ಹೊರಟ್ಟಿ ನಾನು ಮಂತ್ರಿಯಾಗಿದ್ರೆ ಸಮ್ಮಿಶ್ರ ಸರ್ಕಾರ ಬೀಳ್ತಿರಲಿಲ್ಲ

ಬೆಂಗಳೂರು: ವಿಧಾನಪರಿಷತ್ ಸಭಾಪತಿ ಬಸವರಾಜ್ ಹೊರಟ್ಟಿ ಹಾಗೂ ನಾನು ಮಂತ್ರಿಯಾಗಿದ್ದರೆ ಸಮ್ಮಿಶ್ರ ಸರ್ಕಾರ ಪತನವಾಗುತ್ತಿರಲಿಲ್ಲ ಎಂದು ಮಾಜಿ ಸಚಿವ ಎಚ್.ವಿಶ್ವನಾಥ್ ವಿಧಾನ ಪರಿಷತ್‍ನಲ್ಲಿ ಮಂಗಳವಾರಹೇಳಿದರು.
ನೂತನ ಸಭಾಪತಿ ಬಸವರಾಜ್ ಹೊರಟ್ಟಿ ಅವರನ್ನು ಅಭಿನಂದಿಸಿ ಮಾತನಾಡುತ್ತಿದ್ದ ಅವರು, ನಾವಿಬ್ಬರು ಮಂತ್ರಿಯಾಗಿದ್ದರೆ ಸಮ್ಮಿಶ್ರ ಸರ್ಕಾರ ಪತನವಾಗುತ್ತಿರಲಿಲ್ಲ ಎಂದಾಗ ಸದನದಲ್ಲಿ ನಗೆಯ ಅಲೆ ತೇಲಿ ಬಂದತು. ಕಾಂಗ್ರೆಸ್ ಸದಸ್ಯರ ಸಹಕಾರದಿಂದ ಸಭಾಪತಿಯಾಗಿ ಅವಿರೋಧವಾಗಿ ಆಯ್ಕೆಯಾಗಿದ್ದೀರಿ. ಹೊರಟ್ಟಿ ಎಂಬ ಶಬರಿ ಶಾಪವನ್ನು ಬಿಜೆಪಿಯ ಶ್ರೀರಾಮ ವಿಮೋಚನೆ ಮಾಡಿದ್ದಾರೆ ಎಂದಾಗ ಮತ್ತೆ ಸದನದಲ್ಲಿ ನಗೆಯ ಅಲೆ ಎದ್ದಿತು.
ಸಭಾಪತಿ ಹೊರಟ್ಟಿ ಹಾಗೂ ನಾನು ಜೆಡಿಎಸ್‍ನಲ್ಲಿದ್ದವರೇ. ಮರಿತಿಬ್ಬೇಗೌಡ ಅವರು ಮಾತನಾಡುವಾಗ, ಹೊರಟ್ಟಿಯವರು ಮಂತ್ರಿಯಾಗಬೇಕಿತ್ತು ಎಂದಿದ್ದರು. ಆದರೆ ಅದು ಆಗಲಿಲ್ಲ. ಕಾಂಗ್ರೆಸ್ ನನ್ನ ಪೂರ್ವಾಶ್ರಮ. ಎಸ್.ಎಂ.ಕೃಷ್ಣ ಮುಖ್ಯಮಂತ್ರಿಯಾಗಿದ್ದಾಗ ಶಿಕ್ಷಣ ಸಚಿವನಾಗಿದ್ದೆ. ಆಗ ನೀವು ಎಲ್ಲ ರೀತಿಯ ಸಹಕಾರವನ್ನು ಕೊಟ್ಟಿದ್ದೀರಿ ಎಂದು ಮೆಚ್ಚುಗೆ ಸೂಚಿಸಿದರು.

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement