ಪ್ರತಿಭಟನೆ ನಡೆಸಿ, ಆದರೆ ರಸ್ತೆ ಸಂಚಾರ ಬಂದ್ ಮಾಡಬೇಡಿ : ರೈತರಿಗೆ ಸುಪ್ರೀಂ ಸೂಚನೆ

ನವದೆಹಲಿ: ಪ್ರತಿಭಟನೆ ನಡೆಸುವುದು ರೈತರ ಹಕ್ಕು ಪ್ರತಿಭಟನೆ ನಡೆಸಿ, ಆದರೆ ಜನ ಸಂಚಾರಕ್ಕೆ ಅಡ್ಡಿಯಾಗುವಂತೆ ರಸ್ತೆ ಬಂದ್ ಮಾಡುವುದನ್ನು ತಕ್ಷಣವೇ ನಿಲ್ಲಿಸಿ ಎಂದು ಸುಪ್ರೀಂಕೋರ್ಟ್ ಸೂಚಿಸಿದೆ. ಕೇಂದ್ರ ಸರ್ಕಾರ ಮೂರು ಕೃಷಿ ಕಾನೂನುಗಳಿಗೆ ತಿದ್ದುಪಡಿ ತಂದಿರುವುದನ್ನು ವಿರೋಧಿಸಿ ದೆಹಲಿಯಲ್ಲಿ ರೈತರು ಕಳೆದ ಹತ್ತು ತಿಂಗಳಿಂದ ದೆಹಲಿಯ ಗಡಿ ಭಾಗದ ಹೆದ್ದಾರಿಗಳನ್ನು ಬಂದ್ ಮಾಡಿ ಪ್ರತಿಭಟನೆ ನಡೆಸುತ್ತಿದ್ದಾರೆ. … Continued

ಹೋರಾಟಕ್ಕೆ ೧೦೦ನೇ ದಿನ: ರೈತರಿಂದ ಕರಾಳ ದಿನಾಚರಣೆ

ನವ ದೆಹಲಿ: ಕೇಂದ್ರ ಜಾರಿಗೆ ತಂದಿರುವ ಮೂರು ನೂತನ ಕೃಷಿ ಕಾಯ್ದೆಗಳನ್ನು ಹಿಂಪಡೆಯುವಂತೆ ಆಗ್ರಹಿಸಿ ರೈತರು ನಡೆಸುತ್ತಿರುವ ಹೋರಾಟ ೧೦೦ ದಿನಕ್ಕೆ ಕಾಲಿಟ್ಟಿದೆ. ಈ ಹಿನ್ನೆಲೆಯಲ್ಲಿ ರೈತರು ಕರಾಳ ದಿನ ಆಚರಿಸಿದರು. ಹಾಗೂ ಕುಂಡಲಿ- ಮನೇಸಾರ್ ಪಲ್ ವಾಲ್ ಎಕ್ಸ್‌ಪ್ರೆಸ್ ವೇ ಹೆದ್ದಾರಿಯಲ್ಲಿ ೫ ಗಂಟೆ ಹೆದ್ದಾರಿ ತಡೆ ನಡೆಸಲಾಯಿತು.ಅಲ್ಲದೆ, ರೈತರ ಹೋರಾಟ ೧೦೦ ದಿನ … Continued

ರೈತರಿಂದ ರಸ್ತೆ ತಡೆ: ಬೆಂಗಳೂರಿನಲ್ಲಿ ಸಂಚಾರ ಅಸ್ತವ್ಯಸ್ತ

ಬೆಂಗಳೂರು: ಮೂರು ವಿವಾದಾತ್ಮಕ ಕೃಷಿ ಕಾನೂನುಗಳ ವಿರುದ್ಧ ರೈತ ಸಂಘಟನೆಗಳು  ದೇಶಾದ್ಯಂತ ಶನಿವಾರ ಕರೆ ನೀಡಿದ್ದ ದೇಶವ್ಯಾಪಿ ರಸ್ತೆ ತಡೆ ಚಳವಳಿ ಬಿಸಿ ರಾಜಧಾನಿಗೂ ತಟ್ಟಿತು. ರೈತ ಸಂಘಟನೆಯವರು ಬೆಂಗಳೂರಿನ ಕೆಲ ರಸ್ತೆಗಳನ್ನು ಬಂದ್‌ ಮಾಡಿದ್ದರಿಂದ ಸಂಚಾರ ದಟ್ಟಣೆ ಉಂಟಾಯಿತು. ಮೈಸೂರು ಬ್ಯಾಂಕ್‌ ವೃತ್ತ, ಸದಹಳ್ಳಿ ಗೇಟ್‌, ದೇವನಹಳ್ಳಿ ರಸ್ತೆ, ಯಲಹಂಕ ಹೊಸ ಪೊಲೀಸ್‌ ಠಾಣೆ … Continued

ನಾಳೆ ದೇಶಾದ್ಯಂತ ರೈತರಿಂದ ರಸ್ತೆತಡೆ

ನವದೆಹಲಿ: ಕೃಷಿ ಕಾನೂನುಗಳನ್ನು ವಿರೋಧಿಸಿ ಹೋರಾಟ ನಡೆಸುತ್ತಿರುವ ಸಂಯುಕ್ತ ಕಿಸಾನ್ ಮೋರ್ಚಾ ಫೆ.೬ರಂದು ಕರೆನೀಡಿದ ರಸ್ತೆ ತಡೆ ಚಳವಳಿಯಿಂದ  ಹಲವು ರಾಜ್ಯಗಳಲ್ಲಿ ರಸ್ತೆ ಸಂಚಾರಕ್ಕೆ ತೊಂದರೆಯಾಗುವ ಸಾಧ್ಯತೆಯಿದೆ. ಕೇಂದ್ರ ಸರಕಾರ ಆಯವ್ಯಯದಲ್ಲಿ ರೈತರ ಬೇಡಿಕೆಗಳನ್ನು ಕಡೆಗಣಿಸಿದ್ದನ್ನು ಖಂಡಿಸಿ ದೇಶಾದ್ಯಂತ ರಸ್ತಾ ರೋಕೊ ನಡೆಸಲಾಗುತ್ತಿದೆ. ದೆಹಲಿಯನ್ನು ಹೊರತುಪಡಿಸಿ, ಉತ್ತರ ಪ್ರದೇಶ, ಹರಿಯಾಣ ಮತ್ತು ರಾಜಸ್ಥಾನದ ಕೆಲವೆಡೆ ಮತ್ತು … Continued