ಆನ್‌ಲೈನ್‌ನಲ್ಲಿ ಸೋಫಾ ಮಾರಲು ಹೋಗಿ ಮೋಸ ಹೋದ ಕೇಜ್ರಿ ಪುತ್ರಿ!

ನವ ದೆಹಲಿ: ಇ-ಕಾಮರ್ಸ್‌ನಲ್ಲಿ ಸೋಫಾ ಮಾರಲು ಹೋಗಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಪುತ್ರಿ ಹರ್ಷಿತಾ ಕೇಜ್ರಿವಾಲ್ ಅವರು ೩೪ ಸಾವಿರ ಕಳೆದುಕೊಂಡಿದ್ದಾರೆ ಎಂದು ಸುದ್ದಿ ಸಂಸ್ಥೆ ವರದಿ ಮಾಡಿದೆ.
ವ್ಯಕ್ತಿಯೋರ್ವ ವೆಬ್ ಪೋರ್ಟಲ್‌ನಲ್ಲಿ ಸೋಫಾ ಕೊಂಡುಕೊಳ್ಳುವುದಾಗಿ ಹರ್ಷಿತಾಳನ್ನು ಸಂಪರ್ಕಿಸಿ ದರ ನಿಗದಿಯಾದ ಬಳಿಕ ಹರ್ಷಿತಾಳ ಖಾತೆಗೆ ಸ್ವಲ್ಪ ಹಣ ಹಾಕಿದ್ದಾನೆ. ಬಳಿಕ ಅದನ್ನು ಖಾತರಿಪಡಿಸಲು ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡುವಂತೆ ಹರ್ಷಿತಾಳಿಗೆ ಹೇಳಿದ್ದಾನೆ. ಆತ ಹೇಳಿದಂತೆ ಕೋಡ್ ಸ್ಕ್ಯಾನ್ ಮಾಡಿದ ಕೂಡಲೇ ಹರ್ಷಿತಾ ಅವರ ಖಾತೆಯಿಂದ ೨೦ ಸಾವಿರ ರೂಪಾಯಿ ಕಡಿತವಾಗಿದೆ. ಈ ಹಿನ್ನೆಲೆ ಹರ್ಷಿತಾ ಮತ್ತೆ ಆತನನ್ನು ಪ್ರಶ್ನಿಸಿದ್ದು ಆತ ತಪ್ಪಾಗಿ ಬೇರೆ ಕೋಡ್ ಕಳಿಸಿದ್ದೇನೆ, ಮತ್ತೊಂದು ಬಾರ್ ಕೋಡ್ ಕಳಿಸಿ ಅದನ್ನು ಸ್ಕ್ಯಾನ್ ಮಾಡುವಂತೆ ಹೇಳಿದ್ದಾನೆ. ಆದರೆ ಅದರಲ್ಲಿ ಸ್ಕ್ಯಾನ್ ಮಾಡುತ್ತಿದ್ದಂತೆ ಮತ್ತೆ ೧೪ ಸಾವಿರ ರೂಪಾಯಿ ಖಾತೆಯಿಂದ ಕಡಿತವಾಗಿದೆ. ಇವೆಲ್ಲವೂ ಮೋಸ ಎಂದು ತಿಳಿಯುತ್ತಿದ್ದಂತೆ ಹರ್ಷಿತಾ ಸಿವಿಲನ್ ಲೈನ್ಸ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

advertisement

ಕ್ಷಣ ಕ್ಷಣದ ಸುದ್ದಿಗಳು ಮತ್ತು ಮಾಹಿತಿಗಾಗಿ
ವಾಟ್ಸಾಪ್ ಗ್ರೂಪ್ ಸೇರಿ
ಫೇಸ್ ಬುಕ್ ಫಾಲೋ ಮಾಡಿ
ಗೂಗಲ್ ನ್ಯೂಸ್ ನಲ್ಲಿ ಸೇರಿ
ಟ್ವಿಟರ್ ನಲ್ಲಿ ಫಾಲೋ ಮಾಡಿ
advertisement
ಐಸಿಎಸ್ ಮಹೇಶ ಪಿಯು ಸೈನ್ಸ್ ಕಾಲೇಜು, ಧಾರವಾಡ
ಅಡ್ಮಿಶನ್ ಗಾಗಿ ಇಂದೇ ಕರೆ ಮಾಡಿ
9535127775 / 9901837775 / 6364528715 / 08362775155 / https://icsmpucollege.com/
advertisement

ನಿಮ್ಮ ಕಾಮೆಂಟ್ ಬರೆಯಿರಿ