ಮಹಾರಾಷ್ಟ್ರಕ್ಕೆ ತೆರಳುವ ಕೇರಳದವರಿಗೆ ಕೊರೋನಾ ಪರೀಕ್ಷೆ ಕಡ್ಡಾಯ

ಮುಂಬೈ: ಕೇರಳದಿಂದ ಮಹಾರಾಷ್ಟ್ರಕ್ಕೆ ಬರುವ ಎಲ್ಲ ಪ್ರಯಾಣಿಕರು ಕೊರೊನಾ ಪರೀಕ್ಷೆ ನೆಗೆಟಿವ್‌ ವರದಿ ಹೊಂದಿರುವುದು ಕಡ್ಡಾಯ ಎಂದು ಮಹಾರಾಷ್ಟ್ರ ಸರಕಾರ ಸೂಚನೆ ನೀಡಿದೆ.
ಸರಕಾರ ಹೊರಡಿಸಿದ ನೂತನ ಸ್ಟಾಂಡರ್ಡ್‌ ಆಪರೇಟಿಂಗ್‌ ಪ್ರಾಸಿಜರ್ಸ್‌ ಪ್ರಕಾರ ಕೇರಳದಿಂದ ರಾಜ್ಯಕ್ಕೆ ಬರುವವರು ಕಡ್ಡಾಯವಾಗಿ ಕೋವಿಡ್‌-೧೯ ಪರೀಕ್ಷೆಯ ನೆಗೆಟಿವ್‌ ವರದಿ ಹೊಂದಿರಬೇಕು. ಇದಕ್ಕೂ ಮೊದಲು ಮಹಾರಾಷ್ಟ್ರ ಸರ್ಕಾರ ದೆಹಲಿ, ರಾಜಸ್ಥಾನ, ಗುಜರಾತ್ ಮತ್ತು ಗೋವಾದಿಂದ ವಿಮಾನಗಳು ಅಥವಾ ರೈಲುಗಳ ಮೂಲಕ ಪ್ರಯಾಣಿಸುವ ಜನರು ಕೊರೊನಾ ನೆಗೆಟಿವವ ವರದಿಯನ್ನು ಹೊಂದಿರಬೇಕು ಎಂದು ಸಲಹೆ ನೀಡಿತ್ತು.
ಆರ್‌ಟಿ-ಪಿಸಿಆರ್‌ ಮಾದರಿಯನ್ನು ಮಹಾರಾಷ್ಟ್ರಕ್ಕೆ ಪ್ರವೇಶಿಸುವ ೯೬ ಗಂಟೆಗಳೊಳಗೆ ಪಡೆದುಕೊಂಡಿರಬೇಕು. ರೋಗಲಕ್ಷಣಗಳಿಲ್ಲದ ಪ್ರಯಾಣಿಕರಿಗೆ ಪ್ರವೇಶವನ್ನು ಅನುಮತಿಸಲಾಗುವುದು. ರೋಗಲಕ್ಷಣಗಳನ್ನು ಹೊಂದಿರುವ ಪ್ರಯಾಣಿಕರು ಹಿಂತಿರುಗಿ ಹೋಗುವ ಮತ್ತು ಚೇತರಿಸಿಕೊಳ್ಳಲು ತಮ್ಮ ಮನೆಗೆ ಹೋಗುವ ಆಯ್ಕೆಯನ್ನು ಹೊಂದಿರುತ್ತಾರೆ. ರೋಗಲಕ್ಷಣಗಳು ಕಾಣಿಸಿಕೊಂಡ ಪ್ರಯಾಣಿಕರನ್ನು ಪ್ರತ್ಯೇಕಿಸಿ ಆಂಟಿಜೆನ್ ಪರೀಕ್ಷೆಗೆ ಒಳಪಡಿಸಬೇಕು. ಆಂಟಿಜೆನ್ ಪರೀಕ್ಷೆ ನೆಗೆಟಿವ್‌ ಆದರೆ ಮಾತ್ರ ಪ್ರಯಾಣಿಕರಿಗೆ ಮಹಾರಾಷ್ಟ್ರಕ್ಕೆ ಪ್ರಯಾಣಿಸಲು ಅವಕಾಶವಿರುತ್ತದೆ.
ಕೋವಿಡ್ ಪಾಸಿಟಿವ್‌ ಹೊಂದಿದವರನ್ನು ಕೋವಿಡ್ ಕೇರ್ ಸೆಂಟರ್ (ಸಿಸಿಸಿ) ಗೆ ಕಳುಹಿಸಲಾಗುತ್ತದೆ. ಸಿಸಿಸಿ ಸೇರಿದಂತೆ ಆರೈಕೆಯ ವೆಚ್ಚವನ್ನು ಪ್ರಯಾಣಿಕರಿಂದಲೇ ಭರಿಸಲಾಗುವುದು ಎಂದು ಮಹಾರಾಷ್ಟ್ರ ಸರಕಾರ ತಿಳಿಸಿದೆ.

ಪ್ರಮುಖ ಸುದ್ದಿ :-   ಚಲನಚಿತ್ರ ನಿರ್ದೇಶಕ ರಾಮಗೋಪಾಲ ವರ್ಮಾಗೆ ಮೂರು ತಿಂಗಳು ಜೈಲು ಶಿಕ್ಷೆ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement