ರಾಮ್‌ ತೇರಿ ಗಂಗಾ ಮೈಲಿ ಖ್ಯಾತಿಯ ರಾಜೀವ ಕಪೂರ್‌ ಇನ್ನಿಲ್ಲ

ರಾಮ್‌ ತೇರಿ ಗಂಗಾ ಮೈಲಿ ಖ್ಯಾತ ಹಿಂದಿ ಚಿತ್ರದ ನಟ ರಾಜೀವ ಕಪೂರ ನಿಧನರಾಗಿದ್ದಾರೆ.
೫೮ರ ಹರೆಯದ ರಾಜೀವ ಕಪೂರ್‌ ಮಂಗಳವಾರ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ರಾಜಕಪೂರ-ಕೃಷ್ಣಾ ದಂಪತಿಯ ಅವರ ಕಿರಿಯ ಪುತ್ರರಾಗಿದ್ದ ರಾಜೀವ ಕಪೂರ್‌, ರಿಷಿ ಕಪೂರ ಹಾಗೂ ರಣಧೀರ ಕಪೂರ ಅವರ ಸೋದರರಾಗಿದ್ದರು.
1983 ರಲ್ಲಿ ಏಕ್ ಜಾನ್ ಹೈ ಹಮ್ ಚಿತ್ರದೊಂದಿಗೆ ಬಾಲಿವುಡ್‌ಗೆ ನಟನೆಗೆ ಪಾದಾರ್ಪಣೆ ಮಾಡಿದ್ದ ರಾಜೀವ ಕಪೂರ ಆಸ್ಮಾನ್ (1984), ಲವರ್ ಬಾಯ್ (1985), ಜಬರ್ದಸ್ತ್‌ (1985) ಸೇರಿದಂತೆ ಹಲವು ಚಿತ್ರಗಳಲ್ಲಿ ನಟಿಸಿದ್ದರು.
ಕಳೆದ ವರ್ಷ ಏಪ್ರಿಲ್‌ನಲ್ಲಿ ಕಪೂರ್ ಕುಟುಂಬವು ರಿಷಿ ಕಪೂರ್ ಅವರನ್ನು ಕಳೆದುಕೊಂಡಿತ್ತು. ಕ್ಯಾನ್ಸರ್ ವಿರುದ್ಧ ಎರಡು ವರ್ಷಗಳ ಸುದೀರ್ಘ ಯುದ್ಧದ ನಂತರ ಅವರು ಏಪ್ರಿಲ್ 30 ರಂದು ನಿಧನರಾದರು.

0 / 5. 0

ಶೇರ್ ಮಾಡಿ :
ಪ್ರಮುಖ ಸುದ್ದಿ :-   ವಿಭವಕುಮಾರ 7-8 ಬಾರಿ ನನ್ನ ಕಪಾಳಕ್ಕೆ ಹೊಡೆದಿದ್ದಾನೆ, ಹೊಟ್ಟೆಗೆ ಒದ್ದಿದ್ದಾನೆ....: ಎಫ್‌ಐಆರ್‌ನಲ್ಲಿ ಸಂಸದೆ ಸ್ವಾತಿ ಮಲಿವಾಲ್ ಆರೋಪ

ನಿಮ್ಮ ಕಾಮೆಂಟ್ ಬರೆಯಿರಿ

advertisement