ಆರು ಪತ್ರಕರ್ತರ ಬಂಧನಕ್ಕೆ ತಡೆಯಾಜ್ಞೆ

ನವದೆಹಲಿ: ರೈತರ ಪ್ರತಿಭಟನೆಯಲ್ಲಿ ಸಿಖ್‌ ವ್ಯಕ್ತಿಯೊಬ್ಬನ ಸಾವಿನ ಕುರಿತ ಟ್ವೀಟ್‌ ಕುರಿತು ದಾಖಲಾದ ಪ್ರಕರಣಗಳಲ್ಲಿ ಕಾಂಗ್ರೆಸ್‌ ಶಾಸಕ ಶಶಿ ತರೂರ್‌ ಹಾಗೂ ರಾಜದೀಪ್‌ ಸರದೇಸಾಯಿ ಸೇರಿದಂತೆ ಆರು ಪತ್ರಕರ್ತರ ಬಂಧನಕ್ಕೆ ಸರ್ವೋಚ್ಚ ನ್ಯಾಯಾಲಯ ತಡೆಯಾಜ್ಞೆ ನೀಡಿದೆ.
ನ್ಯಾಯಮೂರ್ತಿ ಎಸ್‌.ಎ.ಬೊಬ್ಡೆ ನೇತೃತ್ವದ ಮೂವರು ನ್ಯಾಯಾಧೀಶರ ನ್ಯಾಯಪೀಠ ಬಂಧನಕ್ಕೆ ತಡೆಯಾಜ್ಞೆ ನೀಡಿದೆ. ತರೂರ್‌, ರಾಜದೀಪ್‌ ಸರದೇಸಾಯಿ, ಮೃಣಾಲ್‌ ಪಾಂಡೆ, ಜಾಫರ್‌ ಆಘಾ, ಪರೇಶ್‌ ನಾಥ, ವಿನೋದ್‌ ಬೋಸ್‌ ಐದು ಪತ್ರಕರ್ತರು ತಮ್ಮ ವಿರುದ್ಧ ಬಾಕಿ ಇರುವ ಕ್ರಿಮಿನಲ್‌ ಪ್ರಕರಣಗಳನ್ನು ರದ್ದುಪಡಿಸಬೇಕೆಂದು ಅರ್ಜಿ ಸಲ್ಲಿಸಿದ್ದರು. ಮುಂದಿನ ವಿಚಾರಣೆವರೆಗೆ ತಡೆಯಾಜ್ಞೆ ಮುಂದುವರೆಯಲಿದೆ.

0 / 5. 0

ಶೇರ್ ಮಾಡಿ :
ಪ್ರಮುಖ ಸುದ್ದಿ :-   ರತನ್ ಟಾಟಾ : ಶಿಕ್ಷಣದಿಂದ ಹಿಡಿದು ಲೋಕೋಪಕಾರದ ವರೆಗೆ...ಟಾಟಾ ಪರಂಪರೆಯ ಹಿಂದಿನ ವ್ಯಕ್ತಿ

ನಿಮ್ಮ ಕಾಮೆಂಟ್ ಬರೆಯಿರಿ

advertisement