ಶಶಿಕಲಾ ಸ್ವಾಗತಕ್ಕೆ ನಿಂತರೆ ಎಐಎಡಿಎಂಕೆಯಿಂದ ವಜಾ

 

ಚೆನ್ನೈ: ತಮಿಳುನಾಡು ಮಾಜಿ ಮುಖ್ಯಮಂತ್ರಿ ದಿವಂಗತ ಜೆ.ಜಯಲಲಿತಾ ಅವರ ಆಪ್ತೆ ಶಶಿಕಲಾ ಅವರ ಬೆಂಬಲಿಗರ ಮೇಲೆ ಎಐಎಡಿಎಂಕೆ ಕ್ರಮ ಕೈಗೊಳ್ಳಲಾರಂಭಿಸಿದೆ.
.ಶಶಿಕಲಾ ಬೆಂಗಳೂರು ಜೈಲಿನಿಂದ ಬಿಡುಗಡೆಯಾದಾಗಿನಿಂದ, ಅವರನ್ನು ‘ಪಕ್ಷದ ಪ್ರಧಾನ ಕಾರ್ಯದರ್ಶಿ’ ಎಂದು ಸ್ವಾಗತಿಸುವ ಪೋಸ್ಟರ್‌ಗಳನ್ನು ಹಾಕಿದ್ದಕ್ಕಾಗಿ ಪಕ್ಷವು ಹಲವಾರು ಕಾರ್ಯಕರ್ತರನ್ನು ವಜಾ ಮಾಡಿದೆ. ಪಕ್ಷವು 2017 ರಲ್ಲಿ ಶಶಿಕಲಾ ಅವರನ್ನು ಹೊರಹಾಕಿತ್ತು.
ಅಕ್ರಮ ಆಸ್ತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಶಶಿಕಲಾ ಅವರು ನಾಲ್ಕು ವರ್ಷಗಳ ಕಾಲ ಬೆಂಗಳೂರು ಪರಪ್ಪನ ಕಾರಾಗೃಹದಲ್ಲಿ ನಾಲ್ಕು ವರ್ಷ ಜೈಲು ಶಿಕ್ಷೆ ಅನುಭವಿಸಿದರು. ಈಗ ಜೈಲಿನಿಂದ ಬಿಡುಗಡೆಯಾಗಿರುವ ಶಶಿಕಲಾ ಅವರು, ಫೆಬ್ರವರಿ 7 ರಂದು ಚೆನ್ನೈಗೆ ಮರಳಲಿದ್ದಾರೆ.
ತಮಿಳುನಾಡು ಮುಖ್ಯಮಂತ್ರಿ ಎಡಪಡ್ಡಿ ಪಳನಿಸ್ವಾಮಿ ಅವರು ಪ್ರಧಾನಿ ನರೇಂದ್ರ ಮೋದಿಯವರ ಭೇಟಿಯ ನಂತರ ಎಐಡಿಎಂಕೆ ಪಕ್ಷವು ಶಶಿಕಲಾ ಅವರನ್ನು ಪುನಃ ಪಕ್ಷಕ್ಕೆ ಸೇರಿಸಿಕೊಳ್ಳುವುದಿಲ್ಲ ಎಂಬುದನ್ನು ಸ್ಪಷ್ಟಪಡಿಸಿದ್ದಾರೆ.ಇದನ್ನು ಅನುಸರಿಸಿ, ಎಐಎಡಿಎಂಕೆ ಪಕ್ಷದ ಸದಸ್ಯರಿಗೆ ಶಶಿಕಲಾ ಬಗ್ಗೆ ಮಾತನಾಡದಂತೆ ಅನಧಿಕೃತವಾಗಿ ತಾಕೀತು ಮಾಡಿದೆ. ಶಶಿಕಲಾ ಎಐಎಡಿಎಂಕೆ ಧ್ವಜವಿದ್ದ ಕಾರಿನಲ್ಲಿ ಆಸ್ಪತ್ರೆಯಿಂದ ಹೊರಬಂದಾಗ ಬಂದಾಗಲೂ ತಮಿಳುನಾಡು ಮುಖ್ಯಮಂತ್ರಿಯವರು ಇದು ಸರಿಯಾದ ಕ್ರಮವಲ್ಲ ಎಂದು ಟೀಕಿಸಿದ್ದರು.

ಪ್ರಮುಖ ಸುದ್ದಿ :-   ವೀಡಿಯೊ..| ರತನ್‌ ಟಾಟಾ ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡು ತನ್ನನ್ನು ರಕ್ಷಿಸಿದ ವ್ಯಕ್ತಿಗೆ ಅಂತಿಮ ನಮನ ಸಲ್ಲಿಸಿದ ಪ್ರೀತಿಯ ನಾಯಿ ʼಗೋವಾʼ

 

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement