ರೈತರ ಹೋರಾಟ ಪ್ರತಿಷ್ಠೆ ಪ್ರಶ್ನೆ ಆಗುವುದು ಬೇಡ

ರಾಯಚೂರು: ದೆಹಲಿಯಲ್ಲಿ ರೈತರು ನಡೆಸುತ್ತಿರುವ ಹೋರಾಟ ಪ್ರತಿಷ್ಠೆ ಪ್ರಶ್ನೆ ಆಗಬಾರದು. ಸಮಸ್ಯೆಯನ್ನು ಮಾತುಕತೆ ಮೂಲಕ ಬಗೆಹರಿಸಿಕೊಳ್ಳಬೇಕು ಎಂದು ಮಾಜಿ ಪ್ರಧಾನಿ ದೇವೇಗೌಡ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರೈತರಿಗೆ ನೋವು ಹೇಳಿಕೊಳ್ಳುವ ಸ್ವಾತಂತ್ರ್ಯವಿದೆ. ಚಳಿ ಲೆಕ್ಕಿಸದೆ ಹೋರಾಟ ಮಾಡಿಕೊಂಡು ಬಂದಿದ್ದಾರೆ. .ಕೇಂದ್ರ ಸರ್ಕಾರ ಅವಸರದಲ್ಲಿ ವಿಧೇಯಕ ಪಾಸು ಮಾಡಬಾರದಿತ್ತು. ಕೃಷಿ ಮಸೂದೆಗೆ ಎರಡ್ಮೂರು ತಿಂಗಳ ಕಾಲಾವಕಾಶ ತೆಗೆದುಕೊಳ್ಳಿ ಎಂಬ ಸಲಹೆ ಮಾಡಿದ್ದೆ. ರೈತರು 11 ಸಭೆಗಳಲ್ಲಿ ಶಾಂತಿಯುತವಾಗಿ ಭಾಗವಹಿಸಿದ್ದಾರೆ. ಗಣರಾಜ್ಯೋತ್ಸವ ದಿನದಂದು ನಡೆದ ಗಲಭೆಗೆ ಯಾರು ಕಾರಣ ಎಂಬುದು ತನಿಖೆ ನಡೆದಿದೆ ಎಂದರು.
ಹೋರಾಟಕ್ಕೆ ಖಲಿಸ್ತಾನ, ವಿದೇಶಿ ಹಣ ಬಂದಿತ್ತು ಎನ್ನುವ ಊಹಾಪೋಹಕ್ಕೆ ನಾನು ಉತ್ತರ ಕೊಡುವುದಿಲ್ಲ. ಗೃಹ ಸಚಿವಾಲಯ ಈ ಬಗ್ಗೆ ತನಿಖೆ ಮಾಡುತ್ತಿದ್ದು, ಅದರ ವರದಿ ಆಧಾರದ ಮೇಲೆ ಮತ್ತೆ ಮಾತನಾಡುತ್ತೇನೆ ಎಂದು ಹೇಳಿದರು.
ನಾಲ್ಕು ರಾಜ್ಯಗಳಲ್ಲಿನ ಚುನಾವಣೆಯಲ್ಲಿ ಬಿಜೆಪಿಗೆ ಹಿನ್ನೆಡೆಯಾಗಲಿದೆ. ತಮಿಳುನಾಡಿನಲ್ಲಿ ಬಿಜೆಪಿಗೆ ಹೆಚ್ಚು ಸ್ಥಾನ ಸಿಗುವುದಿಲ್ಲ. ಪಶ್ಚಿಮ ಬಂಗಾಳದಲ್ಲಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಧೈರ್ಯ ಮೆಚ್ಚುವಂಥದ್ದು, ಮತಗಳು ಕಡಿಮೆ ಬಂದ್ರೂ ಈ ಬಾರಿ ಮಮತಾ ಮತ್ತೆ ಅಧಿಕಾರ ಪಡೆಯಬಹುದು. ಇಡೀ ಬಿಜೆಪಿ ತಂಡಕ್ಕೆ ತಂಡವೇ ಪಶ್ಚಿಮ ಬಂಗಾಳದಲ್ಲಿ ನೆಲೆಯೂರಿದೆ ಎಂದರು.
ಅಲ್ಲಿನ ಸಚಿವರು, ಶಾಸಕರು ಪಕ್ಷ ಬಿಟ್ಟಿರವುದು ಟಿಎಂಸಿಗೆ ಸ್ವಲ್ಪ ಹಿನ್ನೆಡೆಯಾಗಿದೆ, ಆದರೂ ಅವರೇ ಮಮತಾ ಬ್ಯಾನರ್ಜಿಆಗಲಿದ್ದಾರೆ ಎಂದು ದೇವೇಗೌಡ ಭವಿಷ್ಯ ನುಡಿದರು.

ಪ್ರಮುಖ ಸುದ್ದಿ :-   ಮರ ಬಿದ್ದು ವ್ಯಕ್ತಿ ಮೃತಪಟ್ಟು ಎರಡು ದಿನ ಕಳೆದರೂ ಸ್ಥಳ ಬಿಟ್ಟು ಕದಲದ ಆತ ಒಯ್ಯುತ್ತಿದ್ದ ಕೋಳಿ...!

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement