ನವ ದೆಹಲಿ: ಮೂರು ವಿವಾದಾತ್ಮಕ ಕೃಷಿ ಕಾನೂನುಗಳ ವಿರುದ್ಧ ರೈತರು ನಡೆಸುತ್ತಿರುವ ಪ್ರತಿಭಟನೆಯನ್ನು ನಿಭಾಯಿಸಿದ ರೀತಿಯ ಬಗ್ಗೆ ಪ್ರತಿಪಕ್ಷಗಳು ಗುರುವಾರ ಸರ್ಕಾರದ ಮೇಲೆ ತೀವ್ರ ವಾಗ್ದಾಳಿ ನಡೆಸಿದ್ದು ಬಿಜೆಪಿ ಮಂತ್ರಿಗಳು ಕೇವಲ ಸ್ವಗತವನ್ನು ನಂಬುತ್ತಾರೆ ಎಂದು ಕೇಂದ್ರದ ವಿರುದ್ಧ ಹರಿಹಾಯ್ದರು.
ರೈತರ ಪ್ರತಿಭಟನೆ ನಿಭಾಯಿಸಲು ಕಂದಕಗಳನ್ನು ತೆಗೆಯಲಾಗಿದೆ, ಮುಳ್ಳುತಂತಿಗಳನ್ನು ಹಾಕಲಾಗಿದೆ ಮತ್ತು ರೈತರನ್ನು ಗೆಲ್ಲಲು ಸೇತುವೆಗಳನ್ನು ನಿರ್ಮಿಸಬೇಕಾದವರು ದಾರಿಯಲ್ಲಿ ಮೊಳೆ ಜೋಡಿಸಿದ್ದಾರೆ ಎಂದು ಟೀಕಿಸಿದರು.
ಎಎಪಿ ರಾಜ್ಯಸಭಾ ಸದಸ್ಯ ಸಂಜಯ ಸಿಂಗ್, ರೈತರ ಮೇಲೆ ಲಾಠಿ ಚಾರ್ಜ್ ಮಾಡಲಾಗುತ್ತಿದೆ, ಅವರನ್ನು ದೇಶದ್ರೋಹಿಗಳು, ಭಯೋತ್ಪಾದಕರು ಮತ್ತು ಖಲಿಸ್ತಾನಿಗಳು ಎಂದು ಕರೆಯಲಾಗುತ್ತಿದೆ. ಇದು ಪರಿಸ್ಥಿತಿಯನ್ನು ನಿಭಾಯಿಸುವ ರೀತಿಯೇ ಎಂದು ರಾಜ್ಯಸಭೆಯಲ್ಲಿ ಪ್ರಶ್ನಿಸಿದರು.
ಮಾತುಕತೆ 11 ಬಾರಿ ನಡೆದಿವೆ, ಎಲ್ಲವೂ ವಿಫಲವಾಗಿದೆ. ಕಳೆದ 76 ದಿನಗಳಲ್ಲಿ ಸುಮಾರು 165 ರೈತರು ಪ್ರಾಣ ಕಳೆದುಕೊಂಡಿದ್ದಾರೆ ಎಂದು ಹೇಳಿರುವ ಸಿಂಗ್, “ಮೂರು ಕೃಷಿ ಕಾನೂನುಗಳನ್ನು ರದ್ದುಗೊಳಿಸಿ” ಎಂದು ಮೋದಿ ಸರ್ಕಾರಕ್ಕೆ ಮನವಿ ಮಾಡಿದರು.
ಪ್ರತಿಭಟನಾ ನಿರತ ರೈತರಿಗೆ ತಮ್ಮ ಬೆಂಬಲ ಸೂಚಿಸಿ ಮಾತನಾಡಿದ ತೃಣಮೂಲ ನಾಯಕ ಡೆರೆಕ್ ಒ’ಬ್ರೇನ್, ಕೇಂದ್ರ ಸರ್ಕಾರವು ಭಾರತವನ್ನು ಅನೇಕ ಹಂತಗಳಲ್ಲಿ ವಿಫಲಗೊಳಿಸುತ್ತಿದೆ, ಸರ್ಕಾರಕ್ಕೆ “ಅಹಂಕಾರ ಮುಖ್ಯವಾಗಿ ಸಂಸತ್ತಿನ ಪಾವಿತ್ರ್ಯ ಹಾಳು ಮಾಡುತ್ತಿದೆ ಎಂದು ಆರೋಪಿಸದರು.
advertisement
9535127775 / 9901837775 / 6364528715 / 08362775155 / https://icsmpucollege.com/
ನಿಮ್ಮ ಕಾಮೆಂಟ್ ಬರೆಯಿರಿ