ಸರ್ಕಾರಿ ವಿಮಾನದಲ್ಲಿ ರಾಜ್ಯಪಾಲರ ಪ್ರಯಾಣಕ್ಕೆ ಅನುಮತಿ ಕೊಡದ ಮಹಾ ಸರ್ಕಾರ

ಮುಂಬೈ: ಮಹಾರಾಷ್ಟ್ರದ ರಾಜ್ಯಪಾಲ ಭಗತ್ ಸಿಂಗ್ ಕೋಶಿಯಾರಿ ಅವರಿಗೆ ಸರ್ಕಾರಿ ವಿಮಾನದಲ್ಲಿ ತೆರಳುವುದಕ್ಕೆ ಮಹಾರಾಷ್ಟ್ರ ಸರ್ಕಾರ ಅನುಮತಿ ನಿರಾಕರಿಸಿದೆ.
ಫೆ.11ರಂದು ರಾಜ್ಯಪಾಲ ಕೋಶಿಯಾರಿಯವರು ಉತ್ತರಾಖಂಡ್ ನ ಡೆಹ್ರಾಡೂನ್ ಗೆ ಪ್ರಯಾಣ ಮಾಡಬೇಕಿತ್ತು, ಇದಕ್ಕಾಗಿ ಸರ್ಕಾರಿ ವಿಮಾನವನ್ನೂ ಕಾಯ್ದಿರಿಸಲಾಗಿತ್ತು. ಆದರೆ ರಾಜ್ಯಪಾಲರಿಗೆ ಅನುಮತಿ ಸಿಗದ ಕಾರಣ ವಾಣಿಜ್ಯ ಪ್ರಯಾಣಿಕರ ವಿಮಾನವನ್ನೇ ಬಳಸಿ ಪ್ರಯಾಣ ಮಾಡಿದ್ದಾರೆ.
ಬಿಜೆಪಿ ಈ ಘಟನೆ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, ಉದ್ಧವ್ ಠಾಕ್ರೆ ಸರ್ಕಾರ ರಾಜ್ಯಪಾಲರಿಗೆ ಕ್ಷಮೆ ಕೇಳಬೇಕೆಂದು ಒತ್ತಯಿಸಿದೆ.
ರಾಜ್ಯಪಾಲ ಕೋಶಿಯಾರಿ ಅವರು ಫೆ.12 ರಂದು ಮಸ್ಸೂರಿಯಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಭಾಗಿಯಾಗಲು ಉತ್ತರಾಖಂಡ್ ಗೆ ತೆರಳಿದ್ದಾರೆ. ಫೆ.11 ರಂದು ಬೆಳಿಗ್ಗೆ 10 ಮುಂಬೈನಿಂದ ಅವರು ಹೊರಡಬೇಕಿತ್ತು. ರಾಜ್ಯಪಾಲರು ಸರ್ಕಾರಿ ವಿಮಾನದಲ್ಲಿ ತೆರಳಲು ಅನುಮತಿಗಾಗಿ ಕಾಯುವುದಿಲ್ಲ, ಇದು ನಡೆದು ಬಂದ ಪರಂಪರೆ. ಅಂತೆಯೇ ಕೋಶಿಯಾರಿಯವರೂ ಬೆಳಿಗ್ಗೆ ವಿಮಾನ ಹತ್ತಿ ಕುಳಿತರು. ಆದರೆ ಪೈಲಟ್ ಮಾತ್ರ ತನಗೆ ಇನ್ನೂ ಅನುಮತಿ ಸಿಕ್ಕಿಲ್ಲ ಎಂದು ಹೇಳಿದ್ದಾರೆ. ನಂತರ ರಾಜ್ಯಪಾಲರ ಕಚೇರಿಯಿಂದ ಬೇರೆ ವಿಮಾನದಲ್ಲಿ ಟಿಕೆಟ್ ಬುಕ್ ಮಾಡಿ ಮಧ್ಯಾಹ್ನ 12.15 ಸುಮಾರಿಗೆ ಡೆಹ್ರಾಡೂನ್ ಗೆ ಪ್ರಯಾಣಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಇದರಿಂದಾಗಿ ಮಹಾರಾಷ್ಟ್ರ ಸರ್ಕಾರ ಹಾಗೂ ರಾಜ್ಯಪಾಲರ ನಡುವಿನ ತಿಕ್ಕಾಟ ತಾರಕಕ್ಕೇರಿದಂತಾಗಿದೆ.

ಇಂದಿನ ಪ್ರಮುಖ ಸುದ್ದಿ :-   ಓಂಕಾರೇಶ್ವರದಲ್ಲಿ108 ಅಡಿ ಎತ್ತರದ ಆದಿ ಶಂಕರಾಚಾರ್ಯರ ಪ್ರತಿಮೆ ಅನಾವರಣ

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ.

(1. ಚೆನ್ನಾಗಿಲ್ಲ. 2. ಸಾಧಾರಣ. 3. ಪರವಾಗಿಲ್ಲ. 4. ಉತ್ತಮ . 5. ಅತ್ಯುತ್ತಮ)

0 / 5. ಒಟ್ಟು ವೋಟುಗಳು 0

ನಿಮ್ಮ ಕಾಮೆಂಟ್ ಬರೆಯಿರಿ

ಕನ್ನಡಿ ನ್ಯೂಸ್ ನ ದಿನದ ಪ್ರಮುಖ ಸುದ್ದಿಗಳು ಮತ್ತು ಮಾಹಿತಿಗಾಗಿ
ವಾಟ್ಸಾಪ್ ಗ್ರೂಪ್ ಸೇರಿ
ಟೆಲಿಗ್ರಾಮ್ ಚಾನೆಲ್ ಸೇರಿ
ಫೇಸ್ ಬುಕ್ ಫಾಲೋ ಮಾಡಿ
ಗೂಗಲ್ ನ್ಯೂಸ್ ನಲ್ಲಿ ಸೇರಿ
ಟ್ವಿಟರ್ ನಲ್ಲಿ ಫಾಲೋ ಮಾಡಿ
advertisement