ಪ್ರತಿಭಟನಾ ನಿರತ ರೈತರ ಬೇಡಿಕೆ ಈಡೇರಿಸದಿದ್ರೆ 16 ರಾಜ್ಯಗಳಲ್ಲಿ ವಿದ್ಯುತ್‌ ಕಡಿತ: ಟಿಕಾಯತ್‌ ಎಚ್ಚರಿಕೆ

ನವ ದೆಹಲಿ: ಪ್ರತಿಭಟನಾ ರೈತರ ಬೇಡಿಕೆಗಳನ್ನು ಈಡೇರಿಸದಿದ್ದರೆ 16 ರಾಜ್ಯಗಳಲ್ಲಿ ವಿದ್ಯುತ್‌ ಕಡಿತಗೊಳಿಸುವುದಾಗಿ ಸಂಯುಕ್ತ ರೈತ ಒಕ್ಕೂಟದ ನಾಯಕ ರಾಕೇಶ ಟಿಕಾಯತ್‌ ಎಚ್ಚರಿಸಿದ್ದಾರೆ. ರಾಜಸ್ಥಾನದ ಭಾರತ್ಪುರದಲ್ಲಿ ಮಾಧ್ಯಮ ಸಂವಾದಲ್ಲಿ ಅವರು ಈ ಎಚ್ಚರಿಕೆ ನೀಡಿದ್ದಾರೆ ಎಂದು ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ. ಮಾಧ್ಯಮ ಸಂವಾದವೊಂದರಲ್ಲಿ ಮಾತನಾಡಿದ ಅವರು,ಕಾರ್ಪೋರೇಟ್‌ ಸಂಸ್ಥೆಗಳೇ ದೇಶವನ್ನು ಆಳುತ್ತಿವೆ. ಕೇಂದ್ರದಲ್ಲಿ ಯಾವುದೇ ಸರ್ಕಾರವಿಲ್ಲ. … Continued

ಬಿಜೆಪಿ ಶಾಸಕನ ಮೇಲೆ ಹಲ್ಲೆ ನಡೆಸಿ ವಿವಸ್ತ್ರಗೊಳಿಸಿದ ಕೃಷಿ ಕಾಯ್ದೆ ವಿರೋಧಿ ಹೋರಾಟಗಾರರು

ಪಂಜಾಬ್‌ನಲ್ಲಿ ಕೃಷಿ ವಿರೋಧಿ ಕಾನೂನುಹೋರಾಟಗಾರರು ಅಬೊಹಾರ್ ಶಾಸಕ ಅರುಣ್ ನಾರಂಗ್‌ ಅವರ ಮೇಲೆ ಹಲ್ಲೆ ನಡೆಸಿ, ನಂತರ ಬಟ್ಟೆಗಳನ್ನು ಹರಿದು ಹಾಕಲಾಯಿತು. ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ದೃಶ್ಯಗಳಲ್ಲಿ, ಪೊಲೀಸರು ಶಾಸಕರನ್ನು ಸುರಕ್ಷಿತವಾಗಿ ಕರೆದೊಯ್ಯುವ ಮೊದಲು ನಾರಂಗ್ ಅವರು ಬಹುತೇಕ ಬೆತ್ತಲೆ ಸ್ಥಿತಿಯಲ್ಲಿದ್ದರು. ಪಂಜಾಬ್‌ನ ಮಾಲೌಟ್ ಪಟ್ಟಣದಲ್ಲಿ ಶನಿವಾರ ಈ ಘಟನೆ ನಡೆದಿದೆ ಎಂದು ವರದಿಯಾಗಿದೆ. … Continued

ರೈತ ಕಾಯ್ದೆಗಳಿಂದ ಕರ್ನಾಟಕ ಹಿಂದೆ ಸರಿಯವುದಿಲ್ಲ

ಬೆಂಗಳೂರು : ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಕೃಷಿ ಕಾಯ್ದೆಗಳು ರೈತರ ಪರವಾಗಿಯೇ ಇದ್ದು, ಯಾವುದೇ ಕಾರಣಕ್ಕೂ ಆ ಕಾಯ್ದೆಗಳಿಂದ ರಾಜ್ಯ ಹಿಂದೆ ಸರಿಯುವ ಪ್ರಶ್ನೆ ಇಲ್ಲ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರೈತರು ಯಾವ ಹೋರಾಟ ಬೇಕಾದರೂ ಮಾಡಲಿ, ಸರ್ಕಾರಕ್ಕೆ ಮನವಿ ಕೊಡಲಿ, ಆದರೆ ಕೇಂದ್ರ ಸರ್ಕಾರ ಜಾರಿಗೊಳಿಸುವ ಕೃಷಿ … Continued

ಕೃಷಿ ಕಾನೂನು ರದ್ದುಪಡಿಸದಿದ್ದರೆ ಖಾಸಗಿ ಸಂಸ್ಥೆಗಳ ಗೋದಾಮು ಧ್ವಂಸ: ಟಿಕಾಯತ್‌ ಎಚ್ಚರಿಕೆ

ಕೇಂದ್ರ ಸರಕಾರ ವಿವಾದಿತ ಮೂರು ಕೃಷಿ ಕಾನೂನುಗಳನ್ನು ರದ್ದುಗೊಳಿಸದಿದ್ದರೆ ಖಾಸಗಿ ಸಂಸ್ಥೆಗಳು ಆಹಾರಧಾನ್ಯ ಸಂಗ್ರಹಕ್ಕಾಗಿ ನಿರ್ಮಿಸುತ್ತಿರುವ ಗೋದಾಮುಗಳನ್ನು ಕೆಡವಲಾಗುವುದು ಎಂದು ರೈತರ ಆಂದೋಲನದ ಮುಖಂಡ ರಾಕೇಶ್‌ ಟಿಕಾಯತ್‌ ಎಚ್ಚರಿಕೆ ನೀಡಿದ್ದಾರೆ. ಪಂಜಾಬ್‌ನ ಅಬೋಹರ್ ಸಮೀಪ ಆಯೋಜಿಸಿದ ಕಿಸಾನ್‌ ಮಹಾಪಂಚಾಯತ್‌ನಲ್ಲಿ ಮಾತನಾಡಿದ ಟಿಕಾಯತ್‌, ನೂತನ ಕೃಷಿ ಕಾನೂನುಗಳು ಜಾರಿಗೊಳ್ಳದಿದ್ದರೂ ಕೂಡ ಕೆಲವು ಸಂಸ್ಥೆಗಳು ಧಾನ್ಯ ಸಂಗ್ರಹಕ್ಕೆ ಬೃಹತ್‌ … Continued

ನೂತನ ಕೃಷಿ ಕಾಯ್ದೆ ಸಮರ್ಥಿಸಿಕೊಂಡ ಪ್ರಧಾನಿ

ಲಖನೌ: ರೈತರ ಪ್ರತಿಭಟನೆ ಬೆಂಬಲಿಸುವ ಟೂಲ್‌ಕಿಟ್‌ ಹಂಚಿಕೊಂಡ ಆರೋಪದ ಮೇಲೆ ಪರಿಸರ ಕಾರ್ಯಕರ್ತೆ ದಿಶಾ ರವಿ ಅವರನ್ನು ಬಂಧಿಸಿರುವುದು ವಿವಾದಕ್ಕೆ ತಿರುಗಿರುವ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿ ಅವರು ಕೇಂದ್ರದ ಹೊಸ ಕೃಷಿ ಕಾಯ್ದೆಗಳನ್ನು ಮತ್ತೊಮ್ಮೆ ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ರಾಜ್‌ಭರ್’ (ಒಬಿಸಿ) ಸಮುದಾಯದ ಆದರ್ಶ ಪುರುಷ ರಾಜ ಸುಹೇಲ್ದೇವ್ ಪ್ರತಿಮೆಗೆ ಉತ್ತರ ಪ್ರದೇಶದ ಬಹ್ರೈಚ್ ಜಿಲ್ಲೆಯಲ್ಲಿ … Continued

ಕೃಷಿ ಕಾನೂನಿಗೆ ತಿದ್ದುಪಡಿ ತಂದರೆ ದೋಷವಿದೆ ಎಂದರ್ಥವಲ್ಲ

  ನವದೆಹಲಿ: ಕೇಂದ್ರ ಸರಕಾರ ಒಂದು ವೇಳೆ ಕೃಷಿ ಕಾನೂನುಗಳಿಗೆ ತಿದ್ದುಪಡಿ ಮಾಡಿದರೆ ಕೃಷಿ ಕಾನೂನಿನಲ್ಲಿ ಯಾವುದೇ ಕೊರತೆಯಿದೆ ಎಂದು ತಿಳಿಯುವುದು ಸರಿಯಲ್ಲ ಎಂದು ಕೃಷಿ ಸಚಿವ ನರೇಂದ್ರಸಿಂಗ್‌ ತೋಮರ್‌ ತಿಳಿಸಿದ್ದಾರೆ. ಕೆಲವರು ರೈತರ ದಾರಿ ತಪ್ಪಿಸುತ್ತಿದ್ದಾರೆ. ಅಲ್ಲದೇ ಒಂದು ನಿರ್ದಿಷ್ಟ ರಾಜ್ಯದ ಜನರು ಕೃಷಿ ಮಸೂದೆಗಳ ಬಗ್ಗೆ ತಪ್ಪು ಮಾಹಿತಿ ಹರಡುತ್ತಿದ್ದಾರೆ. ರೈತರ ಆದಾಯ … Continued