ಮಹಾತ್ಮ ಗಾಂಧಿ ಹೆಸರೂ ಎಂʼನಿಂದಲೇ ಆರಂಭ: ರಾಹುಲ್‌ಗೆ ಜಾವಡೆಕರ್‌ ತಿರುಗೇಟು

ನವ ದೆಹಲಿ: ಮಹಾತ್ಮ ಗಾಂಧಿಯವರ ಹೆಸರು ಸಹ ಎಂ ನಿಂದಲೇ ಆರಂಭವಾಗುತ್ತದೆ ಎಂದು ಕೇಂದ್ರ ಸಚಿವ ಪ್ರಕಾಶ ಜಾವಡೆಕರ ರಾಹುಲ್‌ ಗಾಂಧಿಗೆ ತಿರುಗೇಟು ನೀಡಿದ್ದಾರೆ.

ಜಗತ್ತಿನಲ್ಲಿರುವ  ಅನೇಕ ಸರ್ವಾಧಿಕಾರಿಗಳ   ಹೆಸರು ಎಂ ಇಂದ ಆರಂಭವಾಗುತ್ತದೆ ಎಂದು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಟ್ವೀಟ್‌  ಪ್ರಧಾನಿ ಮೋದಿ ಅವರಿಗೆ ಹೇಳುವ ಅರ್ಥದಲ್ಲಿತ್ತು.  ಮಾಡಿದ್ದರು. ಇದಕ್ಕೆ ಪ್ರತಿಕ್ರಿಯಿಸಿರುವ ಜಾವಡೆಕರ,

ಮಹಾತ್ಮ ಗಾಂಧಿ ಅವರ ಹೆಸರಾದ “ಮೋಹನ್‌ದಾಸ್” ಸಹ “ಎಂ”ನೊಂದಿಗೆ ಪ್ರಾರಂಭವಾಗುತ್ತದೆ ಎಂದು   ರಾಹುಲ್ ಗಾಂಧಿ ಅವರಿಗೆ ನೆನಪಿಸಿದ್ದಾರೆ.

ಇದಕ್ಕೆ ಬಿಜೆಪಿ ಅಧ್ಯಕ್ಷ ಅಧ್ಯಕ್ಷ ಜೆ.ಪಿ.ನಡ್ಡಾ ಪ್ರತಿಕ್ರಿಯಿಸಿ ‘ರಾಹುಲ್ ಗಾಂಧಿಯನ್ನು ಗಂಭೀರವಾಗಿ ಪರಿಗಣಿಸುವ ಅಗತ್ಯವಿದೆಯೇ ಎಂದು ಕೇಳಿದ್ದಾರೆ.

5 / 5. 1

ಶೇರ್ ಮಾಡಿ :
ಪ್ರಮುಖ ಸುದ್ದಿ :-   ವೀಡಿಯೊ..| ಮತದಾನದ ವೇಳೆ ಮತಗಟ್ಟೆಯಲ್ಲಿನ ವಿವಿಪ್ಯಾಟ್‌ ಯಂತ್ರವನ್ನು ನೆಲಕ್ಕೆ ಅಪ್ಪಳಿಸಿ ಧ್ವಂಸ ಮಾಡಿದ ಶಾಸಕ...!

ನಿಮ್ಮ ಕಾಮೆಂಟ್ ಬರೆಯಿರಿ

advertisement