ಕೆನಡಾ: ಭಾರತದಲ್ಲಿ ನಡೆಯುತ್ತಿರುವ ರೈತರ ಪ್ರತಿಭಟನೆ ವಿರೋಧಿಸಿದ ಹಿನ್ನೆಲೆಯಲ್ಲಿ ಇಂಡೋ-ಕೆನಡಿಯನ್ ಸಮುದಾಯದ ಹಲವು ಸದಸ್ಯರ ವಿರುದ್ಧ ಲೈಂಗಿಕ ದೌರ್ಜನ್ಯದ ಬೆದರಿಕೆಗಳು ಬರುತ್ತಿವೆ ಎಂದು ಹಲವರು ಆರೋಪ ಮಾಡಿದ್ದಾರೆ.
ಗ್ರೇಟರ್ ಟೊರೆಂಟೊ, ಮೆಟ್ರೊ ವ್ಯಾಂಕೋವರ್, ಕ್ಯಾಲ್ಗರಿ ಸೇರಿದಂತೆ ಕೆನಡಾದ ವಿವಿಧೆಡೆ ವಾಸವಾಗಿರುವ ಇಂಡೋ-ಕೆನಡಿಯನ್ ಸಮುದಾಯದ ಜನರನ್ನು ಗುರಿಯಾಗಿಸಿ ಬೆದರಿಕೆ ಕರೆಗಳು ಬರುತ್ತಿವೆ. ಕರೆಗಳು ನಿಂದನೆ, ಧಾರ್ಮಿಕ ದ್ವೇಷದಿಂದ ಕೂಡಿದ್ದಾಗಿವೆ. ಕುಟುಂಬದ ಸದಸ್ಯರ ಮೇಲೆ ದಾಳಿ ನಡೆಸುವುದಾಗಿ ಕೂಡ ಬೆದರಿಕೆ ಒಡ್ಡಲಾಗುತ್ತಿದೆ.
ಸಾಮಾಜಿಕ ಜಾಲತಾಣಗಳಲ್ಲಿ ರೈತರ ಚಳವಳಿಯಲ್ಲಿ ಖಲಿಸ್ತಾನ ಹೋರಾಟಗಾರರು ಪಾಲ್ಗೊಂಡಿದ್ದನ್ನು ಖಂಡಿಸಿ ಟ್ವೀಟ್ ಮಾಡಿದವರನ್ನು ಗುರಿಯಾಗಿಸಿ ಬೆದರಿಕೆ ಕರೆ ಮಾಡಲಾಗುತ್ತಿದೆ. ಕರೆ ಮಾಡಿದವರನ್ನು ತಮ್ಮನ್ನು ಯೋಧರೆಂದು ಕರೆದುಕೊಳ್ಳುತ್ತಿದ್ದಾರೆ.
ಗಣರಾಜ್ಯೋತ್ಸವದಂದು ನವದೆಹಲಿಯಲ್ಲಿ ನಡೆದ ಹಿಂಸಾಚಾರ ಖಂಡಿಸಿ ಕೆನಡಾದಲ್ಲಿ ವಾಸಮಾಡುವ ಇಂಡೋ-ಕೆನಡಿಯನ್ ಸಮುದಾಯದ ಕೆಲವರು ಟ್ವೀಟ್ ಮಾಡಿದ್ದರು. ಇಷ್ಟೇ ಅಲ್ಲದೇ ಒಬ್ಬರ ಮನೆ ಎದುರು ಮೊಟ್ಟೆ ಹಾಗೂ ಟೊಮೆಟೊಗಳನ್ನು ಎಸೆದು ಹೋಗಿದ್ದಾರೆ.
ಇಂಡೋ-ಕೆನಡಿಯನ್ ಸಮುದಾಯದಲ್ಲಿ ಅಹಿತಕರ ಭಾವನೆ ಬೆಳೆದಿದೆ. ಪ್ರತ್ಯೇಕ ಖಲಿಸ್ತಾನಿ ಗುಂಪುಗಳು ವಿಶೇಷವಾಗಿ ಹಿಂದೂಗಳನ್ನು ಗುರಿಯಾಗಿಸಿಕೊಂಡು ಬೆದರಿಕೆ ಹಾಕುತ್ತಿದ್ದಾರೆ ಎಂದು ಇಂಡೋ-ಕೆನಡಿಯನ್ನರ ರಾಷ್ಟ್ರೀಯ ಒಕ್ಕೂಟದ ಅಧ್ಯಕ್ಷ ಆಜಾದ್ ಕೌಶಿಕ್ ಹೇಳಿದ್ದಾರೆ.
ನಿಮ್ಮ ಕಾಮೆಂಟ್ ಬರೆಯಿರಿ