ನಾನು ಭಾರತದ ಮುಸ್ಲಿಂ ಆಗಿರಲು ಹೆಮ್ಮೆ ಪಡುತ್ತೇನೆ: ಗುಲಾಂ ನಬಿ ಆಜಾದ್‌

ನವದೆಹಲಿ: ನಾನು ಭಾರತದ ಮುಸ್ಲಿಂ ಆಗಿರಲು ಹೆಮ್ಮೆ ಪಡುತ್ತೇನೆ ಎಂದು ಕಾಂಗ್ರೆಸ್‌ ಸಂಸದ ಹಾಗೂ ರಾಜ್ಯಸಭೆ ಪ್ರತಿ ಪಕ್ಷದ ನಾಯಕ ಗುಲಾಂ ನಬಿ ಆಜಾದ್‌ ಹೇಳಿದರು.
ರಾಜ್ಯಸಭೆಯಲ್ಲಿ ತಮ್ಮ ವಿದಾಯ ಭಾಷಣದಲ್ಲಿ ಅವರು, ವಿಭಜನೆ ನಂತರ ಪಾಕಿಸ್ತಾನಕ್ಕೆ ಹೋಗದ ಅದೃಷ್ಟವಂತ ಜನರಲ್ಲಿ ನಾನೂ ಕೂಡ ಒಬ್ಬ. ಪಾಕಿಸ್ತಾನದ ಸ್ಥಿತಿ-ಗತಿಯನ್ನು ನೋಡಿದಾಗ ನಾನು ಹಿಂದೂಸ್ತಾನದ ಮುಸ್ಲಿಂ ಆಗಿರಲು ಹೆಮ್ಮೆ ಪಡುತ್ತೇನೆ ಎಂದರು.
ಆಜಾದ್ ಅವರು ನಾಲ್ಕು ದಶಕಗಳ ರಾಜಕೀಯ ಅನುಭವವನ್ನು ಸಂಕ್ಷಿಪ್ತ ಭಾಷಣದಲ್ಲಿ ವಿವರಿಸಿದರು. ಕೇಂದ್ರ ಸಚಿವ ರಾಮದಾಸ ಅಠವಲೆ ಕಾಂಗ್ರೆಸ್‌ ಮುಖಂಡ ಗುಲಾಂ ನಬಿ ಆಜಾದ್‌ರ ಕೊಡುಗೆಗಳನ್ನು ಸ್ವರಚಿತ ಕವನದ ಮೂಲಕ ಶ್ಲಾಘಿಸಿದರು. ಇದೇ ದಿನ ಜಮ್ಮು-ಕಾಶ್ಮೀರದ ನಜೀರ್‌ ಅಹ್ಮದ್‌ ಲವಯ್‌, ಶಮಶೇರ್‌ ಸಿಂಗ್‌ ಮನ್ಹಾಸ್‌ ಹಾಗೂ ಮೀರ್‌ ಮೊಹಮ್ಮದ್‌ ಫಯಾಜ್‌ರ ರಾಜ್ಯಸಭಾ ಅವಧಿ ಅಂತ್ಯಗೊಂಡಿತು.

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement