ್ರಮಣಕಾರರು  ಲೂಟಿ ಮಾಡಿದರು ಮತ್ತು ಆಳಿದರು. ಏಕೆಂದರೆ ಭಾರತ ಜೈಚಂದ್‌ ಅವರಂಥವರಿಂದ ದುರ್ಬಲವಾಗಿತ್ತು.  ಭಾರತವನ್ನು ಕೆಣಕಲು ಈ ಅಂತಾರಾಷ್ಟ್ರೀಯ ಅಪಪ್ರಚಾರದ ಹಿಂದೆ ಯಾರಿದ್ದಾರೆ ಎಂದು ನಾವು ಕೇಳಬೇಕಾಗಿದೆ” ಎಂದು ಕಿರೆನ್ ರಿಜಿಜು ಹೇಳಿದ್ದಾರೆ.

ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್  ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ, ಭಾರತವು  ಬಲಿಷ್ಠವಾಗಿ ಬೆಳೆಯುತ್ತಿದೆ.   ನಮ್ಮ ರೈತರಿಗೆ ಅನುಕೂಲವಾಗುವ ಯಾವ ಅವಕಾಶವನ್ನೂ ಬಿಡುವುದಿಲ್ಲ. ರೈತರು ಕೃಷಿ ಕಾನೂನು ಅಧ್ಯಯನ ಮಾಡಲಿ ಎಂದು ಹೇಳಿದ್ದಾರೆ.

ರೈಲ್ವೆ ಸಚಿವ ಪಿಯೂಷ್ ಗೋಯಲ್ “ಅಂತಾರಾಷ್ಟ್ರೀಯ ಶಕ್ತಿಗಳು ದೇಶವನ್ನು ದುರ್ಬಲಗೊಳಿಸಲು ಸಂಚು ರೂಪಿಸುತ್ತಿವೆ.  ನಾವು ಒಗ್ಗಟ್ಟಿನಿಂದ ಇರುವುದನ್ನು ಖಚಿತಪಡಿಸಿಕೊಳ್ಳಬೇಕು.  ವಿದೇಶಿ ಸಂಚಿನ ಯೋಜನೆ ಯಶಸ್ವಿಯಾಗುವುದಿಲ್ಲ” ಎಂದು ಟ್ವೀಟ್‌ನಲ್ಲಿ ಬರೆದಿದ್ದಾರೆ.

“ಕೃಷಿ ಕ್ಷೇತ್ರಕ್ಕೆ ಸಂಬಂಧಿಸಿದ ಸುಧಾರಣಾವಾದಿ ಶಾಸನವನ್ನು ಭಾರತದ ಸಂಸತ್ತು ಪೂರ್ಣ  ಚರ್ಚೆಯ ನಂತರ ಅಂಗೀಕರಿಸಿತು. ಕಾನೂನುಗಳ ಬಗ್ಗೆ ತಮ್ಮ ಆತಂಕ ವ್ಯಕ್ತಪಡಿಸಿದ ಕೆಲವು ರೈತರೊಂದಿಗೆ ಸರ್ಕಾರ ಈಗಾಗಲೇ 11 ಸುತ್ತಿನ ಮಾತುಕತೆ ನಡೆಸಿದೆ” ಎಂದು ಸಚಿವ ಹರ್ದೀಪ್ ಸಿಂಗ್ ಪುರಿ ಟ್ವೀಟ್ ಮಾಡಿದ್ದಾರೆ.

ಪ್ರಮುಖ ಸುದ್ದಿ :-   ಹರಿಯಾಣದಲ್ಲಿ ಶಾಕಿಂಗ್‌ ಸೋಲಿನ ನಂತರ ಕಾಂಗ್ರೆಸ್‌ ಕಡೆಗಣಿಸುತ್ತಿರುವ ಇಂಡಿಯಾ ಬಣದ ಮಿತ್ರಪಕ್ಷಗಳು...!

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement