ಪ್ರಧಾನಿ ನರೇಂದ್ರ ಮೋದಿಯವರು ಸೋಮವಾರ ರಾಜ್ಯಸಭೆಯಲ್ಲಿ ಭಾಷಣ ಮಾತನಾಡಿದ ಸಂರ್ಭದಲ್ಲಿ ಬಳಸಿದ “ಆಂದೋಳನ ಜೀವಿʼ ಎಂಬ ಪದ ಈಗ ಸಾಕಷ್ಟು ಚರ್ಚೆಗೆ ಕಾರಣವಾಗಿದೆ.
ರಾಷ್ಟ್ರಪತಿಗಳ ಭಾಷಣಕ್ಕೆ ಧನ್ಯವಾದ ಸಲ್ಲಿಸುವ ಸಂದರ್ಭದಲ್ಲಿ ನೂತನ ಕೃಷಿ ಕಾನೂನು ವಿರೋಧಿಸಿ ರೈತರು ನಡೆಸುತ್ತಿರುವ ಹೋರಾಟದ ಬಗ್ಗೆ ಪ್ರಸ್ತಾಪಿಸುವ ಸಂರ್ಭದಲ್ಲಿ ಈಗ ʼಆಂದೋಳನ ಜೀವಿʼಗಳು ನಾಯಿಕೊಡೆಗಳಂತೆ ತಲೆಎತ್ತುತ್ತಿದ್ದಾರೆ ಹಾಗೂ ಎಲ್ಲಿ ಯಾವುದೇ ಪ್ರತಿಭಟನೆ ನಡೆದರೂ ಅವರೇ ಕಾಣುತ್ತಾರೆ ಎಂದು ಪ್ರದಾನಿ ಮೋದಿ ಟೀಕಿಸಿದ್ದರು. ಪ್ರಧಾನಿಯವರ ಈ ಮಾತಿಗೆ ಪ್ರತಿಕ್ರಿಯೆ ನೀಡಿರುವ ರೈತರ ಹೋರಾಟದಲ್ಲಿ ನೇತೃತ್ವ ವಹಿಸಿರುವ ಸಂಯುಕ್ತ ಕಿಸಾನ್ ಮೋರ್ಚಾ ಪ್ರಧಾನಿ ಮೋದಿಯವರಿಗೆ ಇತಿಹಾಸದ ಪಾಠ ಹೇಳಿದೆ. ಭಾರತವು ೧೯೪೭ರಲ್ಲಿ ವಸಾಹತುಶಾಹಿ ಆಡಳಿತಗಾರರಿಂದ ವಿಮೋಚನೆಗೊಳ್ಳಲು ಆಗ ನಡೆಸಿದ ಆಂದೋಳನವೇ ಕಾರಣ ಎಂದು ಪ್ರಧಾನಿಯವರಿಗೆ ನೆನಪು ಮಾಡುತ್ತೇವೆ ಹಾಗೂ ಅದಕ್ಕಾಗಿ ನಾವು ಆಂದೋಳನ ಜೀವಿಯಾಗಲು ಹೆಮ್ಮೆ ಪಡುತ್ತೇವೆ ಎಂದು ಸಂಯುಕ್ತ ಕಿಸಾನ್ ಮೋರ್ಚಾ (ಎಸ್‌ಎಂಕೆ) ಹೇಳಿದೆ.
ಬಿಜೆಪಿ ಮತ್ತು ಅದರ ಪೂರ್ವವರ್ತಿಗಳೇ ಬ್ರಿಟಿಷರ ವಿರುದ್ಧ ಯಾವುದೇ ಆಂದೋಳನ ಮಾಡಿಲ್ಲ ಮತ್ತು ಅವರು ಆಂದೋಳನಗಳ ವಿರುದ್ಧ ಇದ್ದರು. ಅವರು ಇನ್ನೂ ಸಾರ್ವಜನಿಕ ಚಳುವಳಿಗಳಿಗೆ ಹೆದರುತ್ತಾರೆ. ಸರ್ಕಾರದ ಹಠಮಾರಿ ಧೋರಣೆ ಹೆಚ್ಚು “ಆಂದೋಳನ ಜೀವಿಗಳನ್ನು ಸೃಷ್ಟಿಸುತ್ತಿದೆ ಎಂದು ಹೇಳಿರುವ ಎಸ್‌ಕೆಎಂ ಆಕ್ರೋಶಗೊಂಡ ರೈತರು ಮನೆಗೆ ಮರಳಲು ಹೆಚ್ಚು ಸಂತೋಷಪಡುತ್ತಾರೆ ಆದರೆ ಸರ್ಕಾರ ಈ ಬಗ್ಗೆ ಸಕಾರಾತ್ಮಕ ಕ್ರಮ ಕೈಗೊಂಡರೆ ಮಾತ್ರ ಇದು ಸಾಧ್ಯ ಎಂದು ಹೇಳಿದೆ.
ರೈತ ನಾಯಕ ರಾಕೇಶ ಟಿಕಾಯಿತ್, ನೂತನ ಕೃಷಿ ವಾಪಸ್ ಪಡೆಯುವ ವರೆಗೂ ಮನೆಗೆ ಹಿಂದಿರುಗುವ ಪ್ರಶ್ನಯೇ ಇಲ್ಲ ಎಂದು ಹೇಳಿದ್ದಾರೆ.
ಪ್ರಧಾನಿ ಮೋದಿಯವರು ರಾಜ್ಯಸಭೆಯಲ್ಲಿ ಮಾಡಿದ ಭಾಷಣದಲ್ಲಿ ಸ್ಪಷ್ಟ ಭರವಸೆ ಇಲ್ಲ. ಪ್ರಧಾನಿಯವರು ಈ ವಿವಾವಾದಾತ್ಮಕ ಕಾನೂನನ್ನು ತಿದ್ದುಪಡಿ ಮಾಡುವ ಬಗ್ಗೆ ಮಾತನಾಡಿದ್ದಾರೆಯೇ ಹೊರತು ಅದನ್ನು ರದ್ದುಪಡಿಸುವ ಬಗ್ಗೆ ಹೇಳಿಲ್ಲ. ಅವರು ತಮ್ಮ ಬೆಂಬಲಗರನ್ನು ಉದ್ದೇಶಿಸಿ ಮಾತನಾಡಿದ್ದಾರೆಯೇ ಹೊರತು ರೈತರನ್ನಲ್ಲ ಎಂದು ರೈತ ಸಂಘಟನೆಗಳು ಪ್ರಮುಖರು ಹೇಳಿದ್ದಾರೆ.
ಹರ್ಯಾಣದ ಭಾರತೀಯ ಕಿಸಾನ್ ಒಕ್ಕೂಟದ ಗುರ್ನಾಮ್ ಸಿಂಗ್ ಚಾಡುನಿಯವರಯ, ರೈತರ ಜೊತೆ ಮಾತನಾಡಲು ಕೇವಲ ಒಂದು ಕರೆಯಿಂದ ಮಾತ್ರ ದೂರವಿದ್ದೇನೆ ಎಂದು ಕೆಲದಿನಗಳ ಹಿಂದೆ ಪ್ರಧಾನಿ ಮೋದಿ ಹೇಳಿದ್ದರು. ಆದರೆ “ರೈತರು ಭಾರತದ ರಾಜಧಾನಿ ದೆಹಲಿಯ ಗಡಿಯಲ್ಲಿ ಅನೇಕ ದಿನಗಳಿಂದ ಕುಳಿತಿದ್ದಾರೆ. ಅವರು ಮಾತನಾಡಲು ಬಯಸಿದರೆ ಅಷ್ಟು ಸನಿಹದಲ್ಲಿರುವ ರೈತರನ್ನು ಏಕೆ ಕರೆಯುವುದಿಲ್ಲ ಎಂದು ಪ್ರಶ್ನಿಸಿದ್ದಾರೆ.
ದೆಹಲಿಯ ಗಡಿಯಲ್ಲಿ ಪ್ರತಿಭಟಿಸುವ ರೈತರನ್ನು ಸರ್ಕಾರ ಶತ್ರುಗಳಂತೆ ನೋಡುತ್ತಿರುವ ಬಗ್ಗೆ ಆಕ್ರೋಶ ವ್ಯಕ್ತಪಡಿಸಿರುವ ರೈತ ಒಕ್ಕೂಟದ ನಾಯಕರು ಪ್ರಧಾನಿ ಹೇಳಿದರೂ ತಮ್ಮ ಬೇಡಿಕೆ ಈಡೇರುವವರೆಗೂ ಹೋರಾಟದಿಂದ ಹಿಂದೆ ಸರಿಯುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ನಾವು ಸಂಸತ್ತಿನಲ್ಲಿ ಪ್ರಧಾನಿಯವರು ನೀಡಿದ ಹೇಳಿಕೆ ಆಧಾರದ ಮೇಲೆ ನಾವು ಹೋರಾಟ ಕೈ ಬಿಡಲು ಸಾಧ್ಯವಿಲ್ಲ, ಅದು ಕೇವಲ ಮಾತುಗಳು” ಎಂದು ಯೂನಿಯನ್ ಮುಖಂಡರೊಬ್ಬರು ಹೇಳಿದ್ದಾರೆ.
ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ಇತ್ತು, ಇದೆ ಹಾಗೂ ಮುಂದೆಯೀ ಇರಲಿದೆ ಎಂದು ಪ್ರದಾನಿಯವರ ಹೇಳಿಕೆಗೆ ಪ್ರತಿಕ್ರಿಯಿಸಿರುವ ರೈತ ನಾಯಕ ರಾಕೇಶ ಟಿಕಾಯಿತ್, ಹಾಗಾದರೆ ಕನಿಷ್ಠ ಬೆಂಬಲ ಬೆಲೆಗೆ (ಎಂಎಸ್‌ಪಿ) ಖಾತರಿ ನೀಡುವ ಕಾನೂನನ್ನು ಯಾಕೆ ಜಾರಿಗೊಳಿಸಬಾರದು ಎಂದು ಪ್ರಶ್ನಿಸಿದ್ದಾರೆ.
ಇದು ರೈತರ ದೀರ್ಘಕಾಲದ ಬೇಡಿಕೆಯಾಗಿದ್ದರೂ, ಮೂರು ಹೊಸ ಕೃಷಿ ಕಾನೂನುಗಳ ಹಿನ್ನೆಲೆಯಲ್ಲಿ ಇದು ತೀವ್ರತೆ ಪಡೆದುಕೊಂಡಿದೆ. ಸರ್ಕಾರಿ ಮಂಡಳಿಯಿಂದ ದೂರವಿರುವ ಖಾಸಗಿ ಕಂಪನಿ ಅಥವಾ ಖರೀದಿದಾರರು ರೈತರಿಗೆ ಮೊದಲು ಆಕರ್ಷಕ ಬೆಲೆಗಳನ್ನು ನೀಡುತ್ತಾರೆ ಮತ್ತು ಮಂಡಿ ವ್ಯವಸ್ಥೆಯು ದುರ್ಬಲಗೊಂಡ ನಂತರ ಕಂಪನಿಗಳೇ ಬೆಲೆ ನಿರ್ಧರಿಸುತ್ತವೆ ಮತ್ತು ನಂತರದ ದಿನಗಳಲ್ಲಿ ಬೆಲೆಯನ್ನು ಕಡಿಮೆ ಮಾಡಿಬಿಡುತ್ತವೆ ಎಂಬ ಭಯ ರೈತರಿಗಿದೆ.
ಹೀಗಾಗಿ ರೈತ ಒಕ್ಕೂಟಗಳು ಬಯಸುವುದೇನೆಂದರೆ ಕಾಸಗಿ ಕಂಪನಿಗಳು ಸಹ ರೈತರ ಉತ್ಪನ್ನಗಳನ್ನು ಎಂಎಸ್‌ಪಿ ಅಡಿಯಲ್ಲಿ ಖರೀದಿಸಬೇಕು ಎಂಬುದು.
ಮೋದಿಯವರು ಎಫ್‌ಡಿಐಗೆ ಮಾಡಿರುವ ಹೊಸ ವ್ಯಾಖ್ಯಾನ ವಿದೇಶಿ ವಿನಾಶಕಾರಿ ಐಡಿಯಾಲಜಿ” ಎಂಬುದು ಅಪಾಯಕಾರಿ ಹೇಳಿಕೆ ಎಂದು ಹೇಳಿರುವ ರೈತ ಒಕ್ಕೂಟಗಳು ರೈತರ ಚಳವಳಿಯ ವಿರುದ್ಧ ಮಾಡಿರುವ ಎಲ್ಲಾ ಆರೋಪಗಳು ಆಧಾರ ರಹಿತವೆಂದು ಹೇಳಿವೆ.
ಇಡೀ ಚಳವಳಿಯನ್ನೇ ಕೆಣಕುವ ಬದಲು, ಸರ್ಕಾರವು ಯಾರು ತಪ್ಪು ಮಾಡಿದ್ದಾರೋ ಅವರ ವಿರುದ್ಧ ಯಾಕೆ ಕ್ರಮ ಕೈಗೊಳ್ಳುತ್ತಿಲ್ಲ. ಎಲ್ಲವನ್ನೂ ಏಕೆ ಸಾರ್ವತ್ರೀಕರಣಗೊಳಿಸುವುದು ಎಂದು ಪ್ರಶ್ನಿಸುತ್ತಾರೆ.
ನಿಮ್ಮ ಕಾಮೆಂಟ್ ಬರೆಯಿರಿ