500ಕ್ಕೂ ಹೆಚ್ಚು ಖಾತೆ ತಡೆಹಿಡಿದ ಟ್ವಟ್ಟರ್‌

ನವ ದೆಹಲಿ: ಸರ್ಕಾರ ನೀಡಿದ ನೋಟಿಸ್‌ನಲ್ಲಿ ಗುರುತಿಸಲಾದ ಕೆಲವು ಖಾತೆಗಳನ್ನು ತಡೆಹಿಡಿಯಲಾಗಿದೆ ಎಂದು ಟ್ವಿಟ್ಟರ್‌ ಬುಧವಾರ ತಿಳಿಸಿದೆ. ಆದಾಗ್ಯೂ, ಸುದ್ದಿ ಮಾಧ್ಯಮ ಸಂಸ್ಥೆಗಳು, ಪತ್ರಕರ್ತರು, ಕಾರ್ಯಕರ್ತರು ಮತ್ತು ರಾಜಕಾರಣಿಗಳ ಖಾತೆಗಳ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ; ತಡೆಹಿಡಿಯಲಾದ ಖಾತೆಗಳು ಭಾರತದ ಹೊರಗೆ ಲಭ್ಯವಿದೆ.
ಟ್ವಿಟರ್ ನಿಯಮಗಳ ಸ್ಪಷ್ಟ ಉಲ್ಲಂಘನೆಗಾಗಿ ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಸಚಿವಾಲಯದ ಆದೇಶಗಳಂತೆ 500ಕ್ಕೂ ಹೆಚ್ಚು ಖಾತೆಗಳ ವಿರುದ್ಧ ಕೆಲವು ಪ್ರಕರಣಗಳಲ್ಲಿ ಶಾಶ್ವತ ಅಮಾನತು ಸೇರಿದಂತೆ ಹಲವಾರು ಜಾರಿ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಎಂದು ಬ್ಲಾಗ್ ಪೋಸ್ಟ್‌ನಲ್ಲಿ ಮೈಕ್ರೋ-ಬ್ಲಾಗಿಂಗ್ ಪ್ಲಾಟ್‌ಫಾರ್ಮ್ ಹೇಳಿದೆ.
ಹಾನಿಕಾರಕ ವಿಷಯ ಹೊಂದಿರುವ ಹ್ಯಾಶ್‌ಟ್ಯಾಗ್‌ಗಳನ್ನು ಕಡಿಮೆ ಮಾಡಲು ನಾವು ಕ್ರಮಗಳನ್ನು ತೆಗೆದುಕೊಂಡಿದ್ದೇವೆ, ಅಂಥ ಕಾತೆಗಳನ್ನು ಟ್ವಿಟರ್‌ನಲ್ಲಿ ಟ್ರೆಂಡಿಂಗ್ ಮಾಡುವುದು ಹಾಗೂ ಶಿಫಾರಸು ಮಾಡುವುದನ್ನು ಸಹ ಎಂದು ತಡೆಹಿಡಿಯಲಾಗಿದೆ ಎಂದು ಅದು ಹೇಳಿದೆ.
ಕೆಲವು ಖಾತೆಗಳನ್ನು ತಡೆಹಿಡಿಯಲಾಗಿದೆ. ಸುದ್ದಿ ಮಾಧ್ಯಮ ಸಂಸ್ಥೆಗಳು, ಪತ್ರಕರ್ತರು, ಕಾರ್ಯಕರ್ತರು ಮತ್ತು ರಾಜಕಾರಣಿಗಳ ಖಾತೆಗಳ ಮೇಲೆ ಯಾವುದೇ ಕ್ರಮ ಕೈಗೊಂಡಿಲ್ಲ. ಹಾಗೆ ಮಾಡಿದರೆ ಭಾರತೀಯ ಕಾನೂನಿನಡಿಯಲ್ಲಿ ಅವರ ಮುಕ್ತ ಅಭಿವ್ಯಕ್ತಿ ಹಕ್ಕಿನ ಉಲ್ಲಂಘಟನೆಯಾಗುತ್ತದೆ ಭಾವಿಸುತ್ತೇವೆ. ಫೆಬ್ರವರಿ 10ರಂದು ಕೈಗೊಂಡ ಕ್ರಮಗಳ ಬಗ್ಗೆ ನಾವು ಎಲೆಕ್ಟ್ರಾನಿಕ್ಸ್‌ ಮತ್ತು ಈಟಿ ಸಚಿವಾಲಯಕ್ಕೆ ತಿಳಿಸಿದ್ದೇವೆ ಟ್ವಿಟ್ಟರ್‌ ತಿಳಿಸಿದೆ.
ಟ್ವಿಟರ್, ನಿಯಮಗಳನ್ನು ಉಲ್ಲಂಘಿಸಿದ ನೂರಾರು ಖಾತೆಗಳ ವಿರುದ್ಧ ಕ್ರಮ ಕೈಗೊಂಡಿದೆ, ವಿಶೇಷವಾಗಿ ಹಿಂಸೆ, ನಿಂದನೆ, ಹಾನಿ ಕಾರಕ ಸಂದೇಶಗಳು ಮತ್ತು ಬೆದರಿಕೆಗಳು ಹಾಗೂ ಹಿಂಸೆ ಪ್ರಚೋದಿಸುವುದು, ಇಂಥವುಗಳು ಟ್ರೆಂಡ್ಸ್ ವಿಭಾಗದಲ್ಲಿ ಕಾಣಿಸಿಕೊಳ್ಳುವುದನ್ನು ಅಮಾನತುಗೊಳಿಸಲಾಗಿದೆ. 500ಕ್ಕೂ ಹೆಚ್ಚು ಖಾತೆಗಳನ್ನು ತಡೆಹಿಡಿಯಲಾಗಿದೆ ಎಂದು ಟ್ವಿಟ್ಟರ್‌ ತಿಳಿಸಿದೆ.
ಜನರ ಪರವಾಗಿ ಮುಕ್ತ ಅಭಿವ್ಯಕ್ತಿ ಹಕ್ಕು ಪ್ರತಿಪಾದಿಸುವುದನ್ನು ನಾವು ಮುಂದುವರಿಸುತ್ತೇವೆ ಮತ್ತು ಭಾರತೀಯ ಕಾನೂನಿನಡಿಯಲ್ಲಿ ಆಯ್ಕೆಗಳನ್ನು ಸಕ್ರಿಯವಾಗಿ ಅನ್ವೇಷಿಸುತ್ತಿದ್ದೇವೆ. ಟ್ವಿಟರ್‌ನಲ್ಲಿ ನಡೆಯುವ ಆರೋಗ್ಯಕರ ಚರ್ಚೆಯನ್ನು ಕಾಪಾಡಲು ನಾವು ಬದ್ಧರಾಗಿದ್ದೇವೆ ಎಂದು ಕಂಪನಿ ಹೇಳಿದೆ.

ಪ್ರಮುಖ ಸುದ್ದಿ :-   ಚುನಾವಣಾ ಭಾಷಣ ಮಾಡುವ ವೇಳೆ ವೇದಿಕೆಯಲ್ಲೇ ಕುಸಿದು ಬಿದ್ದ ಕೇಂದ್ರ ಸಚಿವ ನಿತಿನ್ ಗಡ್ಕರಿ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement