ಅಮೆರಿಕದ ಬೃಹತ್ ಔಷಧ ಸಂಸ್ಥೆ ಫೀಜರ್ ಕೊವಿಡ್-೧೯ ಲಸಿಕೆಯ ಅನುಮೋದನೆಗಾಗಿ ಭಾರತ ಸರಕಾರಕ್ಕೆ ನೀಡಿದ ಅರ್ಜಿಯನ್ನು ಹಿಂದಕ್ಕೆ ಪಡೆಯಲು ನಿರ್ಧರಿಸಿದೆ.
ಭಾರತದ ಡ್ರಗ್ ರೆಗ್ಯುಲೇಟರಿ ಅಥಾರಿಟಿಯ ವಿಷಯ ತಜ್ಞರ ಸಮಿತಿ ಸಭೆಯಲ್ಲಿ ಫಿಜರ್ ತನ್ನ ಕೊರೊನಾ ಲಸಿಕೆಯ ತುರ್ತು ಬಳಕೆಯ ದೃಢೀಕರಣದ ದಿಸೆಯಲ್ಲಿ ಪಾಲ್ಗೊಂಡಿತ್ತು. ಸಭೆಯ ನಂತರ ಕಂಪನಿಯು ತನ್ನ ಅರ್ಜಿಯನ್ನು ಹಿಂಪಡೆಯಲು ನಿರ್ಧರಿಸಿದೆ. ಹೆಚ್ಚುವರಿ ಮಾಹಿತಿ ಲಭ್ಯವಾಗುತ್ತಿದ್ದಂತೆಯೇ ಮುಂದಿನ ದಿನಗಳಲ್ಲಿ ಅನುಮೋದನೆ ವಿನಂತಿಯನ್ನು ಸಲ್ಲಿಸಲಿದೆ ಎಂದು ಫಿಜರ್ ಸಂಸ್ಥೆ ವಕ್ತಾರರು ತಿಳಿಸಿದ್ದಾರೆ.
ಫಿಜರ್ ತನ್ನ ಲಸಿಕೆಯನ್ನು ಭಾರತದಲ್ಲಿ ಬಳಕೆಗೆ ಲಭ್ಯವಾಗುವಂತೆ ಮಾಡಲು ಬದ್ಧವಾಗಿದೆ ಮತ್ತು ತುರ್ತು ಬಳಕೆಯ ದೃಢೀಕರಣದ ಅಗತ್ಯ ಮಾರ್ಗವನ್ನು ಅನುಸರಿಸಲಿದೆ ಎಂದು ತಿಳಿಸಿದ್ದಾರೆ.
advertisement
9535127775 / 9901837775 / 6364528715 / 08362775155 / https://icsmpucollege.com/
ನಿಮ್ಮ ಕಾಮೆಂಟ್ ಬರೆಯಿರಿ