Deep Sidhu

ದೆಹಲಿ ಘರ್ಷಣೆ: ದೀಪ ಸಿಧು ಮಾಹಿತಿ ಕೊಟ್ಟವರಿಗೆ ೧ ಲಕ್ಷ ರೂ. ಬಹುಮಾನ

ನವ ದೆಹಲಿ:  ದೆಹಲಿಯಲ್ಲಿ ನಡೆದ ಗಣರಾಜ್ಯೋತ್ಸವದ ಸಂದರ್ಭದಲ್ಲಿ  ರೈತರ  ಪ್ರತಿಭಟನೆ ವೇಳೆ  ನಡೆದ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ನಟ, ಸಾಮಾಜಿಕ ಕಾರ್ಯಕರ್ತ ದೀಪ್ ಸಿಧು ಹಾಗೂ ಇತರ ಮೂವರ  ಮಾಹಿತಿ ನೀಡಿದವರಿಗೆ ಪೊಲೀಸರು ಒಂದು ಲಕ್ಷ ರೂ. ನಗದು ಬಹುಮಾನ ಘೋಷಿಸಿದ್ದಾರೆ.ಇದಲ್ಲದೆ ಬೂಟಾ ಸಿಂಗ್, ಸುಖ್‍ದೇವ್ ಸಿಂಗ್ ಹಾಗೂ ಮತ್ತಿಬ್ಬರ ಸುಳಿವು ನೀಡಿದವರಿಗೆ ಐವತ್ತು ಸಾವಿರ ರೂ.ಗಳ  ನಗದು ಬಹುಮಾನ ನೀಡಲಾಗುವುದು ಎಂದು ದೆಹಲಿ ಪೊಲೀಸ್ಅ‌ ಧಿಕಾರಿಗಳು ತಿಳಿಸಿದ್ದಾರೆ.

advertisement

ಐಸಿಎಸ್ ಮಹೇಶ ಪಿಯು ಸೈನ್ಸ್ ಕಾಲೇಜು, ಧಾರವಾಡ

2023-24 ನೇ ಸಾಲಿನ ಅಡ್ಮಿಷನ್ ಗಳು ಆರಂಭವಾಗಿವೆ

ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಿ ಮತ್ತು ವಿಚಾರಿಸಿ: 9535127775 , 9901837775 , 6364528715 , 0836-2775155

ಕೇಂದ್ರದ ನೂತನವಾಗಿ ರಚಿಸಿರುವ ಮೂರು ಕೃಷಿ ಕಾನೂನುಗಳನ್ನು ರದ್ದುಗೊಳಿಸುವಂತೆ ಕೋರಿ ಜ.೨೬ ರಂದು ರೈತ ಸಂಘಟನೆಗಳು ಹಮ್ಮಿಕೊಂಡಿದ್ದ ಕಿಸಾನ್ ಟ್ರ್ಯಾಕ್ಟರ್  ಪ್ರದರ್ಶನ ವೇಳೆ  ಪ್ರತಿಭಟನಾ ನಿರತ ಸಾವಿರಾರು ರೈತರು ಪೊಲೀಸರ ಮಧ್ಯೆ ಘರ್ಷಣೆ  ನಡೆದಿತ್ತು. ಪೊಲೀಸರನ್ನು ಗಾಯಗೊಳಿಸಿ ಬಹಳಷ್ಟು ಪ್ರತಿಭಟನಾಕಾರರು ಹಾಗೂ ಟ್ರ್ಯಾಕ್ಟರ್ ಚಾಲಕರು ಅಕ್ರಮವಾಗಿ ಕೆಂಪು ಕೋಟೆ ಆವರಣದೊಳಗೆ ನುಗ್ಗಿ ದಾಂಧಲೆ ನಡೆಸಿದ್ದರು.

ಕೆಲವು ಪ್ರತಿಭಟನಾಕಾರರು ಕತ್ತಿಗಳನ್ನು ಜಳಪಿಸುತ್ತಾ ಕೆಂಪು ಕೋಟೆ ಗುಮ್ಮಟಗಳನ್ನು ಏರಿ ಧಾರ್ಮಿಕ ಧ್ವಜಗಳನ್ನು ಆರೋಹಣ ಮಾಡಿದರು.   ಈ ಘಟನೆಗೆ ಸಂಬಂಧಪಟ್ಟಂತೆ ಪ್ರಮುಖ ಆರೋಪಿ ಸಿಧು ಹಾಗೂ ಇತರ ಮೂವರನ್ನು ಬಂಧಿಸಲು, ಸುಳಿವು ನೀಡಿದವರಿಗೆ ನಗದು ಬಹುಮಾನ ನೀಡುವುದಾಗಿ ಪೊಲೀಸರು ತಿಳಿಸಿದ್ದಾರೆ.

ಇಂದಿನ ಪ್ರಮುಖ ಸುದ್ದಿ :-   ಏಕದಿನ ಪಂದ್ಯದಲ್ಲಿ ಸತತ ಮೂರು ಸಲ ಸೊನ್ನೆಗೆ ಔಟಾದ ಭಾರತದ ಮೊದಲ ಬ್ಯಾಟರ್ ಆದ ಸೂರ್ಯಕುಮಾರ ಯಾದವ್ ; ಸಚಿನ್ ನೇತೃತ್ವದ ವಿಲಕ್ಷಣ ದಾಖಲೆಗಳ ಪಟ್ಟಿಗೆ ಸೇರ್ಪಡೆ

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ.

(1. ಚೆನ್ನಾಗಿಲ್ಲ. 2. ಸಾಧಾರಣ. 3. ಪರವಾಗಿಲ್ಲ. 4. ಉತ್ತಮ . 5. ಅತ್ಯುತ್ತಮ)

0 / 5. ಒಟ್ಟು ವೋಟುಗಳು 0

advertisement

ಸುಂದರವಾದ ಮತ್ತು ವಿಶಾಲವಾದ ಸ್ಥಳದಲ್ಲಿ ನಿಮ್ಮ ರಜಾದಿನಗಳನ್ನು ಆನಂದಿಸಿು

ಉತ್ತರ ಕರ್ನಾಟಕದ ಅತಿ ದೊಡ್ಡ ರೆಸಾರ್ಟ್ ಮತ್ತು ಅಡ್ವೆಂಚರ್ ಪಾರ್ಕ್

ನಿಮ್ಮ ಕಾಮೆಂಟ್ ಬರೆಯಿರಿ

ಕನ್ನಡಿ ನ್ಯೂಸ್ ನ ದಿನದ ಪ್ರಮುಖ ಸುದ್ದಿಗಳು ಮತ್ತು ಮಾಹಿತಿಗಾಗಿ
ವಾಟ್ಸಾಪ್ ಗ್ರೂಪ್ ಸೇರಿ
ಟೆಲಿಗ್ರಾಮ್ ಚಾನೆಲ್ ಸೇರಿ
ಫೇಸ್ ಬುಕ್ ಫಾಲೋ ಮಾಡಿ
ಗೂಗಲ್ ನ್ಯೂಸ್ ನಲ್ಲಿ ಸೇರಿ
ಟ್ವಿಟರ್ ನಲ್ಲಿ ಫಾಲೋ ಮಾಡಿ
advertisement