ಶ್ರೀಲಂಕಾ ಬಂದರು ಅಭಿವೃದ್ಧಿಗೆ ಅದಾನಿ ಹೂಡಿಕೆಗೆ ಆಸಕ್ತಿ

ನವದೆಹಲಿ: ಭಾರತದ ಹೂಡಿಕೆದಾರ ಸಂಸ್ಥೆ ಅದಾನಿ ಗ್ರೂಪ್‌ ವೆಸ್ಟ್‌ ಕಂಟೇನರ್‌ ಟರ್ಮಿನಲ್‌ ನಿರ್ಮಾಣದಲ್ಲಿ ಹೂಡಿಕೆ ಮಾಡಲು ಉತ್ಸುಕವಾಗಿದೆ ಎಂದು ಶ್ರೀಲಂಕಾದ ಸಚಿವರೊಬ್ಬರು ತಿಳಿಸಿದ್ದಾರೆ.
ಕೊಲಂಬೊ ಬಂದರಿನ ಈಸ್ಟ್‌ ಕಂಟೇನರ್‌ ಟರ್ಮಿನಲ್‌ (ಇಸಿಟಿ) ನಿರ್ಮಾಣ ಕುರಿತು ಭಾರತ ಹಾಗೂ ಜಪಾನ್‌ ಜೊತೆಗಿನ ಒಪ್ಪಂದವನ್ನು ಶ್ರೀಲಂಕಾ ರದ್ದುಪಡಿಸಿರುವುದು ಉಭಯ ರಾಷ್ಟ್ರಗಳ ರಾಜತಾಂತ್ರಿಕ ಸಂಬಂಧದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದೆ. ಈ ಹೇಳಿಕೆ ನೀಡುವ ಮೂಲಕ ಸಚಿವ ನಲಂಕ ಗದಹೇವ ವಿವಾದಕ್ಕೆ ಮತ್ತೊಂದು ತಿರುವು ನೀಡಿದ್ದಾರೆ.
ನಾವು ಅದಾನಿ ಗ್ರೂಪ್‌ ಹಾಗೂ ಅವರ ಸ್ಥಳಿಯ ಪಾಲುದಾರ ಜಾನ್‌ ಕೀಲ್ಸ್‌ ಅವರನ್ನು ಇತರ ಆಯ್ಕೆಗಳಿಗಾಗಿ ಕೇಳಿದೆವು. ಅವರು ಇಸಿಟಿ ನಿರ್ಮಾಣದ ಒಪ್ಪಂದದಂತೆ ಶೇ.೮೫ : ಶೇ.೧೫ವೆಸ್ಟ್‌ ಇಕ್ವಿಟಿ ನೀಡಿದರೆ ವೆಸ್ಟ್‌ ಕಂಟೇನರ್‌ ಟರ್ಮಿನಲ್‌ ನಿರ್ಮಾಣದ ಬಗ್ಗೆ ಗಮನ ಹರಿಸಬಹುದು ಎಂದು ತಿಳಿಸಿದ್ದಾರೆ ಎಂದು ಸಚಿವ ಹೇಳಿದ್ದಾರೆ.

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement