ಉತ್ತರಾಖಂಡ: ಚಮೋಲಿ ಜಿಲ್ಲೆಯ ತಪೋವನ್‌ನಲ್ಲಿರುವ ಎನ್‌ಟಿಪಿಸಿ ಹೈಡಲ್ ವಿದ್ಯುತ್ ಯೋಜನೆಯಲ್ಲಿ 1.7 ಕಿಲೋಮೀಟರ್ ಉದ್ದದ ಸುರಂಗದಲ್ಲಿ ಸುಮಾರು 35 ಕಾರ್ಮಿಕರು ಸಿಕ್ಕಿಬಿದ್ದಿದ್ದಾರೆ.ಬುಧವಾರ ಸಂಜೆ ತನಕ, 1.7 ಕಿ.ಮೀ ಉದ್ದದ ಸುರಂಗದೊಳಗೆ 100 ಮೀಟರ್ ಸುರಂಗ ತೆರವುಗೊಳಿಸಲು ಸಾಧ್ಯವಾಯಿತು.
100 ಮೀ ನಂತರ ಪ್ರವಾಹದಿಂದ ತಂದ ದೊಡ್ಡ ಪ್ರಮಾಣದ ಕೆಸರು ತುಂಬಿದ್ದರಿಂದ ತೆರವಿಗೆ ಅಡಚಣೆಯಾಗಿದೆ.
ಡ್ರೋನ್‌ಗಳು ಮತ್ತು ಡಾಗ್ ಸ್ಕ್ವಾಡ್‌ಗಳನ್ನು ಬಳಸಲು ಎಸ್‌ಡಿಆರ್‌ಎಫ್ ಉಪ ಮಹಾನಿರ್ದೇಶಕ ರಿದ್ಧಿಮ್ ಅಗರ್‌ವಾಲ್ ಅನುಮತಿ ನೀಡಿದ್ದಾರೆ. ಸಿಕ್ಕಿಬಿದ್ದ ಕಾರ್ಮಿಕರನ್ನು ಪತ್ತೆಹಚ್ಚಲು ಸುರಂಗದ ಉಷ್ಣ ಮತ್ತು ಲೇಸರ್ ಸ್ಕ್ಯಾನಿಂಗ್‌ಗಾಗಿ ಡ್ರೋನ್‌ಗಳನ್ನು ಬಳಸಲಾಗುತ್ತಿದೆ.
ಇದಲ್ಲದೆ, ಸುರಂಗದ ಭೌಗೋಳಿಕ ನಕ್ಷೆ ಸಕ್ರಿಯಗೊಳಿಸಲು ಹೆಲಿಕಾಪ್ಟರ್‌ಗಳನ್ನು ರಿಮೋಟ್ ಸೆನ್ಸಿಂಗ್‌ಗಾಗಿ ಸಹ ಬಳಸಲಾಗುತ್ತಿದೆ. ಸಿಕ್ಕಿಬಿದ್ದ ಕಾರ್ಮಿಕರನ್ನು ತಲುಪಲು ಪ್ರಯತ್ನಿಸುವಾಗ ಬಂಡೆಗಳು ಮತ್ತು ಪ್ರವಾಹ ತಂದ ಭಾರೀ ಕೆಸರನ್ನು ತೆಗೆದುಹಾಕುವ ಸವಾಲನ್ನು ರಕ್ಷಣಾ ಕಾರ್ಯಕರ್ತರು ಎದುರಿಸುತ್ತಿದ್ದಾರೆ.
ಎಸ್‌ಡಿಆರ್‌ಎಫ್‌ನ ಕಮಾಂಡೆಂಟ್ ನವನೀತ್ ಭುಲ್ಲರ್, “ಬಂಡೆಗಳಿರುವ ಕಾರಣ ಸುರಂಗದೊಳಗಿನ ಕೆಸರು ತೆರವುಗೊಳಿಸುವ ಕಾರ್ಯದಿಂದ ತೆರವು ಕಾರ್ಯಾಚರಣೆ ನಿದಾನವಾಗುತ್ತಿದೆ ಎಂದು ತಿಳಿಸಿದರು.
“ಅವುಗಳನ್ನು ಕೈಯಾರೆ ತೆರವುಗೊಳಿಸುವುದು ಅಸಾಧ್ಯ. ಭಾರೀ ಉತ್ಖನನ ಯಂತ್ರಗಳಿಂದ ಮಾತ್ರ ಅವುಗಳನ್ನು ತೆರವುಗೊಳಿಸಬಹುದು. ಆದರೆ ಅದಕ್ಕೆ ಮಿತಿಗಳಿವೆ.” ಆದರೆ ನಿರಂತರ ಪ್ರಯತ್ನಗಳಿಂದ ಸಿಕ್ಕಿಬಿದ್ದ ಕಾರ್ಮಿಕರನ್ನು ತಲುಪುವ ಭರವಸೆ ನಮಗಿದೆ ಎಂದು ಹೇಳಿದರು.
ಮಂಗಳವಾರ ಸಂಜೆ ಅಣೆಕಟ್ಟು ಸ್ಥಳಕ್ಕೆ ಭೇಟಿ ನೀಡಿದ ನಂತರ ಮುಖ್ಯಮಂತ್ರಿ ತ್ರಿವೇಂದ್ರ ಸಿಂಗ್ ರಾವತ್ ಅವರು, ರಕ್ಷಣಾ ಕಾರ್ಯಕರ್ತರು ಈಗ ಪರ್ಯಾಯ ಮಾರ್ಗವನ್ನು ಬಳಸಿಕೊಂಡು ಸುರಂಗದೊಳಗೆ ಹೋಗಲು ಯೋಜಿಸುತ್ತಿದ್ದಾರೆ ಎಂದು ಹೇಳಿದ್ದಾರೆ.ಬುಧವಾರ ಸಂಜೆ ತನಕ, ಸುಮಾರು 34 ಶವಗಳನ್ನು ಹೊರ ತೆಗೆಯಲಾಗಿದೆ.೧೦ ಶವಗಳನ್ನು ಗುರುತಿಸಲಾಗಿದೆ. ಇನ್ನೂ ೧೭೦ ಜನರು ನಾಪತ್ತೆಯಾಗಿರುವ ಬಗ್ಗೆ ವರದಿಯಿದೆ.
ನಿಮ್ಮ ಕಾಮೆಂಟ್ ಬರೆಯಿರಿ