ಬೆಂಗಳೂರು: ಯಾವುದೇ ಕೆಲಸ ಮಾಡದೆ ಬೋಗಸ್ ಬಿಲ್ ಮಾಡಿ ತೆಗೆದುಕೊಂಡಿದ್ದರೆ ಇಲಾಖೆಯ ಉನ್ನತಾಧಿಕಾರಿಗಳಿಂದ ತನಿಖೆ ಮಾಡಿಸಲಾಗುವುದು ಎಂದು ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ವಿಧಾನ ಪರಿಷತ್ತಿಗೆ ತಿಳಿಸಿದರು.
ಐಸಿಎಸ್ ಮಹೇಶ ಪಿಯು ಸೈನ್ಸ್ ಕಾಲೇಜು, ಧಾರವಾಡ
2023-24 ನೇ ಸಾಲಿನ ಅಡ್ಮಿಷನ್ ಗಳು ಆರಂಭವಾಗಿವೆ
ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಿ ಮತ್ತು ವಿಚಾರಿಸಿ: 9535127775 , 9901837775 , 6364528715 , 0836-2775155
ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ ಮೀಸಲಿಟ್ಟ ಅನುದಾನವನ್ನು ಆ ವರ್ಗದ ಮನೆಗಳಿಂದ ಹಿಡಿದು ಶಾಲೆ, ಮಾರುಕಟ್ಟೆ, ದೇವಾಲಯದವರೆಗೂ ರಸ್ತೆ ನಿರ್ಮಿಸಲು ಅವಕಾಶ ಕಲ್ಪಿಸಲಾಗಿದೆ. ಅವರು ಹೋಗಿ ಬರುವ ಶಾಲೆ, ದೇವಾಲಯ, ಮಾರುಕಟೆವರೆಗೂ ರಸ್ತೆ ನಿರ್ಮಿಸಿದರೆ ದುರುಪಯೋಗವಾಗುವುದಿಲ್ಲ. ಚರಂಡಿ ನಿರ್ಮಾಣದಲ್ಲೂ ನೀರು ಒಳ ಬರುವ, ಹೊರ ಹೋಗುವ ವ್ಯವಸ್ಥೆ ಇರಬೇಕು ಎಂದರು. ದ್ವೇಷದ ಭಾವನೆ ಬೇಡ ಎಂಬ ಕಾರಣಕ್ಕಾಗಿ ಈ ತೀರ್ಮಾನ ಕೈಗೊಳ್ಳಲಾಗಿದೆ ಎಂದರು ಎಂದು ಕಾರಜೋಳ ತಿಳಿಸಿದರು.
ಪ್ರಶ್ನೋತ್ತರ ವೇಳೆಯಲ್ಲಿ ಸದಸ್ಯರ ಅರವಿಂದಕುಮಾರ್ ಅರಳಿ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ಎಸ್ಸಿ-ಎಸ್ಟಿ ಅನುದಾನ ದುರ್ಬಳಕೆಯಾಗಬಾರದೆಂಬ ತಮ್ಮ ಕಳಕಳಿಗೆ ನನ್ನ ಸಹಮತ ಇದೆ ಎಂದರು.
ನಿಮ್ಮ ಕಾಮೆಂಟ್ ಬರೆಯಿರಿ