ಟ್ವಿಟರ್‌ಗೆ ಕೇಂದ್ರದ ನೋಟಿಸ್‌

ನವದೆಹಲಿ: ರೈತರ ನರಮೇಧ ಎಂಬಂತೆ ತಪ್ಪು ಮಾಹಿತಿಯಿರುವ ಹ್ಯಾಷ್ ಟ್ಯಾಗ್ ಹೊಂದಿರುವ ಖಾತೆಗಳನ್ನು ತೆಗೆದು ಹಾಕುವಂತೆ ಕೇಂದ್ರ ಸರಕಾರ ಮೈಕ್ರೊ ಬ್ಲಾಗಿಂಗ್‌ ಸೈಟ್‌ ಟ್ವಿಟರ್‌ಗೆ ನೊಟೀಸ್‌ ನೀಡಿದ್ದು, ಆದೇಶ ಪಾಲನೆಗೆ ತಪ್ಪಿದರೆ ದಂಡ ವಿಧಿಸುವ ಎಚ್ಚರಿಕೆ ನೀಡಿದೆ.

ಎಲೆಕ್ಟ್ರಾನಿಕ್ಸ್‌ ಹಾಗೂ ಮಾಹಿತಿ ತಂತ್ರಜ್ಞಾನ ಸಚಿವಾಲಯ ಮಾಹಿತಿ ತಂತ್ರಜ್ಞಾನ-೨೦೦೦ರ ಕಾಯ್ದೆಯ ೬೯ ಎ ಅನುಚ್ಛೇದದಡಿ ತುರ್ತು ಮಧ್ಯಂತರ ಆದೇಶ ನೀಡಿದ್ದು, ೨೫೭ ಯುಆರ್‌ಎಲ್‌ ಹಾಗೂ ೧ ಹ್ಯಾಷ್‌ ಟ್ಯಾಗ್‌ ಬ್ಲಾಕ್‌ ಮಾಡುವಂತೆ ಸೂಚಿಸಿದೆ. ಯುಆರ್‌ಎಲ್‌ಗಳು ಹಾಗೂ ಹ್ಯಾಷ್‌ಟ್ಯಾಗ್‌ ರೈತರ ಪ್ರತಿಭಟನೆ ಬಗ್ಗೆ ಸಾರ್ವಜನಿಕರಲ್ಲಿ ತಪ್ಪು ಮಾಹಿತಿ ರವಾನೆಯಾಗುತ್ತಿದ್ದು, ಇದರಿಂದ ಹಿಂಸಾತ್ಮಕ ಚಟುವಟಿಕೆಗಳು ನಡೆಯುವ ಸಾಧ್ಯತೆಯಿದೆ ಎಂದು ತಿಳಿಸಿದೆ.

 

0 / 5. 0

ಶೇರ್ ಮಾಡಿ :
ಪ್ರಮುಖ ಸುದ್ದಿ :-   ದಾಂಪತ್ಯ ಜೀವನಕ್ಕೆ ಕಾಲಿಟ್ಟ ದಕ್ಷಿಣ ಭಾರತದ ಜನಪ್ರಿಯ ನಟರಾದ ಅದಿತಿ ರಾವ್ ಹೈದರಿ-ಸಿದ್ಧಾರ್ಥ

ನಿಮ್ಮ ಕಾಮೆಂಟ್ ಬರೆಯಿರಿ

advertisement