ಎಚ್‌ಎಎಲ್‌-ಯುಎಸ್‌ ಲಾಕ್ಹೀಡ್‌ ಮಾರ್ಟಿನ್‌ ಒಪ್ಪಂದ

ಭಾರತದ ಬಾಹ್ಯಾಕಾಶ ವಲಯದಲ್ಲಿನ ಔದ್ಯಮಿಕ ಸಹಯೋಗಕ್ಕಾಗಿ ಹಿಂದೂಸ್ತಾನ್‌ ಏರೊನಾಟಿಕ್ಸ್‌ ಲಿಮಿಟೆಡ್‌ (ಎಚ್‌ಎಎಲ್‌)ನೊಂದಿಗೆ ಒಪ್ಪಂದ ಮಾಡಿಕೊಂಡಿದೆ ಎಂದು ಅಮೆರಿಕದ ರಕ್ಷಣಾ ಪ್ರಮುಖ ಲಾಕ್ಹೀಡ್‌ ಮಾರ್ಟಿನ್‌ ಏರೋನಾಟಿಕ್ಸ್‌ ತಿಳಿಸಿದೆ.
ಇದು ಭಾರತದ ಉದ್ಯಮ ಸಂಬಂಧವನ್ನು ಬಲಪಡಿಸುತ್ತದೆ. ಅಲ್ಲದೇ ಕಂಪನಿಯ ಜಾಗತಿಕ ಬಾಹ್ಯಾಕಾಶ ಉದ್ಯಮದ ಪ್ರಗತಿಗೆ ಪೂರಕವಾಗಲಿದೆ ಎಂದು ಕಂಪನಿಯ ಇಂಟಿಗ್ರೇಟೆಡ್‌ ಫೈಟರ್‌ ಗ್ರೂಪ್‌ನ ಬ್ಯುಸಿನೆಸ್‌ ಡೆವಲಪ್‌ಮೆಂಟ್‌ ಉಪಾಧ್ಯಕ್ಷ ಜಿ.ಆರ್‌.ಮೆಕ್‌ಡೊನಾಲ್ಡ್‌ ತಿಳಿಸಿದ್ದಾರೆ. ಏಷ್ಯಾದ ಅತಿದೊಡ್ಡ ಏರೋಸ್ಪೇಸ್ ಕಂಪನಿಗಳಲ್ಲಿ ಒಂದಾದ ಎಚ್‌ಎಎಲ್‌ನೊಂದಿಗೆ ಸಂಭಾವ್ಯ ಅವಕಾಶಗಳನ್ನು ಹುಡುಕಲು ನಾವು ಉತ್ಸುಕರಾಗಿದ್ದೇವೆ ಎಂದು ಅವರು ಹೇಳಿದರು.
ದೇಶೀಯ ಮತ್ತು ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಅವಕಾಶಗಳನ್ನು ಹುಡುಕುವಲ್ಲಿ ಲಾಕ್ಹೀಡ್ ಮಾರ್ಟಿನ್ ನೊಂದಿಗೆ ಕೆಲಸ ಮಾಡಲು ತಮ್ಮ ಸಂಸ್ಥೆ ಎದುರು ನೋಡುತ್ತಿದೆ ಎಂದು ಎಚ್‌ಎಎಲ್‌ನ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಆರ್. ಮಾಧವನ್ ಹೇಳಿದ್ದಾರೆ.
ಭಾರತೀಯ ವಾಯುಪಡೆಗೆ 114 ಫೈಟರ್ ಜೆಟ್‌ಗಳನ್ನು ಪೂರೈಸುವ ಮೆಗಾ ಒಪ್ಪಂದದ ಸ್ಪರ್ಧೆಯಲ್ಲಿ ಲಾಕ್ಹೀಡ್‌ ಮಾರ್ಟಿನ್‌ ಏರೋನಾಟಿಕ್ಸ್‌ ಕಂಪನಿಯು ಪ್ರಮುಖ ಸ್ಪರ್ಧಿಗಳಲ್ಲಿ ಒಂದಾಗಿದೆ.

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement