ಕೃಷಿ ಕಾನೂನಿಗೆ ತಿದ್ದುಪಡಿ ತಂದರೆ ದೋಷವಿದೆ ಎಂದರ್ಥವಲ್ಲ

 

ನವದೆಹಲಿ: ಕೇಂದ್ರ ಸರಕಾರ ಒಂದು ವೇಳೆ ಕೃಷಿ ಕಾನೂನುಗಳಿಗೆ ತಿದ್ದುಪಡಿ ಮಾಡಿದರೆ ಕೃಷಿ ಕಾನೂನಿನಲ್ಲಿ ಯಾವುದೇ ಕೊರತೆಯಿದೆ ಎಂದು ತಿಳಿಯುವುದು ಸರಿಯಲ್ಲ ಎಂದು ಕೃಷಿ ಸಚಿವ ನರೇಂದ್ರಸಿಂಗ್‌ ತೋಮರ್‌ ತಿಳಿಸಿದ್ದಾರೆ.
ಕೆಲವರು ರೈತರ ದಾರಿ ತಪ್ಪಿಸುತ್ತಿದ್ದಾರೆ. ಅಲ್ಲದೇ ಒಂದು ನಿರ್ದಿಷ್ಟ ರಾಜ್ಯದ ಜನರು ಕೃಷಿ ಮಸೂದೆಗಳ ಬಗ್ಗೆ ತಪ್ಪು ಮಾಹಿತಿ ಹರಡುತ್ತಿದ್ದಾರೆ. ರೈತರ ಆದಾಯ ದ್ವಿಗುಣಗೊಳ್ಳಬೇಕೆಂಬುದು ನಮ್ಮ ಉದ್ದೇಶವಾಗಿದೆ. ಜಿಡಿಪಿಗೆ ಕೃಷಿ ಕೊಡುಗೆ ಹೆಚ್ಚಿಸುವುದು ಕೂಡ ನಮ್ಮ ಉದ್ದೇಶಗಳಲ್ಲೊಂದಾಗಿದೆ. ಪ್ರಧಾನಿ ನರೇಂದ್ರ ಮೋದಿ ರೈತರ ಹಿತ ಕಾಯಲು ಬದ್ಧರಾಗಿದ್ದಾರೆ. ಕೃಷಿ ಕಾನೂನುಗಳಲ್ಲಿನ ಲೋಪಗಳನ್ನು ಎತ್ತಿ ತೋರಿಸುವಂತೆ ಪ್ರತಿಪಕ್ಷಗಳಿಗೆ ಸವಾಲು ಹಾಕಿದ ಸಚಿವ ತೋಮರ್‌, ರೈತರ ಭೂಮಿಯನ್ನು ಉದ್ಯಮಿಗಳು, ವ್ಯಾಪಾರಿಗಳು ಕಸಿದುಕೊಳ್ಳಲು ಅವಕಾಶ ನೀಡಲಾಗಿದೆ ಎಂಬುದನ್ನು ತೋರಿಸಿ ಎಂದರು.
ರೈತರ ಕಲ್ಯಾಣ ಮತ್ತು ಎಂಎಸ್‌ಪಿ ಆಧಾರಿತ ಮಾರುಕಟ್ಟೆ ವ್ಯವಸ್ಥೆಯನ್ನು ಮುಂದುವರೆಸಲು ಸರ್ಕಾರ ಬದ್ಧವಾಗಿದೆ. ಕಾನೂನುಗಳು ರೈತರಿಗೆ ತಮ್ಮ ಉತ್ಪನ್ನಗಳನ್ನು ಎಪಿಎಂಸಿಗಳ ಹೊರಗೆ ಮಾರಾಟ ಮಾಡಲು ಪರ್ಯಾಯವನ್ನು ನೀಡುತ್ತವೆ ಎಂದು ಅವರು ಹೇಳಿದರು.

ಪ್ರಮುಖ ಸುದ್ದಿ :-   ಎನ್‌ಡಿಎ ಅಭ್ಯರ್ಥಿ ವಿರುದ್ಧ ಸ್ಪರ್ಧೆ : ಬಿಜೆಪಿಯಿಂದ ಭೋಜಪುರಿ ನಟನ ಉಚ್ಛಾಟನೆ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement