ಆಕ್ಸ್‌ಫರ್ಡ್ ವಿಶ್ವವಿದ್ಯಾಲಯ ಅಭಿವೃದ್ಧಿಪಡಿಸಿದ ಕೊರೋನಾ ಲಸಿಕೆಅಸ್ಟ್ರಾಜೆನೆಕಾ ಬ್ರಿಟನ್‌ನಲ್ಲಿ ಮೊದಲು ಪತ್ತೆಯಾದ ಹೊಸ ರೂಪಾಂತರದ ವಿರುದ್ಧ ಪರಿಣಾಮಕಾರಿಯಾಗಿರುವುದು ಕಂಡುಬಂದಿದೆ,
ಲಸಿಕೆಯನ್ನು ಅಭಿವೃದ್ಧಿಪಡಿಸಿದ ಆಕ್ಸ್‌ಫರ್ಡ್ ಸಂಶೋಧಕರ ಪ್ರಕಾರ, ಹೊಸ ವೈರಸ್ ರೂಪಾಂತರಗಳಲ್ಲಿ ಇದು ಪರಿಣಾಮಕಾರಿಯಾಗಿದೆ. ನವೆಂಬರ್‌ನಲ್ಲಿ ಯುಕೆಯಲ್ಲಿ ಮೊದಲ ಬಾರಿಗೆ ಹೊಸ ವೈರಸ್ ರೂಪಾಂತರ ಪತ್ತೆಯಾಗಿತ್ತು. ವೈರಸ್‌ನ ಹೊಸ ರೂಪಾಂತರ ಶೀಘ್ರವಾಗಿ ಹರಡುತ್ತದೆ. ಹೊಸ ಲಸಿಕೆ ರೋಗದ ಹರಡುವಿಕೆಯನ್ನು ಕಡಿಮೆಯಾಗುತ್ತದೆ.
“ಯುನೈಟೆಡ್ ಕಿಂಗ್‌ಡಂನಲ್ಲಿ ಹೊಸ ಲಸಿಕೆಯ ನಮ್ಮ ಪ್ರಯೋಗಗಳ ಮಾಹಿತಿಯು ಲಸಿಕೆ ಮೂಲ ಸಾಂಕ್ರಾಮಿಕ ವೈರಸ್‌ನಿಂದ ರಕ್ಷಿಸುವುದಲ್ಲದೆ, ರೂಪಾಂತರದ ಸೋಂಕಿನಿಂದ ಕೂಡ ರಕ್ಷಿಸುತ್ತದೆ ಎಂಬುದು ನಿರೂಪಿತಗೊಂಡಿದೆ ಎಂದು ಆಕ್ಸ್‌ಫರ್ಡ್ ಲಸಿಕೆ ಪ್ರಯೋಗದ ಮುಖ್ಯ ಸಂಶೋಧಕ ಪ್ರೊಫೆಸರ್ ಆಂಡ್ರ್ಯೂ ಪೊಲಾರ್ಡ್ ಆಕ್ಸ್‌ಫರ್ಡ್ ತಿಳಿಸಿದ್ದಾರೆ.
ಲಸಿಕೆಯ ಮೂಲ ಹಂತ 2 ಮತ್ತು ಹಂತ 3 ಪ್ರಯೋಗಗಳಿಗೆ ದಾಖಲಾದ ರೋಗಿಗಳಿಂದ ತೆಗೆದ ಸ್ವ್ಯಾಬ್‌ಗಳ ಪರೀಕ್ಷೆಯಿಂದ ಇದು ತಿಳಿದುಬಂದಿದೆ.
ಐಸಿಎಸ್ ಮಹೇಶ ಪಿಯು ಸೈನ್ಸ್ ಕಾಲೇಜು, ಧಾರವಾಡ
ನಿಮ್ಮ ಕಾಮೆಂಟ್ ಬರೆಯಿರಿ