ತಮಿಳುನಾಡು: ಚಿನ್ನಮ್ಮ (ಶಶಿಕಲಾ) ದಿಢೀರ್‌ ರಾಜಕೀಯ ನಿವೃತ್ತಿ ಘೋಷಣೆ

ಎಐಎಡಿಎಂಕೆ ಮಾಜಿ ನಾಯಕಿ ಹಾಗೂ ಮಾಜಿ ಮುಖ್ಯಮಂತ್ರಿ ಜಯಲಲಿತಾ ಆಪ್ತರಾದ ವಿ.ಕೆ. ಶಶಿಕಲಾ ನಟರಾಜನ್ ರಾಜಕೀಯ ನಿವೃತ್ತಿ ಘೋಷಿಸಿದ್ದಾರೆ. ಬರೋಬ್ಬರಿ ನಾಲ್ಕು ವರ್ಷಗಳ ಜೈಲು ವಾಸದ ಬಳಿಕ ಎಐಎಡಿಎಂಕೆ ಮಾಜಿ ನಾಯಕಿ ವಿ.ಕೆ. ಶಶಿಕಲಾ ಇತ್ತೀಚೆಗೆ ಬಿಡುಗಡೆಯಾಗಿದ್ದರು.ಬಿಡುಗಡೆಯಾದ ನಂತರ ಸಕ್ರಿಯವಾಗಿ ರಾಜಕೀಯಕ್ಕೆ ಬರುವುದಕ್ಕಾಗಿ ಘೋಷಿಸಿದ್ದ ಶಶಿಕಲಾ ಅವರು ದಿಢೀರ್‌ ನಿವೃತ್ತಿ ಘೋಷಿಸಿದ್ದಾರೆ. ವಿ,ಕೆ ಶಶಿಕಲಾ ನಟರಾಜನ್ … Continued

ತವರಿಗೆ ಮರಳಿದ ಜಯಲಲಿತಾ ಆಪ್ತೆ ಶಶಿಕಲಾ

ಕೃಷ್ಣಗಿರಿ: ಉಚ್ಚಾಟಿತ ಎಐಎಡಿಎಂಕೆ ನಾಯಕಿ ವಿ.ಕೆ.ಶಶಿಕಲಾ ನಾಲ್ಕು ವರ್ಷಗಳ ಕಾರಾಗೃಹವಾಸ ಪೂರ್ಣಗೊಳಿಸಿ ತವರು ರಾಜ್ಯ ತಮಿಳುನಾಡಿಗೆ ಮರಳಿದರು. ಕೃಷ್ಣಗಿರಿಗೆ ಬಂದ ಮಾಜಿ ಮುಖ್ಯಮಂತ್ರಿ ಜಯಲಲಿತಾ ಆಪ್ತೆ ಶಶಿಕಲಾ ಅವರನ್ನು ನೂರಾರು ಬೆಂಬಲಿಗರು ಪುಷ್ಪವೃಷ್ಟಿ ಮೂಲಕ ಬರಮಾಡಿಕೊಂಡರು. ಭ್ರಷ್ಟಾಚಾರ ಪ್ರಕರಣದಲ್ಲಿ ಬೆಂಗಳೂರಿನ ಪರಪ್ಪನ ಅಗ್ರಹಾರದಲ್ಲಿ ಶಶಿಕಲಾ ೪ ವರ್ಷ ಕಾರಾಗೃಹ ಶಿಕ್ಷೆ ಅನುಭವಿಸಿದ್ದಾರೆ. ಶಶಿಕಲಾ ಹೊಸೂರು ಪಟ್ಟಣದ … Continued

ಶಶಿಕಲಾ ವಿರುದ್ಧ ಎಐಎಡಿಎಂಕೆ ದೂರು ದಾಖಲು

ಚೆನ್ನೈ: ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರ ಆಪ್ತ ಸಹಾಯಕಿ ಶಶಿಕಲಾ ಹಾಗೂ ಅಮ್ಮ ಮಕ್ಕಳ ಮುನೇತ್ರ ಕಜಗಮ್‌ ಪ್ರಧಾನ ಕಾರ್ಯದರ್ಶಿ ದಿನಕರನ್‌ ಹಿಂಸಾಚಾರಕ್ಕೆ ಪ್ರಚೋದನೆ ನೀಡುತ್ತಿದ್ದಾರೆಂದು ಹಿರಿಯ ಸಚಿವರು ಸೇರಿದಂತೆ ಎಐಎಡಿಎಂಕೆ ಮುಖಂಡರು ಪೊಲೀಸ್‌ ಮಹಾನಿರ್ದೇಶಕರಿಗೆ ದೂರು ನೀಡಿದ್ದಾರೆ. ಸಚಿವರಾದ ಡಿ.ಜಯಕುಮಾರ, ಪಿ.ತಂಗಮಣಿ ಅಲ್ಲದೇ ಪಕ್ಷದ ಅಧ್ಯಕ್ಷ ಇ. ಮಧುಸೂಧನ್‌ ಪೊಲೀಸ್‌ ಮಹಾನಿರ್ದೇಶಕ ಸಿ.ವಿ.ತ್ರಿಪಾಠಿ ಅವರನ್ನು … Continued

ಶಶಿಕಲಾ ಸ್ವಾಗತಕ್ಕೆ ನಿಂತರೆ ಎಐಎಡಿಎಂಕೆಯಿಂದ ವಜಾ

  ಚೆನ್ನೈ: ತಮಿಳುನಾಡು ಮಾಜಿ ಮುಖ್ಯಮಂತ್ರಿ ದಿವಂಗತ ಜೆ.ಜಯಲಲಿತಾ ಅವರ ಆಪ್ತೆ ಶಶಿಕಲಾ ಅವರ ಬೆಂಬಲಿಗರ ಮೇಲೆ ಎಐಎಡಿಎಂಕೆ ಕ್ರಮ ಕೈಗೊಳ್ಳಲಾರಂಭಿಸಿದೆ. .ಶಶಿಕಲಾ ಬೆಂಗಳೂರು ಜೈಲಿನಿಂದ ಬಿಡುಗಡೆಯಾದಾಗಿನಿಂದ, ಅವರನ್ನು ‘ಪಕ್ಷದ ಪ್ರಧಾನ ಕಾರ್ಯದರ್ಶಿ’ ಎಂದು ಸ್ವಾಗತಿಸುವ ಪೋಸ್ಟರ್‌ಗಳನ್ನು ಹಾಕಿದ್ದಕ್ಕಾಗಿ ಪಕ್ಷವು ಹಲವಾರು ಕಾರ್ಯಕರ್ತರನ್ನು ವಜಾ ಮಾಡಿದೆ. ಪಕ್ಷವು 2017 ರಲ್ಲಿ ಶಶಿಕಲಾ ಅವರನ್ನು ಹೊರಹಾಕಿತ್ತು. ಅಕ್ರಮ … Continued