ಪಾಂಗೋಂಗ್‌ ಲೇಕ್‌ನಿಂದ ಹಂಹಂತವಾಗಿ ಸೈನ್ಯ ಹಿಂತೆಗೆತ: ರಾಜನಾಥ್‌

ನವದೆಹಲಿ: ಭಾರತ ಹಾಗೂ ಚೀನಾ ದೇಶಗಳ ಮಾತುಕತೆಯಿಂದಾಗಿ ಪಾಂಗೋಂಗ್‌ ಸರೋವರದ ಉತ್ತರ ಹಾಗೂ ದಕ್ಷಿಣ ತೀರದಿಂದ ಸೈನ್ಯ ಹಿಂತೆಗೆಯುವ ಒಪ್ಪಂದಕ್ಕೆ ಕಾರಣವಾಗಿದ್ದು, ಉಭಯ ದೇಶಗಳು ಸಮನ್ವಯತೆಯಿಂದ ಹಂತ ಹಂತವಾಗಿ ಸೈನ್ಯವನ್ನು ಹಿಂದಕ್ಕೆ ಕರೆಸಿಕೊಳ್ಳಲಿವೆ ಎಂದು ರಕ್ಷಣಾ ಸಚಿವ ರಾಜನಾಥ ಸಿಂಗ್‌ ಹೇಳಿದರು.
ಪೂರ್ವ ಲಡಾಕ್‌ನ ಪಂಗೊಂಗ್ ಸರೋವರದ ದಕ್ಷಿಣ ಮತ್ತು ಉತ್ತರದ ದಡಗಳಲ್ಲಿ ಭಾರತೀಯ ಮತ್ತು ಚೀನಾ ತಮ್ಮ ಸೈನ್ಯವನ್ನು ಹಿಂದಕ್ಕೆ ಕರೆಸಿಕೊಳ್ಳಲಾರಂಭಿಸಿವೆ ಎಂದು ಎಂದು ಚೀನಾದ ರಕ್ಷಣಾ ಸಚಿವಾಲಯ ಬೀಜಿಂಗ್‌ನಲ್ಲಿ ಹೇಳಿಕೆ ನೀಡಿದ ಮರುದಿನ ರಾಜ್ಯಸಭೆಯಲ್ಲಿ ಸಿಂಗ್ ನೀಡಿದ ಹೇಳಿಕೆ ಮಹತ್ವ ಪಡೆದುಕೊಂಡಿದೆ.
ನಿಯಂತ್ರಣ ರೇಖೆಯಲ್ಲಿ ಶಾಂತಿಯುತ ಪರಿಸ್ಥಿತಿಯನ್ನು ಕಾಪಾಡಿಕೊಳ್ಳಲು ನಾವು ಬದ್ಧರಾಗಿದ್ದೇವೆ. ದ್ವಿಪಕ್ಷೀಯ ಸಂಬಂಧಗಳನ್ನು ಕಾಪಾಡಿಕೊಳ್ಳಲು ಭಾರತ ಯಾವಾಗಲೂ ಒತ್ತು ನೀಡಿದೆ ಎಂದು ಸಿಂಗ್ ಹೇಳಿದರು.
ದೇಶದ ಸಾರ್ವಭೌಮತ್ವವನ್ನು ರಕ್ಷಿಸಲು ಯಾವುದೇ ಸವಾಲನ್ನು ಎದುರಿಸಲು ಸದಾ ಸಿದ್ಧ ಎಂದು ನಮ್ಮ ಭದ್ರತಾ ಪಡೆಗಳು ಸಾಬೀತುಪಡಿಸಿವೆ. ಚೀನಾದೊಂದಿಗಿನ ನಮ್ಮ ನಿರಂತರ ಮಾತುಕತೆಗಳು ಪಾಂಗೊಂಗ್ ಸರೋವರದ ಉತ್ತರ ಮತ್ತು ದಕ್ಷಿಣದ ತೀರದಲ್ಲಿ ಸೈನ್ಯ ಹಿಂದಕ್ಕೆ ಕರೆಸಿಕೊಳ್ಳುವ ಒಪ್ಪಂದಕ್ಕೆ ಕಾರಣವಾಗಿವೆ ಎಂದು ರಕ್ಷಣಾ ಸಚಿವ ಹೇಳಿದರು.
ಚೀನಾವು ಎಲ್‌ಎಸಿ ಬಳಿ ಮತ್ತು ಹತ್ತಿರದ ಪ್ರದೇಶದಲ್ಲಿ ಭಾರಿ ಪ್ರಮಾಣದಲ್ಲಿ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳನ್ನು ಸಂಗ್ರಹಿಸಿದೆ. ನಮ್ಮ ಪಡೆಗಳು ಸಹ ಸಮರ್ಪಕವಾಗಿ ಮತ್ತು ಪರಿಣಾಮಕಾರಿಯಾಗಿ ಕೌಂಟರ್ ನಿಯೋಜನೆಯನ್ನು ಮಾಡಿಕೊಂಡಿವೆ ಎಂದು ಅವರು ಹೇಳಿದರು.
ಕಳೆದ ವರ್ಷದಿಂದ, ನಾವು ಚೀನಾದೊಂದಿಗೆ ಮಿಲಿಟರಿ ಮತ್ತು ರಾಜತಾಂತ್ರಿಕ ಮಟ್ಟದಲ್ಲಿ ಉತ್ತಮ ಸಂಬಂಧವನ್ನು ಉಳಿಸಿಕೊಂಡಿದ್ದೇವೆ. ಮಾತುಕತೆಯ ಸಮಯದಲ್ಲಿ, ನಾವು ಮೂರು ತತ್ವಗಳ ಆಧಾರದ ಮೇಲೆ ಸಮಸ್ಯೆಯ ಪರಿಹಾರವನ್ನು ಬಯಸುತ್ತೇವೆ ಎಂದು ಚೀನಾಕ್ಕೆ ತಿಳಿಸಿದ್ದೇವೆ: ಮೊದಲನೆಯದಾಗಿ, ಎರಡೂ ಪಕ್ಷಗಳು ಎಲ್‌ಎಸಿಯನ್ನು ಒಪ್ಪಬೇಕು ಮತ್ತು ಅದನ್ನು ಗೌರವಿಸಬೇಕು. ಎರಡನೆಯದಾಗಿ, ಯಾವುದೇ ಪಕ್ಷವು ಏಕಪಕ್ಷೀಯವಾಗಿ ಸ್ಥಾನಮಾನವನ್ನು ಬದಲಾಯಿಸುವ ಪ್ರಯತ್ನ ಮಾಡಬಾರದು. ಮೂರನೆಯದಾಗಿ, ಎಲ್ಲಾ ರಾಜಿಗಳನ್ನು ಎರಡೂ ಪಕ್ಷಗಳು ಸಂಪೂರ್ಣವಾಗಿ ಒಪ್ಪಿಕೊಳ್ಳಬೇಕು ಎಂದು ಅವರು ನುಡಿದರು.

ಪ್ರಮುಖ ಸುದ್ದಿ :-   ನಿಮ್ಮವನಾಗಿದ್ದೆ...ಯಾವಾಗಲೂ ನಿಮ್ಮವನಾಗಿಯೇ ಇರ್ತೇನೆ..: ಬಿಜೆಪಿ ಟಿಕೆಟ್ ನಿರಾಕರಣೆ ನಂತ್ರ ಪಿಲಿಭಿತ್‌ ಜನತೆಗೆ ʼಹೃದಯಸ್ಪರ್ಶಿʼ ಪತ್ರ ಬರೆದ ವರುಣ ಗಾಂಧಿ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement