ಕೊರೋನಾ: ೯ ತಿಂಗಳಲ್ಲೇ ಅತ್ಯಂತ ಕಡಿಮೆ ಸಾವು

ಭಾರತದ ಕೊವಿಡ್‌-19 ಪ್ರಕರಣಗಳ ಸಂಖ್ಯೆ 1,08,26,363 ಕ್ಕೆ ಏರಿಕೆಯಾಗಿದ್ದು, ಒಂದು ದಿನದಲ್ಲಿ 12,059 ಹೊಸ ಸೋಂಕುಗಳು ವರದಿಯಾಗಿವೆ. ದೈನಂದಿನ ಸಾವುಗಳು ಈ ತಿಂಗಳ ಮೂರನೇ ಬಾರಿಗೆ 100ಕ್ಕಿಂತ ಕಡಿಮೆಯಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಅಂಕಿ ಅಂಶಗಳು ಭಾನುವಾರ ತಿಳಿಸಿವೆ.
78 ದೈನಂದಿನ ಹೊಸ ಸಾವುನೋವುಗಳೊಂದಿಗೆ ಸಾವಿನ ಸಂಖ್ಯೆ 1,54,996 ಕ್ಕೆ ಏರಿದೆ, ಇದು ಒಂಬತ್ತು ತಿಂಗಳ ನಂತರ ದಾಖಲಾದ ಅತಿ ಕಡಿಮೆ ಸಾವಿನ ಪ್ರಮಾಣ ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಅಂಕಿ ಅಂಶಗಳು ತಿಳಿಸಿವೆ. ರೋಗದಿಂದ ಚೇತರಿಸಿಕೊಂಡವರ ಸಂಖ್ಯೆ 1,05,22,601 ಕ್ಕೆ ಏರಿತು, ರಾಷ್ಟ್ರೀಯ ಕೊವಿಡ್‌-19 ಚೇತರಿಕೆ ದರವು ಶೇಕಡಾ 97.20 ರಷ್ಟಿದೆ, ಆದರೆ ಸಾವಿನ ಪ್ರಮಾಣವು ಶೇಕಡಾ 1.43 ರಷ್ಟಿದೆ. ದೇಶದಲ್ಲಿ 1,48,766 ಸಕ್ರಿಯ ಕೊರೊನಾವೈರಸ್ ಸೋಂಕುಗಳಿದ್ದು, ಇದು ಒಟ್ಟು ಕ್ಯಾಸೆಲೋಡ್‌ನ ಶೇಕಡಾ 1.37 ರಷ್ಟಿದೆ. ಈವರೆಗೆ 57,75,322 ಜನರಿಗೆ COVID-19 ವಿರುದ್ಧ ಲಸಿಕೆ ನೀಡಲಾಗಿದೆ ಎಂದು ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement