ನೌಕಾಪಡೆ ಅಧಿಕಾರಿಯ ಜೀವಂತ ದಹಿಸಿದ ದುಷ್ಕರ್ಮಿಗಳು

ಮುಂಬೈ: ನೌಕಾಪಡೆ ಅಧಿಕಾರಿಯೊಬ್ಬರನ್ನು ಅಪಹರಿಸಿದ್ದ ದುಷ್ಕರ್ಮಿಗಳು ಹಣ ನೀಡದ ಕಾರಣಕ್ಕೆ ಬೆಂಕಿಹಚ್ಚಿ ಸಜೀವ ದಹನ ಮಾಡಿರುವ ಹೃದಯ ವಿದ್ರಾವಕ ಘಟನೆ ಮಹಾರಾಷ್ಟ್ರದ ಪಾಲ್ಗಾರ್ ನಲ್ಲಿ ನಡೆದಿದೆ.
ಮೃತ ಅಧಿಕಾರಿಯನ್ನು ಸೂರಜ್ ಕುಮಾರ್ ದುಬೆ ಎಂದು ಗುರುತಿಸಲಾಗಿದೆ. ರಾಂಜಿ ನಿವಾಸಿಯಾಗಿದ್ದ ದುಬೆ ಚೆನ್ನೈ ವಿಮಾನ ನಿಲ್ದಾಣಕ್ಕೆ ಬಂದು ಇಳಿಯುತ್ತಿದ್ದಂತೆ ಅಲ್ಲಿಯೇ ಕಾಯುತ್ತಿದ್ದ ದುಷ್ಕರ್ಮಿಗಳು ವಿಮಾನ ನಿಲ್ದಾಣದಿಂದಲೇ ಅವರನ್ನು ಅಪಹರಿಸಿ ಮಹಾರಾಷ್ಟ್ರದ ಪಾಲ್ಗಾರ್ ಗೆ ಕರೆದೊಯದಿದ್ದರು ಹಾಗೂ ಅವರ ಬಳಿ ಬಿಡುಗಡೆಗಾಗಿ 10 ಲಕ್ಷ ರೂಪಾಯಿಗೆ ಬೇಡಿಕೆ ಇಟ್ಟಿದ್ದರು. ಹಣ ನೀಡದ ಕಾರಣಕ್ಕೆ ಪಲ್ಗಾರ್ ಜಿಲ್ಲೆಯ ವೇವಾಜಿ ಕಾಡಿನಲ್ಲಿ ಬೆಂಕಿ ಹಚ್ಚಿ ಹತ್ಯೆ ಮಾಡಿದ್ದಾರೆ ಎಂದು ಪೊಲೀಸ್ ವರಿಷ್ಠಾಧಿಕಾರಿ ದತ್ತಾತ್ರೆಯ ಶಿಂಧೆ ತಿಳಿಸಿದ್ದಾರೆ.

 

0 / 5. 0

ಶೇರ್ ಮಾಡಿ :
ಪ್ರಮುಖ ಸುದ್ದಿ :-   ವಿಶ್ವದ ದೊಡ್ಡ ಪ್ರಮಾಣದ ಸೌರಶಕ್ತಿ ಅಭಿವರ್ಧಕರ ಪಟ್ಟಿಯಲ್ಲಿ ಅದಾನಿ ಗ್ರೀನ್‌ ಗೆ 2ನೇ ಸ್ಥಾನ

ನಿಮ್ಮ ಕಾಮೆಂಟ್ ಬರೆಯಿರಿ

advertisement