ದೇಶದ ರಕ್ಷಣೆ ವಿಚಾರದಲ್ಲಿ ನಮ್ಮ ಸಂಕಲ್ಪ ದೃಢ:ರಾಜನಾಥ

ಬೆಂಗಳೂರು:  ಕೆಲ ನರೆಹೊರೆಯ ರಾಷ್ಟ್ರಗಳ ಗಡಿರೇಖೆ ಬದಲಿಸುವ ದುರದೃಷ್ಟಕರ ಪ್ರಯತ್ನಗಳಿಗೆ ಭಾರತ ಸಾಕ್ಷಿಯಾಗಿದೆ ಎಂದು ಭಾರತದ ರಕ್ಷಣಾ ಸಚಿವ ರಾಜನಾಥ ಸಿಂಗ್‌ ಪೂರ್ವ ಲಡಾಕ್‌ನಲ್ಲಿ ಚೀನಾದೊಂದಿಗಿನ ದೀರ್ಘಕಾಲದ ಗಡಿರೇಖೆ ಉಲ್ಲೇಖಿಸಿ ಹೇಳಿದರು.

ಬೆಂಗಳೂರಿನಲ್ಲಿ ದ್ವೈವಾರ್ಷಿಕ ಏರೋ ಇಂಡಿಯಾ-೨೦೨೧ ಉದ್ಘಾಟಿಸಿ ಅವರು ಮಾತನಾಡಿದರು. ಭಾರತವು  ಗಡಿ ವಿಚಾರದಲ್ಲಿ  ಜಾಗರೂಕವಾಗಿದೆ ಮತ್ತು ದೇಶದ ಜನರು ಹಾಗೂ ದೇಶದ  ಸಮಗ್ರತೆಯನ್ನು ಯಾವುದೇ ಸಂದರ್ಭದಲ್ಲಿಯೂ ರಕ್ಷಿಸಲು  ಸಿದ್ಧವಾಗಿದೆ. ಈ ನಿಟ್ಟಿನಲ್ಲಿ ನಮ್ಮ ಸಂಕಲ್ಪವು ನಮ್ಮ ಬೆಳೆಯುತ್ತಿರುವ ರಕ್ಷಣಾ ಸಾಮರ್ಥ್ಯಗಳಿಂದ ಕಂಡುಬರುತ್ತದೆ.  ಏರೋ ಇಂಡಿಯಾ 21 ಈ ಬದ್ಧತೆಯನ್ನು ಪ್ರದರ್ಶಿಸುತ್ತದೆ ಎಂದು ಅವರು ಹೇಳಿದರು.

ಜನವರಿ 24 ರಂದು  ಭಾರತ ಹಾಗೂ ಚೀನಾ ಸೈನ್ಯಾಧಿಕಾರಿಗಳ  ನಡುವೆ ನಡೆದ ಗಡಿ ವಿರಾಮದ  ಕುರಿತಂತೆ ಒಂಬತ್ತನೇ ಸುತ್ತಿನ ಸೈನ್ಯ ಮಾತುತೆ ಸಂದರ್ಭದಲ್ಲಿ, ಭಾರತೀಯ ಸೇನೆ ಮತ್ತು ಚೀನಾ ಸೇನೆಯು ಗಡಿ ರೇಖೆ ಪ್ರದೇಶಗಳಿಂದ  ಆದಷ್ಟು ಬೇಗನೆ  ಪೂರ್ವ ಲಡಾಕ್‌ನಲ್ಲಿ ಮಾಡಿರುವ ತಮ್ಮ ತಮ್ಮ  ಸೈನ್ಯ ಜಮಾವಣೆಯನ್ನು ಹಿಂತೆಗೆದುಕೊಳ್ಳುವುದಕ್ಕೆ ಒಪ್ಪಿವೆ ಎಂದು ತಿಳಿಸಿದರು.

ಪ್ರಮುಖ ಸುದ್ದಿ :-   ಐಎಎಫ್‌ನ ಚೆನ್ನೈ ಏರ್‌ಶೋ : ಕನಿಷ್ಠ 5 ಪ್ರೇಕ್ಷಕರು ಸಾವು, ಡಿಹೈಡ್ರೇಶನ್‌ನಿಂದ ಸುಮಾರು 100 ಮಂದಿ ಆಸ್ಪತ್ರೆಗೆ ದಾಖಲು

ಅಲ್ಲದೆ, ಉಭಯ ದೇಶಗಳ ಸೈನ್ಯಾಧಿಕಾರಿಗಳು  ತಮ್ಮತಮ್ಮ ದೇಶದ ಆಡಳಿತದ ಪ್ರಮುಖ ಒಮ್ಮತವನ್ನು ಅನುಸರಿಸಲು, ಸಂವಾದ ಮತ್ತು ಸಮಾಲೋಚನೆಯ ಮೂಲಕ ಗಡಿ ವಿವಾದವನ್ನು  ಸೌಹಾರ್ದಯುತವಾಗಿ ಬಗೆಹರಿಸಿಕೊಳ್ಳುವ ನಿಟ್ಟಿನಲ್ಲಿ   10ನೇ ಸುತ್ತಿನ ಕಾರ್ಪ್ಸ್ ಕಮಾಂಡರ್-ಮಟ್ಟದ ಸಭೆಯಲ್ಲಿ ಒತ್ತು ನೀಡಲು ಒಪ್ಪಿವೆ  ಎಂದು ಜಂಟಿ ಹೇಳಿಕೆ ನೀಡಿವೆ.  ಭಾರತದ ದೃಢ ನಿಲುವು,  ಮಾಪನಾಂಕ ನಿರ್ಣಯ ಮತ್ತು ದೇಶದ ಸೈನಿಕರ ಅವಿರತ ಪ್ರಯತ್ನ ದೇಶದ  ಉತ್ತರದ ಗಡಿಗಳಲ್ಲಿ ಪರಿಸ್ಥಿತಿಯನ್ನು ಸ್ಥಿರಗೊಳಿಸಲು ಕಾರಣವಾಯಿತು ಎಂದು ಹೇಳಿದರು.

ಪೂರ್ವ ಲಡಾಖ್‌ನ ಎಲ್‌ಎಸಿ ಪ್ರಸ್ತುತ ಗಡಿ ಉದ್ವಿಗ್ನತೆಯ ಕೇಂದ್ರವಾಗಿದ್ದರೆ  ಹಿಮಾಚಲ ಪ್ರದೇಶ, ಉತ್ತರಾಖಂಡ, ಸಿಕ್ಕಿಂ ಅರುಣಾಚಲ ಪ್ರದೇಶದಲ್ಲಿ ಚೀನಾದ  ಗಡಿಯುದ್ದಕ್ಕೂ ಭಾರತೀಯ ಪಡೆಗಳು ಹೆಚ್ಚಿನ ಎಚ್ಚರಿಕೆಯ ಸ್ಥಿತಿಯಲ್ಲಿವೆ ಎಂದು ಹೇಳಿದ್ದಾರೆ.

ಕಳೆದ ತಿಂಗಳು ಉತ್ತರ ಸಿಕ್ಕಿಂನಲ್ಲಿ ನಡೆದ ಜಗಳದಲ್ಲಿ ಭಾರತೀಯ ಮತ್ತು ಚೀನಾದ ಸೈನಿಕರು ಭಾಗಿಯಾಗಿದ್ದರು, ಘರ್ಷಣೆಯಲ್ಲಿ ಎರಡೂ ಸೈನ್ಯದ ಸೈನಿಕರಿಗೆ ಸಣ್ಣಪುಟ್ಟ ಗಾಯಗಳಾಗಿವೆ, ಕಳೆದ ವರ್ಷ ಲಡಾಖ್ ವಲಯದಲ್ಲಿ ಭಾರತ-ಚೀನಾ ಗಡಿಯಲ್ಲಿ ಬಾರತ-ಚೀನಾ ಸೈನಿಕರ ಮಧ್ಯೆ ಘರ್ಷಣೆಯಾದಾಗಿನಿಂದ  ಚೀನಾ ಸೈನಿಕರು  ಈವರೆಗೆ ಕನಿಷ್ಠ ಐದು ಬಾರಿ ಘರ್ಷಣೆ ನಡೆಸಿದ್ದಾರೆ ಎಂದರು,

ಪ್ರಮುಖ ಸುದ್ದಿ :-   ಶಾರ್ಟ್ ಸರ್ಕ್ಯೂಟ್‌ನಿಂದ ಭಾರಿ ಬೆಂಕಿ : ಒಂದೇ ಕುಟುಂಬದ 7 ಮಂದಿ ಸಾವು

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement