ರಷ್ಯಾದಿಂದ ಪೋಲೆಂಡ್, ಜರ್ಮನಿ, ಸ್ವೀಡನ್‌ ರಾಜತಾಂತ್ರಿಕರ ಉಚ್ಚಾಟನೆ

ಮಾಸ್ಕೊ: ಜೈಲಿನಲ್ಲಿದ್ದ ಕ್ರೆಮ್ಲಿನ್ ಆಡಳಿತದ ಕಟು ವಿಮರ್ಶಕ ಅಲೆಕ್ಸಿ ನವಲ್ನಿ ಅವರನ್ನು ಬೆಂಬಲಿಸಿ ಕಳೆದ ತಿಂಗಳು ಪ್ರದರ್ಶನಗಳಲ್ಲಿ ಭಾಗವಹಿಸಿದ್ದಕ್ಕಾಗಿ ಪೋಲೆಂಡ್, ಜರ್ಮನಿ ಮತ್ತು ಸ್ವೀಡನ್‌ನ ರಾಜತಾಂತ್ರಿಕರನ್ನು ಹೊರಹಾಕಲಾಗುತ್ತಿದೆ ಎಂದು ಮಾಸ್ಕೋ ಶುಕ್ರವಾರ ಹೇಳಿದೆ.
ಯುರೋಪಿಯನ್ ಒಕ್ಕೂಟದ ಉನ್ನತ ರಾಜತಾಂತ್ರಿಕ ಜೋಸೆಫ್‌ ಬೊರೆಲ್ ಮಾಸ್ಕೋದಲ್ಲಿ ವಿದೇಶಾಂಗ ಸಚಿವ ಸೆರ್ಗೆಯ್ ಲಾವ್ರೊವ್ ಅವರನ್ನು ಭೇಟಿಯಾದ ನಂತರ ಮತ್ತು ರಷ್ಯಾದೊಂದಿಗಿನ ಒಕ್ಕೂಟದ ಸಂಬಂಧಗಳು ನವಲ್ನಿಯ ಜೈಲುವಾಸದ ನಂತರ ಕಡಿಮೆಯಾಗಿದೆ ಎಂದು ವಿವರಿಸಿದ ಕೆಲವೇ ಗಂಟೆಗಳ ನಂತರ ರಷ್ಯಾ ಈ ಕ್ರಮ ಕೈಗೊಂಡಿದೆ.
ಬೊರೆಲ್ ಈ ಕ್ರಮವನ್ನು “ತೀವ್ರವಾಗಿ ಖಂಡಿಸಿದ್ದಾರೆ” ಎಂದು ವಕ್ತಾರರು ಹೇಳಿದ್ದಾರೆ, ಅಲ್ಲದೆ, ಸ್ವೀಡನ್ ಇದನ್ನು ಈ ಕ್ರಮ ಸಂಪೂರ್ಣ ಆಧಾರ ರಹಿತ” ಕ್ರಮ ಎಂದು ಹೇಳಿದೆ.
ರಷ್ಯಾದ ವಿದೇಶಾಂಗ ಸಚಿವಾಲಯವು ಮೂರು ಯುರೋಪ್‌ ದೇಶಗಳ ಅನಿರ್ದಿಷ್ಟ ಸಂಖ್ಯೆಯ ರಾಜತಾಂತ್ರಿಕರು ಜನವರಿ 23 ರಂದು ನವಲ್ನಿ ಅವರನ್ನು ಬೆಂಬಲಿಸಿ ನಡೆದ ಪ್ರದರ್ಶನಗಳಲ್ಲಿ” ಪಾಲ್ಗೊಂಡಿದ್ದಾರೆ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಮುಂದಿನ ದಿನಗಳಲ್ಲಿ ರಷ್ಯಾವನ್ನು ತೊರೆಯುವಂತೆ ಅವರಿಗೆ ಆದೇಶಿಸಲಾಗಿದೆ ಎಂದು ಸಚಿವಾಲಯ ಹೇಳಿದೆ, ದೇಶಗಳ ರಾಜತಾಂತ್ರಿಕರು ಭವಿಷ್ಯದಲ್ಲಿ “ಅಂತರರಾಷ್ಟ್ರೀಯ ಕಾನೂನು ಕಟ್ಟಳೆಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕೆಂದು” ಮಾಸ್ಕೋ ನಿರೀಕ್ಷಿಸುತ್ತದೆ. ದೇಶಾದ್ಯಂತ ನಡೆದ ಸಾಮೂಹಿಕ ಪ್ರದರ್ಶನಗಳಲ್ಲಿ ರಷ್ಯಾ ಪೊಲೀಸರು 10,000 ಕ್ಕೂ ಹೆಚ್ಚು ಜನರನ್ನು ಬಂಧಿಸಿದ್ದಾರೆ, ಅಲ್ಲಿ ಪ್ರತಿಭಟನಾಕಾರರು ಕ್ರೆಮ್ಲಿನ್ ಆಡಳಿತವನ್ನು ಖಂಡಿಸಿದ್ದಾರೆ ಹಾಗೂ ನವಲ್ನಿಯನ್ನು ಬಿಡುಗಡೆ ಮಾಡಬೇಕೆಂದು ಒತ್ತಾಯಿಸಿದ್ದಾರೆ.
ಅಲೆಕ್ಸಿ ನವಲ್ನಿ ಅವರು ತಮ್ಮ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಮೇಲೆ ವಿಷಪೂರಿತ ಇಂಜೆಕ್ಷನ್‌ ಮೂಲಕ ದಾಳಿ ಮಾಡಿದ್ದಾರೆ ಎಂದು ಆರೋಪಿಸಿದ್ದರು. ಅ ವಿಷಪೂರಿತ ದಾಳಿಯಿಂದ ಚೇತರಿಸಿಕೊಳ್ಳುತ್ತಿದ್ದ 44 ವರ್ಷದ ನವಲ್ನಿ ಅವರು ಜರ್ಮನಿಯಿಂದ ಕಳೆದ ತಿಂಗಳು ಮಾಸ್ಕೋಗೆ ಆಗಮಿಸಿದಾಗ ಅವರನ್ನು ಬಂಧಿಸಲಾಗಿತ್ತು.

ಪ್ರಮುಖ ಸುದ್ದಿ :-   ಕೋಟಿಗಟ್ಟಲೆ ಬೆಲೆಗೆ ಮಾರಾಟವಾಗಿ ನೂತನ ದಾಖಲೆ ನಿರ್ಮಿಸಿದ ಭಾರತದ ಮೂಲದ ಈ ತಳಿಯ ಹಸು..! ಬೆಲೆ ಕೇಳಿದ್ರೆ ದಂಗಾಗ್ತೀರಾ...!!

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement