ಬಿಜೆಪಿ ಶಾಸಕನ ಮೇಲೆ ಹಲ್ಲೆ ನಡೆಸಿ ವಿವಸ್ತ್ರಗೊಳಿಸಿದ ಕೃಷಿ ಕಾಯ್ದೆ ವಿರೋಧಿ ಹೋರಾಟಗಾರರು

ಪಂಜಾಬ್‌ನಲ್ಲಿ ಕೃಷಿ ವಿರೋಧಿ ಕಾನೂನುಹೋರಾಟಗಾರರು ಅಬೊಹಾರ್ ಶಾಸಕ ಅರುಣ್ ನಾರಂಗ್‌ ಅವರ ಮೇಲೆ ಹಲ್ಲೆ ನಡೆಸಿ, ನಂತರ ಬಟ್ಟೆಗಳನ್ನು ಹರಿದು ಹಾಕಲಾಯಿತು.
ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ದೃಶ್ಯಗಳಲ್ಲಿ, ಪೊಲೀಸರು ಶಾಸಕರನ್ನು ಸುರಕ್ಷಿತವಾಗಿ ಕರೆದೊಯ್ಯುವ ಮೊದಲು ನಾರಂಗ್ ಅವರು ಬಹುತೇಕ ಬೆತ್ತಲೆ ಸ್ಥಿತಿಯಲ್ಲಿದ್ದರು.
ಪಂಜಾಬ್‌ನ ಮಾಲೌಟ್ ಪಟ್ಟಣದಲ್ಲಿ ಶನಿವಾರ ಈ ಘಟನೆ ನಡೆದಿದೆ ಎಂದು ವರದಿಯಾಗಿದೆ. ಅರುಣ್ ನಾರಂಗ್ ಅವರು ರಾಜ್ಯ ಸರ್ಕಾರದ ವಿರುದ್ಧ ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಲು ಸ್ಥಳಕ್ಕೆ ತಲುಪಿದ್ದರು, ಆದರೆ, ಪ್ರತಿಭಟನಾಕಾರರು ಆಗಲೇ ಬಿಜೆಪಿ ಕಚೇರಿ ಬಳಿ ಇವರನ್ನು ಕಾಯುತ್ತಿದ್ದರು ಎಂದು ವರದಿಯಾಗಿದೆ.
ನಾರಂಗ್ ಸ್ಥಳಕ್ಕೆ ತಲುಪಿದ ಕೂಡಲೇ ಪ್ರತಿಭಟನಾಕಾರರು ಅವರ ಮೇಲೆ ಶಾಯಿ ಎಸೆದು ಅವರ ಕಾರನ್ನು ಕಪ್ಪಾಗಿಸಿದರು. ಬಿಜೆಪಿ ಕಾರ್ಯಕರ್ತರು ಮತ್ತು ಪೊಲೀಸರು ಅವರನ್ನು ಅಂಗಡಿಯೊಳಗೆ ಕರೆದೊಯ್ಯುವಲ್ಲಿ ಯಶಸ್ವಿಯಾದರು. ಆದರೆ, ಹೊರಗೆ ಬಂದಾಗ ಅವರ ಮೇಲೆ ಹಲ್ಲೆ ನಡೆಸಲಾಯಿತು. ಆನಂತರ ಅವರ ಬಟ್ಟೆಗಳನ್ನು ಹರಿದು ಬೆತ್ತಲೆ ಮಾಡಲಾಯಿತು.
ಪಂಜಾಬ್ ಬಿಜೆಪಿ ಮುಖಂಡ ವರುಣ್ ಪುರಿ ಮಾತನಾಡಿ, “ಬಿಜೆಪಿಯ ಅಬೋಹಾರ್ ಶಾಸಕ ಅರುಣ್ ನಾರಂಗ್ ಮತ್ತು ಇತರ ಇಬ್ಬರು ಪಕ್ಷದ ಮುಖಂಡರ ಮೇಲೆ ಮಾಲೌಟ್ ಪಟ್ಟಣದಲ್ಲಿ ಹಲ್ಲೆ ಮಾಡಲಾಗಿದೆ. ಪ್ರಜಾಪ್ರಭುತ್ವ ಕಾಯ್ದೆ ಅಡಿಯಲ್ಲಿ ಜನರ ಪ್ರತಿನಿಧಿಯ ಮೇಲೆ ದಾಳಿ ಮಾಡುವುದು ಶಿಕ್ಷಾರ್ಹ ಅಪರಾಧ. ತಕ್ಷಣದ ಕಠಿಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ವಿಶೇಷವೆಂದರೆ ಶಾಸಕ ಅರುಣ್ ನಾರಂಗ್ ಅವರು ಕೃಷಿ ಕಾನೂನುಗಳನ್ನು ವಿರೋಧಿಸಿದ್ದರು ಮತ್ತು ಕಾನೂನುಗಳು ರೈತರ ವಿರುದ್ಧವಾಗಿದೆ ಎಂದು ಹೇಳಿದ್ದರು. ಆದರೂ ಅವರ ಮೇಲೆ ಹಲ್ಲೆ ನಡೆಸಲಾಗಿದೆ.

ಪ್ರಮುಖ ಸುದ್ದಿ :-   ಇವರು ಭಾರತದ ಅತ್ಯಂತ ಶ್ರೀಮಂತ ಅಭ್ಯರ್ಥಿ : ತೆಲುಗು ದೇಶಂ ಪಕ್ಷದ ಇವರ ಆಸ್ತಿ 5,785 ಕೋಟಿ ರೂಪಾಯಿ...!

3.5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement