ಸೋನಿತ್‌ಪುರ (ಆಸ್ಸಾಮ್): ದೇಶದ ಹೊರಗಿರುವ ಕೆಲವರು ದೇಶದ ಘನತೆಗೆ ಕಳಂಕತರುವ ಕೆಲಸ ಮಾಡುತ್ತಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಅವರು ರಸ್ತೆ ಅಭಿವೃದ್ಧಿ ಯೋಜನೆ ಅಸೋಮ್ ಮಾಲಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಕೆಲ ವ್ಯಕ್ತಿಗಳು ನಮ್ಮ ದೇಶದ ಘನತೆಯನ್ನು ಹಾಳು ಮಾಡುವ ಕೆಲಸದಲ್ಲಿ ತೊಡಗಿಕೊಂಡಿದ್ದಾರೆ. ರಾಷ್ಟ್ರದ ಸಂಸ್ಕೃತಿಗೆ ಚ್ಯುತಿ ತರುತ್ತಿರುವ ಕುರಿತು ಕೆಲ ದಾಖಲೆಗಳು ಲಭಿಸಿವೆ ಎಂದರು.
ದೇಶದ ವಿರುದ್ಧ ನಡೆಯುತ್ತಿರುವ ಪಿತೂರಿಯಲ್ಲಿ ಕೆಲವು ರಾಜಕೀಯ ಪಕ್ಷಗಳು ಕೈಜೋಡಿಸಿರುವುದು ದುರದೃಷ್ಟಕರ ಎಂದು ತಿಳಿಸಿದರು.
advertisement
ಐಸಿಎಸ್ ಮಹೇಶ ಪಿಯು ಸೈನ್ಸ್ ಕಾಲೇಜು, ಧಾರವಾಡ
ನಿಮ್ಮ ಕಾಮೆಂಟ್ ಬರೆಯಿರಿ