ರಾಜ ಭವನ ಚಲೋ ವೇಳೆ ಕೊಲ್ಕತ್ತಾದಲ್ಲಿ ಹಿಂಸಾಚಾರ

ಕೊಲ್ಕತ್ತ: ಎಡ ಪಕ್ಷಗಳ ವಿದ್ಯಾರ್ಥಿಗಳ ಸಂಘಟನೆ ಆಯೋಜಿಸಿದ್ದ ರಾಜಭವನ ಚಲೋ ಮೆರವಣಿಗೆಯಲ್ಲಿ  ಕೊಲ್ಕತ್ತಾದಲ್ಲಿ ಹಿಂಸಾಚಾರ ನಡೆದಿದೆ.

ತೃಣಮೂಲ ಕಾಂಗ್ರೆಸ್ ಸರ್ಕಾರದ ನೀತಿಗಳನ್ನು ವಿರೋಧಿಸಿ ಯುವಕರಿಗೆ “ಉದ್ಯೋಗ” ನೀಡುವಂತೆ ಒತ್ತಾಯಿಸಲು ರಾಜಭವನ ಚಲೋ ಹಮ್ಮಿಕೊಳ್ಳಲಾಗಿತ್ತು.ಅಲ್ಲದೇ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಎದುರು ಕೆಂಪು ಕಾರ್ಡ್‌ ಪ್ರದರ್ಶಿಸುವುದು ಅವರ ಉದ್ದೇಶವಾಗಿತ್ತು.

ಕೋಲ್ಕತ್ತದಡೊರಿನಾ ಕ್ರಾಸಿಂಗ್‌ನಲ್ಲಿ ಹಿಂಸಾಚಾರ ಆರಂಭಗೊಂಡ ನಂತರ ಪ್ರತಿಭಟನಾ ನಿರತರನ್ನು ನಿಯಂತ್ರಿಸಲು ಜಲಫಿರಂಗಿ ಬಳಸಲಾಯಿತು. ಹಿಂಸಾಚಾರದಲ್ಲಿ ಹಲವು ಯುವಕರು ಗಾಯಗೊಂಡಿದ್ದಾರೆ.

ನಂತರ ಜನಸಮೂಹ ಚದುರಿಸಲು ಅಶ್ರವಾಯು ಬಳಸಲಾಯಿತು. ಸಿಪಿಐಎಂ ಪೊಲೀಸರ ದೌರ್ಜನ್ಯವನ್ನು ಖಂಡಿಸಿದೆ. ಯುವಕರು ಉದ್ಯೋಗಕ್ಕಾಗಿ ಶಾಂತ ರೀತಿಯಿಂದ ಮೆರವಣಿಗೆ ನಡೆಸುತ್ತಿದ್ದ ಸಂದರ್ಭದಲ್ಲಿ ಪೊಲೀಸರು ದೌರ್ಜನ್ಯ ನಡೆಸಿದ್ದಾರೆ ಎಂದು ಸಿಪಿಐಎಂ ಮುಖಂಡ ಎಂ.ಡಿ. ಸಲೀಮ್‌ ಹೇಳಿದ್ದಾರೆ.

 

0 / 5. 0

ಶೇರ್ ಮಾಡಿ :
ಪ್ರಮುಖ ಸುದ್ದಿ :-   ಜಮ್ಮು-ಕಾಶ್ಮೀರ ವಿಧಾನಸಭೆ ಚುನಾವಣೆಗೆ ಒಂದು ವಾರ ಮುನ್ನ ಎನ್‌ ಕೌಂಟರ್‌ನಲ್ಲಿ ಮೂವರು ಉಗ್ರರ ಹತ್ಯೆ

ನಿಮ್ಮ ಕಾಮೆಂಟ್ ಬರೆಯಿರಿ

advertisement