ರೈತರಿಂದ ರಸ್ತೆ ತಡೆ: ಬೆಂಗಳೂರಿನಲ್ಲಿ ಸಂಚಾರ ಅಸ್ತವ್ಯಸ್ತ

posted in: ರಾಜ್ಯ | 0

ಬೆಂಗಳೂರು: ಮೂರು ವಿವಾದಾತ್ಮಕ ಕೃಷಿ ಕಾನೂನುಗಳ ವಿರುದ್ಧ ರೈತ ಸಂಘಟನೆಗಳು  ದೇಶಾದ್ಯಂತ ಶನಿವಾರ ಕರೆ ನೀಡಿದ್ದ ದೇಶವ್ಯಾಪಿ ರಸ್ತೆ ತಡೆ ಚಳವಳಿ ಬಿಸಿ ರಾಜಧಾನಿಗೂ ತಟ್ಟಿತು.
ರೈತ ಸಂಘಟನೆಯವರು ಬೆಂಗಳೂರಿನ ಕೆಲ ರಸ್ತೆಗಳನ್ನು ಬಂದ್‌ ಮಾಡಿದ್ದರಿಂದ ಸಂಚಾರ ದಟ್ಟಣೆ ಉಂಟಾಯಿತು. ಮೈಸೂರು ಬ್ಯಾಂಕ್‌ ವೃತ್ತ, ಸದಹಳ್ಳಿ ಗೇಟ್‌, ದೇವನಹಳ್ಳಿ ರಸ್ತೆ, ಯಲಹಂಕ ಹೊಸ ಪೊಲೀಸ್‌ ಠಾಣೆ ವೃತ್ತ ಮೊದಲಾದೆಡೆ ರೈತರು ಜಮಾಯಿಸಿ ರಸ್ತೆ ಬಂದ್‌ ಮಾಡಿಸಿದರು. ಹೋರಾಟಗಾರರನ್ನು ಪೊಲೀಸರು ವಶಕ್ಕೆ ಪಡೆದರು. ಹೋರಾಟಕ್ಕೆ ಬೆಂಬಲ ನೀಡಿದ ವಾಟಾಳ್‌ ನಾಗರಾಜ್‌ ಅವರನ್ನು ಮೈಸೂರು ಬ್ಯಾಂಕ್‌ ವೃತ್ತದಲ್ಲಿ ಬಂಧಿಸಲಾಯಿತು.
ಮಂಡ್ಯದ ವಿಸಿ ಫಾರ್ಮ್‌ ಗೇಟ್‌ಬಳಿ, ಬೆಂಗಳೂರು-ಮೈಸೂರು ಹೆದ್ದಾರೆ, ಶ್ರೀರಂಗಪಟ್ಟಣ-ಬೆಂಗಳೂರು ಹೆದ್ದಾರಿ, ಕಿಕ್ಕೇರಿ-ಶ್ರೀರಂಗಪಟ್ಟಣ ಹೆದ್ದಾರಿ, ನಾಗಮಂಗಲ ಹೆದ್ದಾರಿ ಬಳಿಯ ಬೆಲೂರು ಕ್ರಾಸ್‌, ಮೈಸೂರು ವರ್ತುಲ ರಸ್ತೆ, ಪಿರಿಯಾಪಟ್ಟಣ ಹೆದ್ದಾರಿ, ಕೆಆರ್‌ ನಗರ-ಹಾಸನ ರಾಜ್ಯ ಹೆದ್ದಾರಿ, ಚಾಮರಾಜನಗರ-ಸತ್ಯಮಂಗಲ ರಸ್ತೆ, ಚಾಮರಾಜನಗರ-ಗುಂಡ್ಲಪೇಟೆ ಹೆದ್ದಾರಿಯಲ್ಲಿ ರೈತ ಸಂಘಟನೆ ವತಿಯಿಂದ ರಸ್ತೆ ತಡೆ  ನಡೆದಿದೆ. ರಾಜ್ಯದ ಇತರ ಹಲವು ಜಿಲ್ಲೆಗಳಲ್ಲಿ ಕೂಡ ರಸ್ತೆ ತಡೆ ನಡೆದಿರುವುದು ವರದಿಯಾಗಿದೆ.
ರೈತರ ಪ್ರತಿಭಟನೆಗೆ ಒಗ್ಗಟ್ಟನ್ನು ತೋರಿಸಲು ಕರ್ನಾಟಕದ ರೈತರ ನಿಯೋಗ ದೆಹಲಿ ಬಳಿಯ ಗಾಜಿಪುರ ಗಡಿಯನ್ನು ತಲುಪಿತು. ಕರ್ನಾಟಕ ರಾಜ್ಯ ರೈತಾ ಸಂಘದ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ನೇತೃತ್ವದ ಹಸಿರು ಸೆನೆ, ಭಾರತೀಯ ಕಿಸಾನ್ ಯೂನಿಯನ್ ಮುಖಂಡ ರಾಕೇಶ್ ಟಿಕಾಯತ್ ಅವರನ್ನು ಇತ್ತೀಚಿಗೆ ಭೇಟಿಯಾಗಿದ್ದರು.

advertisement

ಸುಂದರವಾದ ಮತ್ತು ವಿಶಾಲವಾದ ಸ್ಥಳದಲ್ಲಿ ನಿಮ್ಮ ರಜಾದಿನಗಳನ್ನು ಆನಂದಿಸಿು

ಉತ್ತರ ಕರ್ನಾಟಕದ ಅತಿ ದೊಡ್ಡ ರೆಸಾರ್ಟ್ ಮತ್ತು ಅಡ್ವೆಂಚರ್ ಪಾರ್ಕ್

ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಿ ಮತ್ತು ವಿಚಾರಿಸಿ: 98867 84189

ಕನ್ನಡಿ ನ್ಯೂಸ್ ನ ದಿನದ ಪ್ರಮುಖ ಸುದ್ದಿಗಳು ಮತ್ತು ಮಾಹಿತಿಗಾಗಿ
ವಾಟ್ಸಾಪ್ ಗ್ರೂಪ್ ಸೇರಿ
ಟೆಲಿಗ್ರಾಮ್ ಚಾನೆಲ್ ಸೇರಿ
ಫೇಸ್ ಬುಕ್ ಫಾಲೋ ಮಾಡಿ
ಗೂಗಲ್ ನ್ಯೂಸ್ ನಲ್ಲಿ ಸೇರಿ
ಟ್ವಿಟರ್ ನಲ್ಲಿ ಫಾಲೋ ಮಾಡಿ
advertisement

ಇಂದಿನ ಪ್ರಮುಖ ಸುದ್ದಿ :-   ಈ ಸಂದರ್ಭದಲ್ಲಿ ಬೆಳಗಾವಿಗೆ ಮಹಾರಾಷ್ಟ್ರ ಸಚಿವರು ಬರುವುದು ಸೂಕ್ತವಲ್ಲ : ಸಿಎಂ ಬೊಮ್ಮಾಯಿ

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ.

(1. ಚೆನ್ನಾಗಿಲ್ಲ. 2. ಸಾಧಾರಣ. 3. ಪರವಾಗಿಲ್ಲ. 4. ಉತ್ತಮ . 5. ಅತ್ಯುತ್ತಮ)

/ 5. ಒಟ್ಟು ವೋಟುಗಳು

ನಿಮ್ಮ ಕಾಮೆಂಟ್ ಬರೆಯಿರಿ

advertisement