ನೋಟಿಸ್‌ ಕೈಗೆ ಸಿಕ್ಕಿಲ್ಲ, ಹೆದರುವವನಲ್ಲ, ಕ್ಷಮೆ ಕೇಳಲ್ಲ:ಯತ್ನಾಳ

posted in: ರಾಜ್ಯ | 0

ಬೆಂಗಳೂರು: ಬಿಜೆಪಿ ಹೈಕಮಾಂಡ್‌ನಿಂದ ನೋಟಿಸ್ ನನಗಿನ್ನೂ ಬಂದಿಲ್ಲ, ನೋಟಿಸ್‌ ಕೈಗೆ ಸಿಕ್ಕಿದ ಮೇಲೆ ಅದರಲ್ಲಿರುವುದು ಗೊತ್ತಾಗುತ್ತದೆ ಎಂದು ಬಿಜೆಪಿ ಹೈಕಮಾಂಡ್ ನಿಂದ ನೋಟಿಸ್ ವಿಚಾರಕ್ಕೆ ಸಂಬಂಧಿಸಿದಂತೆ ಏನು ಕೊಟ್ಟಿದ್ದಾರೆ ಅನ್ನುವುದು ಗೊತ್ತಾಗುತ್ತದೆ ಎಂದು ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌
ಬೆಂಗಳೂರಿನಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.
ನಾನು ಪಕ್ಷದ ವಿರುದ್ಧ ಮಾತನಾಡಿಲ್ಲ, ರಾಷ್ಟ್ರೀಯ ನಾಯಕರ ವಿರುದ್ಧ ಹೇಳಿಕೆ ಕೊಟ್ಟಿಲ್ಲ. ನಾನು‌ ಸತ್ಯ ಹೇಳಿದ್ದೇನೆ. ಹೀಗಾಗಿ ನಾನು ಹೆದರವುದೂ ಇಲ್ಲ. ನೋಟಿಸ್‌ನಿಂದ ನನಗೆ ಏನೂ ಅನ್ನಿಸಿಲ್ಲ ಎಂದ ಅವರು, ನಾನು ಕ್ಷಮೆಯನ್ನೂ ಕೇಳುವವನಲ್ಲ ಎಂದರು.
ನನ್ನ ವಿಷಯದಲ್ಲಿ ಮಾಧ್ಯಮಗಳೇ ತಿರುಚಿ ವರದಿ ಮಾಡಿರಬಹುದು ಎಂದ ಅವರು, ನೋಟಿಸ್ ಬಂದ ನಂತರ ಸೂಕ್ತ ಉತ್ತರನೀಡುತ್ತೇನೆ. ಒಬ್ಬನೇ ನಡೆ ಮುಂದೆ ಜಗತ್ತು ನಿನ್ನತ್ತ ತಿರುಗುತ್ತದೆ ಎಂದು ದಿ. ವಾಜಪೇಯಿಯವರು ಹೇಳಿದ್ದರು. ನಾನು ಅವರ ಶಿಷ್ಯ. ಅದೇ ರೀತಿ ಒಂಟಿಯಾಗಿ ನಡೆದಿದ್ದೇನೆ, ನನಗೆ ಭಗವಂತ ಇದ್ದಾನೆ. ಅವನ ಮೇಲೆ ಭರವಸೆ ಇದೆ ಎಂದು ಯತ್ನಾಳ್‌ ವಿಶ್ವಾಸ ವ್ಯಕ್ತಪಡಿಸಿದರು.

advertisement

ಕ್ಷಣ ಕ್ಷಣದ ಸುದ್ದಿಗಳು ಮತ್ತು ಮಾಹಿತಿಗಾಗಿ
ವಾಟ್ಸಾಪ್ ಗ್ರೂಪ್ ಸೇರಿ
ಫೇಸ್ ಬುಕ್ ಫಾಲೋ ಮಾಡಿ
ಗೂಗಲ್ ನ್ಯೂಸ್ ನಲ್ಲಿ ಸೇರಿ
ಟ್ವಿಟರ್ ನಲ್ಲಿ ಫಾಲೋ ಮಾಡಿ
advertisement
ಐಸಿಎಸ್ ಮಹೇಶ ಪಿಯು ಸೈನ್ಸ್ ಕಾಲೇಜು, ಧಾರವಾಡ
ಅಡ್ಮಿಶನ್ ಗಾಗಿ ಇಂದೇ ಕರೆ ಮಾಡಿ
9535127775 / 9901837775 / 6364528715 / 08362775155 / https://icsmpucollege.com/
advertisement

ನಿಮ್ಮ ಕಾಮೆಂಟ್ ಬರೆಯಿರಿ