ಎಲ್ಲರೂ ಲಸಿಕೆ ಪಡೆದ ನಂತರ ಬಂಗಾಳದಲ್ಲಿ ಸಿಎಎ ಜಾರಿ: ಅಮಿತ್‌ ಶಾ

ಕೊಲ್ಕತಾ: ಪಶ್ಚಿಮ ಬಂಗಾಳದಲ್ಲಿ ಸಿಎಎ ಮತ್ತು ಎನ್‌ಆರ್‌ಸಿ ಅನುಷ್ಠಾನಕ್ಕೆ ಸಂಬಂಧಿಸಿದ ಊಹಾಪೋಹಗಳಿಗೆ ಅಂತ್ಯ ಹಾಡಿದ ಕೇಂದ್ರ ಗೃಹ ಸಚಿವ ಅಮಿತ್ ಶಾ, ಠಾಕೂರ್‌ನಗರದಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಮಾತನಾಡುತ್ತಾ, ದೇಶದ ಪ್ರತಿಯೊಬ್ಬರಿಗೂ ಕೊರೋನಾ ಲಸಿಕೆ ಹಾಕಿದ ನಂತರ, ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಸಿಎಎ ಜಾರಿಗೆ ತರಲಿದೆ ಎಂದು ಹೇಳಿದ್ದಾರೆ.
ಪಶ್ಚಿಮ ಬಂಗಾಳದ ಮಾಟುವಾಸ್ ಮತ್ತು ಅಲ್ಪಸಂಖ್ಯಾತರು ಸಿಎಎ ಬಗ್ಗೆ ಚಿಂತಿಸಬಾರದು. ಎಲ್ಲರೂ ದೇಶದ ಪ್ರಜೆಗಳು ಮತ್ತು ಯಾರನ್ನೂ ಬೇರೆಡೆಗೆ ಕಳುಹಿಸಲಾಗುವುದಿಲ್ಲ ”ಎಂದು ಹೇಳಿದ ಶಾ, ಎಲ್ಲಾ ವಿರೋಧ ಪಕ್ಷಗಳು ಮತ್ತು ಆಡಳಿತಾರೂಢ ತೃಣಮೂಲ ಕಾಂಗ್ರೆಸ್ ಸಿಎಎ ಬಗ್ಗೆ ‘ತಪ್ಪು ಮಾಹಿತಿ’ ಹರಡುತ್ತಿವೆ, ಈ ಕಾಯ್ದೆಯ ಅನುಷ್ಠಾನವು ಭಾರತೀಯ ಅಲ್ಪಸಂಖ್ಯಾತರ ಪೌರತ್ವ ಸ್ಥಾನಮಾನದ ಮೇಲೆ ಯಅವುದೇ ಪರಿಣಾಮ ಬೀರುವುದಿಲ್ಲ ಎಂದು ಭರವಸೆ ನೀಡಿದರು.

 

 

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement