ರೈತರ ಹೋರಾಟದ ಮೇಲೆ ರಾಜಕೀಯದ ಕಪ್ಪು ಛಾಯೆ

ನವದೆಹಲಿ: ಪ್ರತ್ಯೇಕ ಖಲಿಸ್ತಾನ ಹೋರಾಟಗಾರರ ದುರ್ವರ್ತನೆಯಿಂದ ರೈತ ಹೋರಾಟದ ದಿಕ್ಕು ತಪ್ಪಿರುವುದು ರೈತ ಹೋರಾಟಗಾರರ ಆಕ್ರೋಶಕ್ಕೆ ಕಾರಣವಾಗಿದ್ದು, ಇದು ಹೋರಾಟದ ಮೇಲೆ ರಾಜಕೀಯದ ಕರಿನೆರಳು ಬೀಳುವಂತೆ ಮಾಡಿದೆ.
ದೆಹಲಿಯ ಕೆಂಪುಕೋಟೆಯಲ್ಲಿ ಜನವರಿ ೨೬ರಂದು ನಡೆದ ಗಲಭೆ ರೈತ ಹೋರಾಟಗಾರರಲ್ಲಿ ಭಿನ್ನಾಭಿಪ್ರಾಯ ಮೂಡಿಸಿದೆ. ಮೂರು ನೂತನ ಕೃಷಿ ಮಸೂದೆಗಳನ್ನು ಖಂಡಿಸಿ ರೈತರು ನಡೆಸುತ್ತಿರುವ ಹೋರಾಟವನ್ನು ಹಾಳುಗೆಡವಲು ಉದ್ದೇಶಪೂರ್ವಕವಾಗಿ ಖಲಿಸ್ತಾನ ಪ್ರತ್ಯೇಕ ಖಲಿಸ್ತಾನ ಚಳವಳಿಗಾರರು ಇದರಲ್ಲಿ ಸೇರಿಕೊಂಡಿದ್ದಾರೆ ಎಂಬ ಬಗ್ಗೆ ಚರ್ಚೆ ಆರಂಭಗೊಂಡಿದೆ. ಹಿಂಸಾಕೃತ್ಯಗಳನ್ನು ನೋಡಿದರೆ ರೈತ ಹೋರಾಟವನ್ನು ಹಾಳುಗೆಡವಲು ನಡೆದಿದೆ ಎಂಬುದು ನಿಚ್ಚಳವಾಗುತ್ತದೆ. ಕೆಲವರು  ಹೋರಾಟದ ದಿಸೆ ತಪ್ಪಿಸುವ ಉದ್ದೇಶ ಹೊಂದಿದ್ದರು ಎಂಬುದು ರೈತ ಹೋರಾಟಗಾರರ ಆಪಾದನೆ.
ವಿದೇಶಗಳಲ್ಲಿ ವಾಸಿಸುವ ಪಂಜಾಬಿಗಳು ಹೋರಾಟಕ್ಕೆ ದೊಡ್ಡ ಮಟ್ಟದಲ್ಲಿ ದೇಣಿಗೆ ನೀಡಿದ್ದಾರೆ. ಅವರಲ್ಲಿ ಹೆಚ್ಚಿನವರು ಕೆನಡಾ ಹಾಗೂ ಅಮೆರಿಕದಲ್ಲಿದ್ದಾರೆ. ಅವರಲ್ಲಿ ಅನೇಕರು ಪ್ರತ್ಯೇಕ ಖಲಿಸ್ತಾನ್‌ ಬಗ್ಗೆ ಒಲವು ಹೊಂದಿದವರು,  ಹೀಗಾಗಿ ಈ ಹೋರಾಟದಲ್ಲಿ  ಖಾಲಿಸ್ತಾನ ಬೇಕೆನ್ನುವ ಕೆಲವರು ಸೇರಿಕೊಂಡಿದ್ದಾರೆ. ಹೋರಾಟಗಾರರು ಸ್ಪಷ್ಟ ಉದ್ದೇಶದೊಂದಿಗೆ ಹೋರಾಟ ಆರಂಭಿಸುವಲ್ಲಿ ಯಶಸ್ವಿಯಾದರೂ  ಅವರಿಗೆ ಖಲಿಸ್ತಾನ ಪ್ರತ್ಯೇಕತಾವಾದಿಗಳನ್ನು ಕೆಕೆಲವರನ್ನು ಪ್ರತಿಬಟನಾ ಸ್ಥಳಕ್ಕೆ ಬರದಂತೆ ತಡೆಯಲು ಸಾಧ್ಯವಾಗಲಿಲ್ಲ.
ದೆಹಲಿಯಲ್ಲಿ ಹೋರಾಟ ಹಿಂಸಾತ್ಮಕ ಸ್ವರೂಪ ಪಡೆದ ನಂತರ ರಾಜಕೀಯ ಪಕ್ಷಗಳ ಮಧ್ಯೆ ಆರೋಪ-ಪ್ರತ್ಯಾರೋಪ ಪರ್ವ ಶುರುವಾಗಿದೆ. ಆಡಳಿತ ಪಕ್ಷದವರೇ ರೈತರ ಹೋರಾಟವನ್ನು ಒಡೆಯಲು ಹಿಂಸಾತ್ಮಕ ಚಟುವಟಿಕೆ ನಡೆಸಿದ್ದಾರೆ ಎಂದು ಕಾಂಗ್ರೆಸ್‌ ಆರೋಪ ಮಾಡಿದರೆ, ಇದು ದೇಶವಿರೋಧಿ “ತುಕಡೆ ಗ್ಯಾಂಗ್”‌ ಕೃತ್ಯ ಎಂಬುದು ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ಪ್ರತ್ಯಾರೋಪ.

advertisement

ಸುಂದರವಾದ ಮತ್ತು ವಿಶಾಲವಾದ ಸ್ಥಳದಲ್ಲಿ ನಿಮ್ಮ ರಜಾದಿನಗಳನ್ನು ಆನಂದಿಸಿು

ಉತ್ತರ ಕರ್ನಾಟಕದ ಅತಿ ದೊಡ್ಡ ರೆಸಾರ್ಟ್ ಮತ್ತು ಅಡ್ವೆಂಚರ್ ಪಾರ್ಕ್

ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಿ ಮತ್ತು ವಿಚಾರಿಸಿ: 98867 84189

ಇಂದಿನ ಪ್ರಮುಖ ಸುದ್ದಿ :-   ದೆಹಲಿ ಗುರುಗ್ರಾಮದಲ್ಲಿ ಬೈಕನ್ನು 4 ಕಿಮೀ ಎಳೆದೊಯ್ದ ಕಾರು; ಎಳೆದೊಯ್ಯುವಾಗ ರಸ್ತೆಯಲ್ಲಿ ಬೆಂಕಿ ಕಿಡಿ ಹಾರುವ ವೀಡಿಯೊ ವೈರಲ್ | ವೀಕ್ಷಿಸಿ

ರೈತ ಮುಖಂಡರು ಹಾಗೂ ಕೇಂದ್ರ ಸರಕಾರದ ಮಧ್ಯೆ ಸುತ್ತಿನ ಮಾತುಕತೆ ನಡೆದಿದ್ದರೂ ಈವರೆಗೂ ಯಾವುದೂ ಇತ್ಯರ್ಥವಾಗಿಲ್ಲ. ರೈತರು ಶಾಂತಿಯುತ ಹೋರಾಟವನ್ನು ಮುಂದುವರೆಸಿದ್ದಾರೆ. ಜನವರಿ ೨೬ರ ಅವಘಡದ ನಂತರ ಕೆಲವು ರೈತ ಸಂಘಟನೆಗಳು ಹೋರಾಟದಿಂದ ಹಿಂದೆ ಸರಿದಿವೆ. ಪ್ರತ್ಯೇಕವಾಗಿ ಹೋರಾಟ ಮಾಡುವುದಾಗಿ ಹೇಳಿಕೊಂಡಿವೆ. ಕೆಲ ಸಂಘಟನೆಗಳಂತೂ ನವಂಬರ್ ವರೆಗೂ ಹೋರಾಟ ಮುಂದುವರೆಸುವುದಾಗಿ ಅಬ್ಬರಿಸಿವೆ. ರೈತ ಸಂಘಗಳ ಬೃಹತ್‌ ಸಂಘಟನೆ ಒಡೆದಿರುವುದು ಹೋರಾಟದ ತೀವ್ರತೆಯನ್ನು ಕಡಿಮೆ ಮಾಡಿದೆ. ಹೋರಾಟ ಮುಂದೆ ಯಾವ ರೂಪ ಪಡೆಯಲಿದೆ ಎಂಬುದು ರೈತ ಮುಖಂಡರು ಹಾಗೂ ರಾಜಕೀಯ ಪಕ್ಷಗಳನ್ನು ಅವಲಂಬಿಸಿದೆ.

ಕನ್ನಡಿ ನ್ಯೂಸ್ ನ ದಿನದ ಪ್ರಮುಖ ಸುದ್ದಿಗಳು ಮತ್ತು ಮಾಹಿತಿಗಾಗಿ
ವಾಟ್ಸಾಪ್ ಗ್ರೂಪ್ ಸೇರಿ
ಟೆಲಿಗ್ರಾಮ್ ಚಾನೆಲ್ ಸೇರಿ
ಫೇಸ್ ಬುಕ್ ಫಾಲೋ ಮಾಡಿ
ಗೂಗಲ್ ನ್ಯೂಸ್ ನಲ್ಲಿ ಸೇರಿ
ಟ್ವಿಟರ್ ನಲ್ಲಿ ಫಾಲೋ ಮಾಡಿ
advertisement

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ.

(1. ಚೆನ್ನಾಗಿಲ್ಲ. 2. ಸಾಧಾರಣ. 3. ಪರವಾಗಿಲ್ಲ. 4. ಉತ್ತಮ . 5. ಅತ್ಯುತ್ತಮ)

/ 5. ಒಟ್ಟು ವೋಟುಗಳು

ನಿಮ್ಮ ಕಾಮೆಂಟ್ ಬರೆಯಿರಿ

advertisement