ಭಾರತಕ್ಕೆ ೯೭.೨ ಮಿಲಿಯನ್‌ ಕೊರೊನಾ ಲಸಿಕೆ: ವಿಶ್ವ ಆರೋಗ್ಯ ಸಂಸ್ಥೆ

ವಿಶ್ವ ಆರೋಗ್ಯ ಸಂಸ್ಥೆಯ ಕೋವಾಕ್ಸ್ ಉಪಕ್ರಮದಿಂದ ವಿತರಣೆಯ ಮೊದಲ ಹಂತದಲ್ಲಿ, ಭಾರತ 97.2 ಮಿಲಿಯನ್ ಡೋಸ್‌ ಕೊವಿಡ್‌-೧೯ ಲಸಿಕೆಗಳನ್ನು ಸ್ವೀಕರಿಸಲು ಭಾರತ ಸಜ್ಜಾಗಿದೆ.
ಈ ತಿಂಗಳ ಆರಂಭದಲ್ಲಿ 337.2 ಮಿಲಿಯನ್ ಡೋಸ್‌ಗಳನ್ನು ವಿತರಿಸಲು ಯೋಜಿಸುತ್ತಿದ್ದು, ಈವರೆಗೆ ಸುಮಾರು 2 ಬಿಲಿಯನ್ ಲಸಿಕೆಗಳ ವಿತರಣೆಯಾಗಿದೆ.
ಮಧ್ಯಂತರ ವಿತರಣಾ ಮುನ್ಸೂಚನೆಯ ಪ್ರಕಾರ, ಜನಸಂಖ್ಯೆಯ ಗಾತ್ರಕ್ಕೆ ಅನುಗುಣವಾಗಿ ದೇಶಗಳಿಗೆ ಪ್ರಮಾಣವನ್ನು ನಿಗದಿಪಡಿಸಲಾಗಿದೆ. 17.2 ಮಿಲಿಯನ್ ಲಸಿಕೆಗಳು ಪಾಕಿಸ್ತಾನಕ್ಕೆ ಹೋಗಲಿವೆ, ನಂತರ ನೈಜೀರಿಯಾಕ್ಕೆ 16 ಮಿಲಿಯನ್ ಮತ್ತು ಇಂಡೋನೇಷ್ಯಾಕ್ಕೆ 13.7 ಮಿಲಿಯನ್ ಡೋಸ್. ಉತ್ತರ ಕೊರಿಯಾವು 2 ಮಿಲಿಯನ್ ಲಸಿಕೆಗಳನ್ನು ಸ್ವೀಕರಿಸಲಿದೆ.
ಸೆಪ್ಟೆಂಬರ್‌ನಲ್ಲಿ ಗರಿಷ್ಠ ಮಟ್ಟವನ್ನು ತಲುಪಿದ ನಂತರ ಕೊರೊನಾ ದೈನಂದಿನ ಸೋಂಕಿನ ಪ್ರಮಾಣ ಗಣನೀಯವಾಗಿ ಕಡಿಮೆಯಾಗಿದ್ದರೂ, ಭಾರತವು ವಿಶ್ವದಲ್ಲೇ ಎರಡನೇ ಅತಿ ಹೆಚ್ಚು ಕೋವಿಡ್ -19 ಪ್ರಕರಣಗಳನ್ನು ಹೊಂದಿದೆ.

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ.

(1. ಚೆನ್ನಾಗಿಲ್ಲ. 2. ಸಾಧಾರಣ. 3. ಪರವಾಗಿಲ್ಲ. 4. ಉತ್ತಮ . 5. ಅತ್ಯುತ್ತಮ)

ಇಂದಿನ ಪ್ರಮುಖ ಸುದ್ದಿ :-   ಗೂಗಲ್ ಮ್ಯಾಪ್ ಬಳಸಿ ಕಾರು ಚಾಲನೆ : ಕಾರು ನದಿಗೆ ಬಿದ್ದು ಕೇರಳದ ಇಬ್ಬರು ವೈದ್ಯರು ಸಾವು

0 / 5. ಒಟ್ಟು ವೋಟುಗಳು 0

ನಿಮ್ಮ ಕಾಮೆಂಟ್ ಬರೆಯಿರಿ

ಕನ್ನಡಿ ನ್ಯೂಸ್ ನ ದಿನದ ಪ್ರಮುಖ ಸುದ್ದಿಗಳು ಮತ್ತು ಮಾಹಿತಿಗಾಗಿ
ವಾಟ್ಸಾಪ್ ಗ್ರೂಪ್ ಸೇರಿ
ಟೆಲಿಗ್ರಾಮ್ ಚಾನೆಲ್ ಸೇರಿ
ಫೇಸ್ ಬುಕ್ ಫಾಲೋ ಮಾಡಿ
ಗೂಗಲ್ ನ್ಯೂಸ್ ನಲ್ಲಿ ಸೇರಿ
ಟ್ವಿಟರ್ ನಲ್ಲಿ ಫಾಲೋ ಮಾಡಿ
advertisement