ಕೊರೊನಾ ನಿವಾರಣೆಗೆ ಸಿಂಗಲ್ ಡೋಸ್ ಲಸಿಕೆ ..!

ನವ ದೆಹಲಿ: ಕೋವಿಡ್-19 ಸೋಂಕಿನಿಂದ ಚೇತರಿಸಿಕೊಂಡ ರೋಗಿಗಳಿಗೆ ನೀಡುತ್ತಿರುವ ಎರಡು ಶಾಟ್‍ಗಳ ಲಸಿಕೆ ಬದಲಿಗೆ ಸದ್ಯದಲ್ಲೇ ಬರಲಿರುವ ಎಂಆರ್‍ಎನ್‍ಎ ಲಸಿಕೆಯ ಒಂದೇ ಒಂದು ಶಾಟ್ ಮಾತ್ರ ಸಾಕಾಗಬಹುದು ಎಂದು ಸಂಶೋಧನಾ ನಿರತ ವಿಜ್ಞಾನಿಗಳು ಹೇಳಿದ್ದಾರೆ.
ನೊವೆಲ್ ಕೊರೊನಾ ವೈರಸ್‍ನಿಂದ ಸೋಂಕಿನಿಂದ ಚೇತರಿಸಿಕೊಂಡ ಜನರು ಮಾಡೆರ್ನಾ ಅಥವಾ ಫೈಜರ್‌ ಹೀಗೆ ಎರಡು ಕೋವಿಡ್-19 ಲಸಿಕೆ ತೆಗೆದುಕೊಳ್ಳುತ್ತಿದ್ದವವರಿಗೆ ಈಗ ಸಂತಸದ ಸುದ್ದಿ ಬಂದಿದೆ.
ಎರಡು ಡೋಸ್ ಲಸಿಕೆ ತೆಗೆದುಕೊಳ್ಳುವ ಬದಲು ಎಂಆರ್‍ಎನ್‍ಎಯ ಒಂದು ಶಾಟ್ ಸಾಕಾಗಬಹುದು ಎಂದು ಒಂದು ಅಧ್ಯಯನ ಹೇಳಿದೆ. ಅಮೆರಿಕದ ಎಲ್‍ಕ್ಹಾನ್ ಸ್ಕೂಲ್ ಆಫ್ ಮೆಡಿಸಿನ್‍ನ ಪ್ರೋರಿಯನ್ ಕ್ರಾಮ್ಮರ್ ಸೇರಿದಂತೆ ಸಂಶೋಧಕರು ನಡೆಸಿರುವ ಅಧ್ಯಯನದಲ್ಲಿ ಎಂಆರ್‍ಎನ್‍ಎ ಲಸಿಕೆಯ ಒಂದು ಡೋಸ್ ರೋಗದ ವಿರುದ್ಧ ಹೋರಾಡುತ್ತದೆ. ಇದು ಈಗಾಗಲೇ ಪ್ರತಿಕಾಯಶಕ್ತಿ ಹೊಂದಿರುವವರಲ್ಲಿ ತಕ್ಷಣವೇ ರೋಗನಿರೋಧಕ ಪ್ರತಿಕ್ರಿಯೆ ನೀಡುತ್ತದೆ ಹಾಗೂ ರೋಗನಿರೋಧಕ ಶಕ್ತಿ ಹೊಂದಿರುವ ವ್ಯಕ್ತಿಗಳಿಗೆ, ಮೊದಲ ಲಸಿಕೆ ಪ್ರಮಾಣವು ಬೂಸ್ಟರ್ ಡೋಸ್ ಆಗಿ ಪರಿಣಮಿಸಲಿದೆ.
ಎಂಆರ್‍ಎನ್‍ಎ ವ್ಯಾಕ್ಸಿನ್ ಕೊರೊನಾ ವೈರಾಣು ನಾಶಗೊಳಿಸಿ ಮಾನವ ಜೀವಕೋಶಗಳನ್ನು ಸಕ್ರಿಯಗೊಳಿಸಲು ಅನುವು ಮಾಡಿಕೊಡುತ್ತದೆ ವಿಜ್ಞಾನಿಗಳು ವಿಶ್ಲೇಷಿಸಿದ್ದಾರೆ.

 

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement