ಪಂಜಾಬ್‌-ಹರ್ಯಾಣದಲ್ಲಿ ಚಕ್‌ ಜಾಮ್‌ ಯಶಸ್ವಿ

ಕೇಂದ್ರದ ಹೊಸ ಕೃಷಿ ಕಾನೂನುಗಳ ವಿರುದ್ಧ ಪ್ರತಿಭಟಿಸಿದ ರೈತರು ಶನಿವಾರ ರೈತ ಸಂಘಟನೆಗಳು ಕರೆ ನೀಡಿದ ದೇಶವ್ಯಾಪಿ ರಸ್ತೆ ಅಂಗವಾಗಿ ನಡೆದ ಚಳವಳಿ ಪಂಜಾಬ್ ಮತ್ತು ಹರಿಯಾಣದಲ್ಲಿ ಸಂಪೂರ್ಣ ಯಶಸ್ವಿಗೊಂಡಿತು.

ಪಂಜಾಬ್‌ ಹಾಗೂ ಹರಿಯಾಣದಲ್ಲಿ ರೈತರು ದೊಡ್ಡ ಪ್ರಮಾಣದಲ್ಲಿ ರಸ್ತೆಗಿಳಿದು ಸಂಚಾರವನ್ನು ತಡೆದರು.ಟ್ರಾಕ್ಟರ್‌ಗಳ ಮೂಲಕ ಬಂದ ರೈತರು ರಸ್ತೆಯಲ್ಲಿ ಜಮಾಯಿಸಿದರು. ಮುಖಂಡರ ಮಾರ್ಗದರ್ಶನದಲ್ಲಿ ಶಾಂತ ರೀತಿಯ ಪ್ರತಿಭೆಟನೆ ನಡೆದಿದ್ದು, ಎಲ್ಲಿಯೂ ಕೂಡ ಹಿಂಸಾಚಾರದ ಘಟನೆಗಳು ನಡೆದ ಬಗ್ಗೆ ವರದಿಯಾಗಿಲ್ಲ. ನೂತನ ಕೃಷಿ ಕಾನೂನುಗಳನ್ನು ಹಿಂದಕ್ಕೆ ಪಡೆಯುವವರೆಗೂ ಹೋರಾಟ ನಡೆಸುವುದಾಗಿ ಘೋಷಣೆ ಕೂಗಿದರು. ರಾಜ್ಯ ಹೆದ್ದಾರಿ ಹಾಗೂ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಸಂಚಾರ ಅಸ್ತವ್ಯಸ್ತಗೊಂಡಿತು.

ದೆಹಲಿಯನ್ನು ಹೊರತುಪಡಿಸಿ, ದೇಶದ ಉಳಿದ ಭಾಗಗಳಲ್ಲಿ  ಕೂಡ ರಸ್ತಾ ರೋಕೊ ನಡೆಯಿತು. ದೆಹಲಿ ಪೊಲೀಸರು ರಾಷ್ಟ್ರ ರಾಜಧಾನಿಯ ಎಲ್ಲಾ ಗಡಿ ಕೇಂದ್ರಗಳಲ್ಲಿ ಭದ್ರತಾ ವ್ಯವಸ್ಥೆಯನ್ನು ತೀವ್ರಗೊಳಿಸಿದ್ದರು ಮತ್ತು ಗಾಜಿಪುರ ಗಡಿಯಲ್ಲಿ ವಾಹನಗಳ ಸಂಚಾರವನ್ನು ತಡೆಯಲು  ಬ್ಯಾರಿಕೇಡ್‌ಗಳನ್ನು ನಿರ್ಮಿಸಿದ್ದರು. ರಸ್ತೆ ಮಧ್ಯೆ ಮುಳ್ಳು ತಂತಿಗಳನ್ನು ಸಹ ಹಾಕಲಾಯಿತು. ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ಪ್ರಯತ್ನದಲ್ಲಿ ಹರಿಯಾಣ ಪೊಲೀಸರು ಭದ್ರತಾ ಕ್ರಮಗಳನ್ನು ಚುರುಕುಗೊಳಿಸಿದದ್ದರು. ಪ್ರಮುಖ ಜಂಕ್ಷನ್‌ಗಳು ಮತ್ತು ರಸ್ತೆಗಳಲ್ಲಿ ಸುರಕ್ಷತೆ ಮತ್ತು ಸಂಚಾರ ವ್ಯವಸ್ಥೆಗಳನ್ನು ವೈಯಕ್ತಿಕವಾಗಿ ಮೇಲ್ವಿಚಾರಣೆ ಮಾಡಲು ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಸೂಚಿಸಲಾಗಿತ್ತು.

ಪ್ರಮುಖ ಸುದ್ದಿ :-   ವೀಡಿಯೊ..| ರಾಷ್ಟ್ರದ ಸಂಪತ್ತಿನಲ್ಲಿ ಮುಸ್ಲಿಮರಿಗೆ ಮೊದಲ ಆದ್ಯತೆ ; ಮನಮೋಹನ ಸಿಂಗ್ ಹಳೆಯ ವೀಡಿಯೊ ಮೂಲಕ ಕಾಂಗ್ರೆಸ್ಸಿಗೆ ತಿರುಗೇಟು ನೀಡಿದ ಬಿಜೆಪಿ

 

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement