ನವ ದೆಹಲಿ: ಹೊಸ ವಿವಾದಾತ್ಮಕ ಕೃಷಿ-ಮಾರುಕಟ್ಟೆ ಕಾನೂನುಗಳನ್ನು ರದ್ದುಪಡಿಸುವುದರ ಜೊತೆಗೆ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ಕಾನೂನು ಜಾರಿಗೆ ತರಬೇಕು ಎಂಬ ರೈತರ ಬೇಡಿಕೆಯನ್ನುರಾಕೇಶ ಟಿಕಾಯಿತ್ ಪುನರುಚ್ಚರಿಸಿದ್ದಾರೆ
ಸೋಮವಾರ ರಾಜ್ಯಸಭೆಯಲ್ಲಿ ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ಮುಂದುವರಿಯಲಿದೆ ಎಂಬ ಪ್ರಧಾನಿ ನರೇಂದ್ರ ಮೋದಿ ಘೋಷಣೆಗೆ ಪ್ರತಿಕ್ರಿಯಿಸಿದ ರೈತ ಮುಖಂಡ ರಾಕೇಶ್ ಟಿಕಾಯಿತ್ ಎಂಎಸ್‌ಪಿ ಕಾನೂನಿಗೆ ಒತ್ತಾಯಿಸಿದರು ಹಾಗೂ ಹಸಿವಿನ ಮೇಲಿನ ವ್ಯವಹಾರ ದೇಶದಲ್ಲಿ ನಡೆಯಲು ಅನುಮತಿ ಕೊಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ರಾಜ್ಯಸಭೆಯಲ್ಲಿ ಕನಿಷ್ಠ ಬೆಂಬಲ ಬೆಲೆಯಲ್ಲಿ ಸರ್ಕಾರದ ನಿಲುವನ್ನು ಪುನರುಚ್ಚರಿಸುತ್ತ ಕನಿಷ್ಠ ಬೆಂಬಲ ಬೆಲೆ ಇತ್ತು, ಇದೆ, ಮುಂದೆಯೂ ಇರಲಿದೆ ಎಂದು ಹೇಳಿದ್ದಕ್ಕೆ ಟಿಕಾಯಿತ್ ಸರ್ಕಾರ ಕನಿಷ್ಠ ಬೆಂಬಲ ನೀಡುವ ಕಾನೂನನ್ನೇ ಜಾರಿಗೆ ತರಲಿ ಎಂದು ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಟಿಕಾಯಿತ್, ದೇಶದಲ್ಲಿ ಹಸಿವಿನ ಬಗ್ಗೆ ವ್ಯಾಪಾರ ಇರುವುದಿಲ್ಲ. ಹಸಿವು ಹೆಚ್ಚಾದರೆ ಬೆಳೆಗಳ ಬೆಲೆಯನ್ನು ಅದಕ್ಕೆ ಅನುಗುಣವಾಗಿ ನಿರ್ಧರಿಸಲಾಗುತ್ತದೆ. ಹಸಿವಿನ ಮೇಲೆ ವ್ಯಾಪಾರವನ್ನು ಬಯಸುವವರು ದೇಶದಿಂದ ಹೊರಹಾಕಲ್ಪಡುತ್ತಾರೆ ಎಂದು ಮಾರ್ಮಿಕವಾಗಿ ಹೇಳಿದರು.
ವಿಮಾನ ಟಿಕೆಟ್‌ನ ದರಗಳು ದಿನಕ್ಕೆ ಹಲವಾರು ಬಾರಿ ಏರಿಳಿತಗೊಳ್ಳುವ ರೀತಿಯಲ್ಲಿ ಬೆಳೆಗಳ ಬೆಲೆಯನ್ನು ನಿರ್ಧರಿಸಲಾಗುವುದಿಲ್ಲ ಎಂದು ಅವರು ವಿಮಾನ ಟಿಕೆಟ್‌ನ ದರಗಳು ದಿನಕ್ಕೆ ಮೂರರಿಂದ ನಾಲ್ಕು ಬಾರಿ ಏರಿಳಿತಗೊಳ್ಳುತ್ತವೆ, ಬೆಳೆಗಳ ಬೆಲೆಯನ್ನು ಅದೇ ರೀತಿ ನಿರ್ಧರಿಸಲಾಗುತ್ತದೆಯೇ ಎಂದು ಕೇಳಿದರು.
“ಪ್ರತಿಭಟನೆಯಲ್ಲಿ ತೊಡಗಿರುವ” ಹೊಸ ಸಮುದಾಯದ ಹೊರಹೊಮ್ಮುವಿಕೆ ಬಗ್ಗೆ ಪ್ರಧಾನಮಂತ್ರಿಯವರ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದ ಅವರು, ಬಾರಿ ರೈತರ ಸಮುದಾಯವೇ ಪ್ರತಿಭಟನೆಯಲ್ಲಿ ಹೊರಹೊಮ್ಮಿದೆ ಮತ್ತು ಜನರು ಸಹ ರೈತರನ್ನು ಬೆಂಬಲಿಸುತ್ತಿದ್ದಾರೆ” ಎಂದು ಹೇಳಿದರು.
ರೈತರ ನಡೆಯುತ್ತಿರುವ ಆಂದೋಲನವನ್ನು ಜಾತಿ ಮತ್ತು ಧಾರ್ಮಿಕ ದೃಷ್ಟಿಯಿಂದ ವಿಭಜಿಸುವ ಪ್ರಯತ್ನಗಳಿಗೆ ಟಿಕಾಯಿತ್ ವಾಗ್ದಾಳಿ ನಡೆಸಿದರು.
ಎಂದು ಹೇಳಿಕೆ ನೀಡಿದ್ದರು.
ನಿಮ್ಮ ಕಾಮೆಂಟ್ ಬರೆಯಿರಿ